narad jayanthi 
ಕಲಬುರಗಿ

ಸುದ್ದಿ ವಿಷಯದ ಪರಿಜ್ಞಾನಿನಾರದ: ಆದ್ಯ ಪತ್ರಕರ್ತನ ಜಯಂತಿ

ಕಲಬುರಗಿ: ಮೂರು ಲೋಕಕ್ಕೆ ಸಮಾಚಾರ ತಲುಪಿಸುತ್ತಿದ್ದ ನಾರದರನ್ನು ಪ್ರಸ್ತುತ ತಪು$್ಪ ರೀತಿಯಲ್ಲಿ ಬಿಂಬಿಸುತ್ತಿದ್ದು, ಈ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ನಾರದರು ಧರ್ಮ ರಕ್ಷಣೆ ಮಾಡುತ್ತಿದ್ದರು, ಯಾರಿಗೆ ಯಾವ ಸಮಯದಲ್ಲಿ ಯಾವ ವಿಷಯ ಮುಟ್ಟಿಸಬೇಕು ಎಂಬ ಪರಿಜ್ಞಾನ ಇತ್ತು ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ ಕರ್ನಾಟಕ ಉತ್ತರ ಹಾಗೂ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಕಟ್ಟಡ ಸಭಾಂಗಣದಲ್ಲಿ ಕೇಶವ ಸೇವಾ ಸಮಿತಿ ಕಲಬುರಗಿಯಿಂದ ಆದ್ಯ ಪತ್ರಕರ್ತ ದೇವಖುಷಿ ನಾರದ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿ, ಕಂಸನೂ ನಾರದರ ಮಾತನ್ನು ಕೇಳುತ್ತಿದ್ದ. ನಾರದರು ಜಗದ ಹಿತವನ್ನು ಬಯಸಿ ಧರ್ಮವನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದರು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂದ 2ನೇ ಸರಸಂಚಾಲಕ ಡಾ.ಮಾಧವರಾವ್​ ಗೋಳ್ವಲ್ಕರ್​ ಅವರು 1969ರಲ್ಲೇ ಅಸ್ಪ-----ೃಷ್ಯತೆ ಖಂಡಿಸಿ, ಬುಡಸಮೇತೆ ಕಿತ್ತೊಗೆಯುವ ಸಂಕಲ್ಪ ಮಾಡಿದ್ದರು. ಡಾ.ಬಿ.ಆರ್​.ಅಂಬೇಡ್ಕರ್​ ಅವರ ಹೋರಾಟದ ಪರಿ ಸ್ಮರಿಸಿ, ಅಸ್ಮ$ಷ್ಯತೆಯನ್ನು ದೂರ ಮಾಡಬೇಕು. ಆಗ ಮಾತ್ರ ನಾವೆಲ್ಲರೂ ಹಿಂದು ಎಂಬ ಭಾವ ಜಾಗೃತವಾಗಲಿದೆ ಎಂದರು.
ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಅವಂಟಿ, ಸಂಜೀವ ರೆಡ್ಡಿ, ನಾಗನಾಥ ಯಾದಗಿರಿ ಮಾತನಾಡಿದರು. ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್​, ಮಹಾದೇವಯ್ಯ ಕರದಳ್ಳಿ, ಭರತ ಖಮಿತಕರ್​ ಇತರರಿದ್ದರು. ಮುರಳಿ ಪೂಜಾರ ವೈಯಕ್ತಿಕ ಗೀತೆ ಹಾಡಿದರು.
ರಾಷ್ಟ್ರಭಾಷೆ ಆಗಬೇಕು
ಭಾರತದಲ್ಲಿ ಜನಿಸಿದ 22 ಭಾಷೆ ರಾಷ್ಟ್ರೀಯ ಭಾಷೆಗಳೇ. ಆದರೆ ಒಂದು ಭಾಷೆ ಸಂಪರ್ಕ ಭಾಷೆ ಆಗಬೇಕು. 60 ಕೋಟಿ ಜನ ಮಾತಾಡುವ ಹಿಂದಿ, 5 ಕೋಟಿ ಮಾತನಾಡುವ ಕನ್ನಡ, 9 ಕೋಟಿ ತೆಲುಗು, 10 ಕೋಟಿ ಮರಾಠಿ ಸೇರಿ ಇವುಗಳಲ್ಲಿ ಯಾವುದಾದರೂ ಒಂದು ರಾಷ್ಟ್ರ ಭಾಷೆ ಆಗಬೇಕಲ್ಲವೇ? ಹಿಂದಿ ಹೇರಿಕೆ ಎಂದಾದರೆ ಇಂಗ್ಲಿಷ್​ ಏನು?. ಕನ್ನಡ ಹಿಂದಿ ಜಗಳದ ಮಧ್ಯೆ ಮೂರನೇಯವರಿಗೆ ಜಾಗ ನೀಡುವುದು ಸಲ್ಲದು. ನಮ್ಮ ನೆಲದ ಭಾಷೆ ಮುನ್ನೆಲೆಗೆ ಬರಬೇಕು ಎಂದು ಅರುಣಕುಮಾರ ಹೇಳಿದರು.