ಕಲಬುರಗಿ ಸಿಯುಕೆನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕಲಿಕೆ, ಟಾಟಾ ಟ್ರಸ್ಟ್ ಜತೆಗೆ ನಡೆದ ಒಡಂಬಡಿಕೆ ಪತ್ರವನ್ನು ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಶಿವಕುಮಾರ ವಿನಿಮಯ ಮಾಡಿಕೊಂಡರು. ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕ ಡಾ.ಮಯೂರ ಪೂಜಾರ್ ಇತರರಿದ್ದರು.
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅನಿಸಿಕೆ
- ಸಿಯುಕೆ ಮತ್ತು ಕಲಿಕೆ ಟಾಟಾ ಟ್ರಸ್ಟ್ ಮಧ್ಯೆ ಒಡಂಬಡಿಕೆ
ಕಲಬುರಗಿ: ಮಕ್ಕಳ ಬೆಳವಣಿಗೆಗೆ ಆರಂಭಿಕ ಹಂತದ ಶಿಕ್ಷಣ ತುಂಬಾ ಪ್ರಮುಖ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಸಿಯುಕೆಯ ಶಿಕ್ಷಣ ಮತ್ತು ತರಬೇತಿ ನಿಕಾಯ ಗುರುವಾರ ಆಯೋಜಿಸಿದ್ದ ಕಲಿಕೆ, ಟಾಟಾ ಟ್ರಸ್ಟ್ ಜತೆಗಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕುವ ಮತ್ತು ಕೊಪ್ಪಳ, ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಪಾಲಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿ ಮಕ್ಕಳ ಶಿಕ್ಷಣವು ತುಂಬಾ ಸಂಕೀರ್ಣವಾಗಿದ್ದು, ವಿಶೇಷ ಗಮನ ನೀಡಬೇಕಾಗುತ್ತದೆ. ಎನ್‌ಇಪಿ ಆರಂಭಿಕ ಹಂತದ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯ, ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಶಾಲೆಗಳು ಮಕ್ಕಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಒಪ್ಪಂದದಡಿ ತೆಗೆದುಕೊಳ್ಳಲಾದ ಎಲ್ಲಾ ಉಪಕ್ರಮಗಳಿಗೆ ಸಿಯುಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಪರಿವರ್ತಿಸಲು ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿಮ್ಮೊಂದಿಗೆ ಕೈಜೋಡಿಸುತ್ತಾರೆ. ಅದಕ್ಕಾಗಿ ನೀವು ಹಳ್ಳಿಗಳಲ್ಲಿ ನವೀನ, ಆಸಕ್ತಿದಾಯಕ ಪಠ್ಯಕ್ರಮ ಮತ್ತು ಕಲಿಕಾ ಪರಿಸರ ವ್ಯವಸ್ಥೆ ರೂಪಿಸಬೇಕು. ಶಿಕ್ಷಣ ಅಭಿವೃದ್ಧಿಗೊಂಡರೆ ನಮ್ಮ ಗ್ರಾಮಗಳು ಅಭಿವೃದ್ಧಿ ಹೊಂದುವುದರ ಜತೆಗೆ ವಿಕಾಸ ಭಾರತಕ್ಕೆ ಕೊಡುಗೆ ನೀಡುತ್ತವೆ ಎಂದು ಹೇಳಿದರು.
ಕಲಿಕೆ, ಟಾಟಾ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಶಿವಕುಮಾರ್ ಡಿ ಮಾತನಾಡಿ, ಟಾಟಾ ಟ್ರಸ್ಟ್ ಕಳೆದ 120 ವರ್ಷಗಳಿಂದ ಭಾರತದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಒಂದು ಲೋಕೋಪಕಾರಿ ಸಂಸ್ಥೆ. ಕಲಿಕೆ ಕಾರ್ಯಕ್ರಮದ ಮುಖ್ಯ ಉz್ದೆÃಶವೆಂದರೆ ಆರಂಭಿಕ ಮತ್ತು ಪ್ರಾಥಮಿಕ ಹಂತದ ಗುಣಾತ್ಮಕ ಕಲಿಕೆ, ಆರಂಭಿಕ ಮತ್ತು ಪ್ರಾಥಮಿಕ ಹಂತದ ಕಲಿಕೆಯಲ್ಲಿ ಹಲವು ಸವಾಲುಗಳಿವೆ ಎಂದು ಹೇಳಿದರು.
