ಕಲಬುರಗಿ: ಹಳೆಯ ಬೇರು ಹೊಸ ಚಿಗುರು ಎನ್ನುವಂತೆ ಹಿರಿಯರು ಕಟ್ಟಿದ ಕೆಕೆಸಿಸಿಐ ಸಂಸ್ಥೆಯನ್ನು ಇಂದು ಯುವಕರು ಬೆಳೆಸುತ್ತಿದ್ದಾರೆ. 60 ವಸಂತ ಪೂರೈಸಿರುವ ಸಂಸ್ಥೆ ಮುಂದಿನ 100 ವರ್ಷದ ಯೋಜನೆ ರೂಪಿಸಿ ಇನ್ನೂ ಎತ್ತರಕ್ಕೆ ಬೆಳೆಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಶುಭ ಹಾರೈಸಿದರು.
ಸೂಪರ್ ಮಾರ್ಕೆಟ್ನ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಕೆಸಿಸಿಐ) ಸಭಾಂಗಣದಲ್ಲಿ ಸಂಸ್ಥೆಯ 60ನೇ ವರ್ಷದ ವಜ್ರ ಮಹೋತ್ಸವ ನಿಮಿತ್ತ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಂಡಿಯಾ ಪೋಸ್ಟ್ ಹೊರತಂದ ವಿಶೇಷ ಸ್ಮರಣಾರ್ಥ ಅಂಚೆ ಕವರ್ ಹಾಗೂ ವಜ್ರ ಮಹೋತ್ಸವದ ಟೀಸರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂಸ್ಥೆ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ ಕಲ್ಪಿಸಿದೆ. ಕೇವಲ ವ್ಯಾಪಾರ, ಉದ್ಯಮಕ್ಕೆ ಸೀಮಿತವಾಗದೆ ಈ ಭಾಗದ ಸಾಮಾಜಿಕ ಬೆಳವಣಿಗೆಗೂ ಉತ್ತಮ ಕೊಡುಗೆ ನೀಡಿದೆ. ಕಲ್ಯಾಣ ಕರ್ನಾಟಕದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂಜ್ಯ ಚಿ.ದೊಡ್ಡಪ್ಪ ಅಪ್ಪಗೆ ಸಂಸ್ಥೆಯ ಗೌರವ ಸದಸ್ಯತ್ವ ನೀಡಿರುವುದು ಶರಣ ಸಂಸ್ಥೆಗೆ ಸಂದ ಗೌರವ. ಕಕ ಭಾಗವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ಪ್ರೇರಣೆ ನೀಡಿದಂತಾಗಿದೆ. ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಶರಣರು ಸದಾ ಆಶೀರ್ವಾದ ನೀಡಲಿ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ಸಂಸ್ಥೆಯ ಈ ಸಮಾರಂಭ ನಿಜಕ್ಕೂ ಅದ್ಭುತ ಳಿಗೆ. ಸಾರ್ಥಕ 60 ವರ್ಷ ಪೂರೈಸಿ ಮುನ್ನಡೆಯುತ್ತಿದೆ. ಅನೇಕ ಟಾನುಟಿ ಉದ್ಯಮಿಗಳು ಈ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಯುವಕರು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಮುಂದಾಗಬೇಕು. ಶರಣರ ಆಶೀರ್ವಾದದಿಂದ ಉತ್ತುಂಗದತ್ತ ಸಾಗಲಿ ಎಂದು ಶುಭ ಕೋರಿದರು.
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಅವರಿಗೆ ಕೆಕೆಸಿಸಿಐ ಗೌರವ ಸದಸ್ಯತ್ವ ಪ್ರದಾನ ಮಾಡಿ ಸತ್ಕರಿಸಲಾಯಿತು. ಕಲಬುರಗಿ ಅಂಚೆ ಅಧೀಕ ರವೀಂದ್ರ ಬಿ.ಎಲ್ ಮಾತನಾಡಿದರು. ಕೆಕೆಸಿಸಿಐ ಅಧ್ಯ ಶರಣಬಸಪ್ಪ ಪಪ್ಪಾ ಅಧ್ಯತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್, ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕೆ.ಇಂದುಮತಿ, ಕೆಕೆಸಿಸಿಐ ಮಾಜಿ ಅಧ್ಯರಾದ ಶಶಿಕಾಂತ ಪಾಟೀಲ್, ಉಮಾಕಾಂತ ನಿಗ್ಗುಡಗಿ, ಪ್ರಶಾಂತ ಮಾನಕರ್ ಇತರರಿದ್ದರು. ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ನಿರೂಪಣೆ ಮಾಡಿದರು.
ಕೆಕೆಸಿಸಿಐ ಗೌರವ ಸದಸ್ಯತ್ವ ತಮಗೆ ನೀಡಿದ್ದು ಇಡೀ ಶರಣಬಸವೇಶ್ವರ ಸಂಸ್ಥಾನಕ್ಕೆ ನೀಡಿದಂತಾಗಿದೆ. ಸಂಸ್ಥೆಯ ಪರಂಪರೆ ಮತ್ತು ಶಿಕ್ಷಣ ದಾಸೋಹಕ್ಕೆ ಸಂಘದ ಗೌರವ ಇದಾಗಿದೆ. ಕೆಕೆಸಿಸಿಐ ಎಲ್ಲ ಕಾರ್ಯಗಳಿಗೆ ಶರಣರ ಆಶೀರ್ವಾದ ಸದಾ ಇರಲಿದೆ.> ಪೂಜ್ಯ ಚಿ.ದೊಡ್ಡಪ್ಪ ಅಪ್ಪ 9ನೇ ಪೀಠಾಧಿಪತಿ, ಶರಣಬಸವೇಶ್ವರ ಸಂಸ್ಥಾನ