ಕಲಬುರಗಿ: ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ೨೦.೦೮ ಲಕ್ಷ ರೂ. ಮೌಲ್ಯದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಮಂಗಳವಾರ ನಗರ ಪೊಲೀಸರು ನಾಶಪಡಿಸಿದರು.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ೨೨ ಪ್ರಕರಣಕ್ಕೆ ಸಂಬಂಧಿಸಿದ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು. ೧೭.೩೪ ಲಕ್ಷ ರೂ. ಮೌಲ್ಯದ ೧೭ ಕೆ.ಜಿ ಗಾಂಜಾ, ೧೪,೯೭೦ ನೆಟ್ರಾಜೆಪಾಂ ಎನ್ಆರ್ಎಕ್ಸ್ ಮಾತ್ರೆಗಳು ಹಾಗೂ ೨.೭೪ ಲಕ್ಷ ರೂ. ಮೌಲ್ಯದ ೧೮.೭೩ ಗ್ರಾಂ ಎಂಡಿಎಂಎ ಡ್ರಗ್ಸ್ ಸೇರಿವೆ.
ಚಿತ್ತಾಪುರ ತಾಲೂಕಿನ ಎಸಿಸಿ ಸಿಮೆಂಟ್ ಫ್ಯಾಕ್ಟರಿಯ ಕಿಲ್ನ್ನಲ್ಲಿ ಪರಿಸರ ಅಧಿಕಾರಿಗಳು ಹಾಗೂ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಈ ಎಲ್ಲ ವಸ್ತುಗಳನ್ನು ಸುಟ್ಟು ಭಸ್ಮಗೊಳಿಸಲಾಯಿತು. ಮಾದಕ ಮುಕ್ತ ಸಮಾಜ ನಿಮರ‍್ಣಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಪಿ ಪ್ರವಿಣ ನಾಯಕ, ಎಸಿಪಿ ಜೇಮ್ಸ್ ಮಿನೇಜಸ್, ಎಸಿಪಿ ಎಚ್.ಎಂ.ಡಿ.ರ‍್ದಾರ್, ಆರ್ಪಿಐ ಮಹಾದೇವ ಪಾಟೀಲ್ ಸೇರಿ ಸಿಬ್ಬಂದಿ ಇದ್ದರು.