ಅಲ್ಪಾವಧಿ ಕೋರ್ಸ್ ಅಭಿವೃದ್ಧಿ: ಗ್ರಾಮ ಪಂಚಾಯಿತಿ ಗ್ರಂಥಪಾಲಕರು ಗ್ರಂಥಾಲಯ ವಿಜ್ಞಾನದಲ್ಲಿ ಔಪಚಾರಿಕ ತರಬೇತಿ ಮತ್ತು ಪ್ರಮಾಣಪತ್ರ ಹೊಂದಿಲ್ಲ. ಆದ್ದರಿಂದ ಗ್ರಂಥಾಲಯ ನಿರ್ವಹಣಾ ಕೌಶಲ ಅಭಿವೃದ್ಧಿಪಡಿಸಲು ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್ ಅಭಿವೃದ್ಧಿಪಡಿಸಿz್ದÉÃವೆ. ಇದು ಗ್ರಾಮೀಣ ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿ ಮಾಡುತ್ತದೆ. ಎರಡು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಫಲಿತಾಂಶದ ಆಧಾರದ ಮೇಲೆ ಈ ಕಾರ್ಯಕ್ರಮ ಇತರ ಜಿಲ್ಲೆಗಳಿಗೆ ವಿಸ್ತರಿಸಲಿz್ದÉÃವೆ. ಕರ್ನಾಟಕ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಇತರ ರಾಜ್ಯಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಮಾತನಾಡಿ, ಕಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಅತ್ಯಂತ ಕೆಳಮಟ್ಟದಲ್ಲಿವೆ. ಎಲ್ಲಾ ಹಂತಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಕಲಿಕಾ ಪರಿಸರ ವ್ಯವಸ್ಥೆಯ ಕೊರತೆಯೇ ಮೂಲ ಕಾರಣ. ಹೀಗಾಗಿ ಉತ್ತಮ ಕಲಿಕಾ ಪರಿಸರ ವ್ಯವಸ್ಥೆ ರಚಿಸಲು ನಾವು ಶ್ರಮಿಸಬೇಕಾಗಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ತರಬೇತಿ ಮತ್ತು ಅಭಿವೃದ್ಧಿಯ ಮೂಲಕ ಅವುಗಳನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು.
ಜಂಟಿ ಸಂಶೋಧನೆ: ಕಾರ್ಯಕ್ರಮ ಸಂಯೋಜಕ ಡಾ.ಮಯೂರ ಪೂಜಾರ ಒಪ್ಪಂದದ ಕುರಿತು ಮಾತನಾಡಿ, ಮಕ್ಕಳ ಸ್ನೇಹಿ ಗ್ರಂಥಾಲಯಗಳ ಕುರಿತು ಪ್ರಮಾಣಪತ್ರ ಕೋರ್ಸ್ ಪ್ರಾರಂಭಿಸಲು ಮತ್ತು ಕರ್ನಾಟಕದಲ್ಲಿರುವ ಸುಮಾರು 5000 ಗ್ರಾಮ ಪಂಚಾಯಿತಿ ಗ್ರಂಥಪಾಲಕರಿಗೆ ತರಬೇತಿ ನೀಡಲು, ಬೋಧನೆ ಮತ್ತು ಕಲಿಕೆಯ ವಿಧಾನಗಳ ಉತ್ತಮ ಅಭ್ಯಾಸ ಅಭಿವೃದ್ಧಿಪಡಿಸಲು ಜಂಟಿ ಸಂಶೋಧನೆ ನಡೆಸುವುದು, ಪರಸ್ಪರ ಕಲಿಕೆಗಾಗಿ ಟಾಟಾ ಟ್ರಸ್ಟ್ ಮತ್ತು ಸಿಯುಕೆ ನಡುವೆ ಅಧ್ಯಾಪಕರ ವಿನಿಮಯ ಮತ್ತು ಸಿಯುಕೆಯ ಬಿಇಡಿ ಮತ್ತು ಎಂಇಡಿ ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶ ಒದಗಿಸಲು ಈ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಪಾಲಕರ ತರಬೇತಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಶಿಕ್ಷಣ ನಿಕಾಯದ ಡೀನ್ ಪ್ರೊ.ಜಿ.ಆರ್.ಅಂಗಡಿ ಸ್ವಾಗತಿಸಿದರು. ಪಾರ್ವತಿ ಮತ್ತು ತಾನಿಯಾ ನಿರೂಪಿಸಿದರು. ಡಾ.ನಿಶಾ ಪ್ರಜಾಪತಿ ವಂದಿಸಿದರು. ಟಾಟಾ ಟ್ರಸ್ಟ್ನ ಶಿವಕುಮಾರ ಯಾದವ್, ಗಿರೀಶ್ ಎಚ್, ಸಿಯುಕೆಯ ಡಾ.ತಿಯಾಗೊ, ಡಾ.ಗುರು ಬಾಗೇವಾಡಿ, ಡಾ.ಪಿ.ಎಸ್.ಕಟ್ಟಿಮನಿ, ಡಾ.ಅಖಿಲೇಶ, ಡಾ.ಬುಚಿ ರೆಡ್ಡಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಪಾಲಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪಠ್ಯ ಪುಸ್ತಕ ಹೊರತುಪಡಿಸಿ ಬೇರೆ ಯಾವುದೇ ಕಲಿಕೆ ಮೂಲವಿಲ್ಲ. ಈ ಹಂತದಲ್ಲಿ ಕಲಿಕಾ ಪ್ರಕ್ರಿಯೆಗೆ ಗ್ರಂಥಾಲಯಗಳು ಅತ್ಯುತ್ತಮ ಪೂರಕ ಮೂಲಗಳಲ್ಲಿ ಒಂದಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಲಿಕೆ ಆಸಕ್ತಿದಾಯಕವಾಗಿಸಲು ನವೀನ ಪುಸ್ತಕ ರಚಿಸಿz್ದÉÃವೆ. ಮಕ್ಕಳ ಕಲಿಕೆಗೆ ಇದು ಪೂರಕವಾಗಲಿದೆ.ಶಿವಕುಮಾರ್.ಡಿ,ಕಾರ್ಯನಿರ್ವಾಹಕ ನಿರ್ದೇಶಕ, ಕಲಿಕೆ ಟಾಟಾ ಟ್ರಸ್ಟ್.