ಚಿತ್ತಾಪುರದಲ್ಲಿ ಬಸವ ಜಯಂತ್ಯುತ್ಸವದ ಪೋಸ್ಟರ್ ಅನ್ನು ಉತ್ಸವ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ ಬಿಡುಗಡೆ ಮಾಡಿದರು. ನಾಗರಾಜ ಭಂಕಲಗಿ, ಅಶೋಕ್ ನಿಪ್ಪಾಣಿ, ಆನಂದ ಪಾಟೀಲ್ ನರಿಬೋಳ, ಚಂದ್ರಶೇಖರ ಉಟಗೂರ ಇತರರಿದ್ದರು.
- ಬಸವರಾಜ ಪಾಟೀಲ್ ಮಾಹಿತಿ
- ಚಿತ್ತಾಪುರದಲ್ಲಿ ಬಸವ ಜಯಂತಿ ಪೋಸ್ಟರ್ ಬಿಡುಗಡೆ
ಚಿತ್ತಾಪುರ: ಬಸವೇಶ್ವರ ವೃತ್ತ ಹಾಗೂ ಎಪಿಎಂಸಿ ಆವರಣದಲ್ಲಿ ಏ.20ರಂದು ಬಸವ ಜಯಂತಿ ಹಾಗೂ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತ್ಯುತ್ಸವ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಬೆಳಗುಂಪಾ ಹೇಳಿದರು.
ಪಟ್ಟಣದಲ್ಲಿ ಗುರುವಾರ ಬಸವ ಜಯಂತ್ಯುತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಹಾಗೂ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಕಲಬುರಗಿಯ ಮೆಡಿಕೇರ್ ಆಸ್ಪತ್ರೆ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ತಾಲೂಕಿನ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಜಗಜ್ಯೋತಿ ಬಸವಣ್ಣ ಅವರ ತತ್ವಗಳು ಒಂದು ಜಾತಿಗೆ ಸೀಮಿತವಲ್ಲ. ಶ್ರಮ ಸಂಸತಿ ಮತ್ತು ಸಮಾನತೆ ಸಂದೇಶ ಸಾರಿದ ಬಸವಣ್ಣ ಅವರ ಜಯಂತಿಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಅಶೋಕ್ ನಿಪ್ಪಾಣಿ, ಆನಂದ ಪಾಟೀಲ್ ನರಿಬೋಳ, ಚಂದ್ರಶೇಖರ ಉಟಗೂರ, ಅನೀಲ್ ವಡ್ಡಡಗಿ, ವಿಶ್ವಾರಾಧ್ಯ ಪಾಟೀಲ್ ಕರದಾಳ, ನೇಹಲ್ ಪಾಟೀಲ್ ಬೆಳಗುಂಪಾ, ಶ್ರೀಮಂತ್ ಕುಂಬಾರ, ಅಂಬರೀಶ ಸುಲೇಗಾಂವ್, ಮಹಾದೇವ ಅಂಗಡಿ, ರಾಚಪ್ಪ ಬೊಮ್ಮನಳ್ಳಿ, ಬಸವರಾಜ ಸಂಕನೂರ್, ರಮೇಶ್ ಕಾಳನೂರ ಇತರರಿದ್ದರು.