- ಮಗುವನ್ನು ಭಿಕ್ಷೆ ಬೇಡಲು ಬಳಕೆ ಮಾಡಿದ್ದ ಖತರ್ನಾಕ್ ಅಪರಾಧಿ
- ಚಿಂಚೋಳಿಯಿಂದ ಹೈದರಾಬಾದ್ಗೆ ಒಯ್ದಿದ್ದ ಆಘಂತುಕ
ಕಲಬುರಗಿ: ಬಿಸ್ಕಟ್ ಕೊಡಿಸುತ್ತೇನೆ ಎಂದು ಒಂಬತ್ತು ತಿಂಗಳ ಮಗುವನ್ನು ಅಪಹರಿಸಿಕೊಂಡು ಹೋದ ಆರೋಪಿ ಇಮಾಮ್ ಶಹಾನಿಗೆ ಮೂರು ವರ್ಷ ಕಾರಾಗೃಹ ಶಿೆ, ಐದು ಸಾವಿರ ರೂ. ದಂಡ ವಿಧಿಸಿ ಸೇಡಂ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕರಣ್ ಗುಜ್ಜಾರ್ ಆದೇಶಿಸಿದ್ದಾರೆ.
2023 ಜೂ.3ರಂದು ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವನ್ನು ಇಮಾಮ್ ಶಹಾನು ಬಿಸ್ಕಟ್ ಕೊಡಿಸುತ್ತೇನೆ ಎಂದು ಕರೆದೊಯ್ದಿದ್ದ. ಸಂಬಂಧಿಕನೇ ಆಗಿದ್ದರಿಂದ ಮಗುವಿನ ತಂದೆ, ತಾಯಿ ಸುಮ್ಮನಿದ್ದರು. ಆದರೆ ಬಹುಕಾಲದಿಂದ ವಾಪಸ್ ಬಾರದೇ ಇರುವುದನ್ನು ಕಂಡು ಹುಡುಕಾಡಿದ್ದು, ಮಗು ಪತ್ತೆಯಾಗಿರಲಿಲ್ಲ. ಈ ಕುರಿತು ಮುಧೋಳ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಭಿಕ್ಷೆ ಬೇಡಲು ಬಳಕೆ: ಇಮಾಮ್ ಶಹಾನು ಅಪಹರಿಸಿಕೊಂಡು ಹೋದ 9 ತಿಂಗಳ ಮಗುವನ್ನು ತೆಲಂಗಾಣದ ಹೈದರಾಬಾದ್ನಲ್ಲಿ ಮಗುವನ್ನು ತೋರಿಸಿ, ಭಿೆ ಬೇಡುವುದನ್ನು ಮಾಡುತ್ತಿದ್ದಾಗ ಪೊಲೀಸರು, ಮಗುವಿನ ತಂದೆ, ತಾಯಿ ಕಣ್ಣಿಗೆ ಬಿದಿದ್ದಾನೆ. ತಕ್ಷಣ ಮಗುವನ್ನು ಬಿಟ್ಟು, ಓಡಿ ಹೋಗಿದ್ದ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದಾಗ ಹೈದರಾಬಾದ್ನ ಮಸೀದಿಗಳ ಎದುರು ನಿಂತು ಮಗುವನ್ನು ತೋರಿಸಿ, ಭಿೆ ಬೇಡುವುದಕ್ಕಾಗಿ ಅಪಹರಿಸಿದ್ದಾಗಿ ತಿಳಿಸಿದ್ದ. ಈ ಕುರಿತು ತನಿಖಾಧಿಕಾರಿ ದೋಷಾರೋಪಣೆ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಶಿೆ ವಿಧಿಸಿ, ಆದೇಶಿಸಿದೆ. ಸರ್ಕಾರದ ಪರ ಕೆ.ಆರ್.ನಾಗರಾಜ್ ವಾದಿಸಿದ್ದರು.