ತೊನಸನಳ್ಳಿ(ಎಸ್​) ಗ್ರಾಮದ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದಲ್ಲಿ ಶ್ರೀ ಮಾಣಿಕೇಶ್ವರಿ ಜನಜಾಗೃತಿ, ಧರ್ಮಸಂದೇಶ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಗೋರಖನಾಥ ಶಖಾಪುರ ಉದ್ಘಾಟಿಸಿದರು. ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ, ಶ್ರೀ ಡಾ.ಸೌರಭ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಡಾ.ಚನ್ನಬಸವ ಶರಣರು ಇತರರಿದ್ದರು.  
ಕಲಬುರಗಿ

ಭಗವಂತ ಸಕಲರಿಗೆ ಅನುಗ್ರಹ ನೀಡಲಿ

ಪೀಠಾಧಿಪತಿ ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ ನುಡಿ

ತೊನಸನಳ್ಳಿಯಲ್ಲಿ ಮಾಣಿಕೇಶ್ವರಿ ಜನಜಾಗೃತಿ ಕಾರ್ಯಕ್ರಮ

ಶಹಾಬಾದ್: ​ತೋನಸನಹಳ್ಳಿ ಭಾವೈಕ್ಯತೆ ಕ್ಷೇತ್ರವಾಗಿದ್ದು, ನಂಬಿ ಬಂದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷದಂತಿದೆ. ಶ್ರದ್ಧಾ, ಭಕ್ತಿಯಿಂದ ದೇವರನ್ನು ಪೂಜಿಸಿದರೆ ಸಮೃದ್ಧಿ ಲಭಿಸುತ್ತದೆ ಎಂದು ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ ಹೇಳಿದರು.

ತೊನಸನಳ್ಳಿ (ಎಸ್​) ಗ್ರಾಮದ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಮಹಾಮನೆಯಲ್ಲಿ ಮಂಗಳವಾರ ಶ್ರಾವಣ ಸಮಾರೋಪ ನಿಮಿತ್ತ ಹಮ್ಮಿಕೊಂಡಿದ್ದ ಮನೆ, ಮನದಲ್ಲಿ ಶ್ರೀ ಮಾಣಿಕೇಶ್ವರ ಜನಜಾಗೃತಿ, ಧರ್ಮ ಸಂದೇಶ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಭಗವಂತ ಸಕಲರಿಗೆ ಅನುಗ್ರಹ ನೀಡಲಿ ಎಂದು ಪ್ರಾರ್ಥಿಸಿದರು.

ಕಿರಿಯ ಶ್ರೀ ಡಾ.ಸೌರಭ ಸ್ವಾಮೀಜಿ, ಪೇಠಶಿರೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಯರಗೋಳದ ಶ್ರೀ ಸಂಗಮನಾಥ ದೇವರು, ಮಾಲಗತ್ತಿಯ ಶ್ರೀ ಡಾ.ಚನ್ನಬಸವ ಶರಣರು, ಹಡಪದ ಸಮಾಜದ ಶ್ರೀ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಬಿಜೆಪಿ ಮುಖಂಡ ಗೋರಖನಾಥ ಶಖಾಪುರೆ ಉದ್ಘಾಟಿಸಿದರು. ಪ್ರಮುಖರಾದ ನಿಂಗಪ್ಪ ಹುಳಗೋಳ, ದೇವಿಂದ್ರ ಕಾರೊಳ್ಳಿ, ಶಂಕರ ತಳವಾರ, ನಿಂಗಣ್ಣಗೌಡ ಮಾಲಿಪಾಟೀಲ್​, ಮಲ್ಲಿಕಾರ್ಜುನ ಗೊಳೇದ, ಶಿವಶರಣಪ್ಪ ಪೊಲೀಸ್​ ಪಾಟೀಲ್​, ಸಂಗಣ್ಣ ಬುಟನಾಳ, ವಿರೇಶ ಗೊಳೇಚ, ನಾಗೇಂದ್ರ ಡಿಗ್ಗಿ, ನಾಗೇಂದ್ರ ನಾಟೀಕಾರ, ಮಹಾಲಿಂಗ ಮದ್ರಕಿ, ರಾಮಣ್ಣ ಮಂಗಳೂರ ಇತರರಿದ್ದರು.

ರವೀಂದ್ರ ನೀಲಾ, ಧೂಳಪ್ಪ ಅವಂಟಿ, ಶಿವಶರಣಪ್ಪ ಹೊನ್ನಾ, ಹಣಮಂತ ವೇವಿನಗಡಿ, ಮಂಜುನಾಥ ವಿಶ್ವಕರ್ಮ, ಮಹೇಶರ ನರಬೋಳಿ, ಮಹಾಂತ ನರಬೋಳಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈಶ್ವರ ಮುಗುಳನಾಗಾವಿ ನಿರೂಪಣೆ ಮಾಡಿದರು.