ಚಿಂಚೋಳಿ: ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಹೆಣ್ಣು ಮಕ್ಕಳು ಎಲ್ಲ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನದೊಂದಿಗೆ ಸಾಧನೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಆಟದ ಹಕ್ಕು- ಸಮಾನ ಹಕ್ಕು ಕ್ರೀಡಾಕೂಟದಲ್ಲಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಮೊದಲು ಎಲ್ಲರೂ ಭಾಗಿಯಾಗುವುದನ್ನು ರೂಢಿಸಿಕೊಳ್ಳಬೇಕು. ಸೋತವರು ಎದೆಗುಂದಬಾರದು, ಶ್ರೇಷ್ಠ ಪರಿಶ್ರಮದೊಂದಿಗೆ ಗೆಲುವಿನತ್ತ ಸಾಗಬೇಕು ಎಂದು ಸಲಹೆ ನೀಡಿದರು.
ತಾಪಂ ಇಒ ಸಂತೋಷಕುಮಾರ ಚವ್ಹಾಣ್, ಟಿಎಚ್ಒ ಸೈಯದ್ ಲತೀಫ್, ಸಿ ಶಕ್ತಿ ಒಕ್ಕೂಟದ ತಾಲೂಕು ಅಧ್ಯೆ ನರಸಮ್ಮ ಅವಂಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಹುಲ್ ಪಂಚಶೀಲ, ಶಿಣ ಸಂಯೋಜಕ ಅಶೋಕ ಹೂವಿನಭಾವಿ, ಪ್ರಮುಖರಾದ ಭರತೇಶ, ನಿರ್ಮಲಾ, ಗೋವಿಂದ, ಆನಂದರಾಜ, ಮಹಮ್ಮದ್ ಅಮ್ಜದ್ ಅಲಿ, ಮಲ್ಲಿಕಾರ್ಜುನ ನೆಲ್ಲಿ, ನಾಗರಾಜ ಶೀಲವಂತ, ವೀರಭದ್ರಪ್ಪ ಬಳೆರ, ಸರಸ್ವತಿ, ವಿಶ್ವಾರಾಧ್ಯ ಇಜೇರಿ ಇತರರಿದ್ದರು.
ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಕಿಶೋರಿಯರು ಖುಷಿಯಿಂದ ಭಾಗಿಯಾಗಿ ಸಂಭ್ರಮಪಟ್ಟರು. ಕ್ರಿಕೆಟ್ನಲ್ಲಿ ಐನೋಳ್ಳಿ ತಂಡ (ಪ್ರ), ಶಾದಿಪುರ ಟೀಮ್ (ದ್ವಿ). ಕಬಡ್ಡಿ ಭೋಗಲಿಂಗದಳ್ಳಿ (ಪ್ರ), ಐನೋಳ್ಳಿ (ದ್ವಿ). ಮಡಿಕೆ ಒಡೆಯುವ ಸ್ಪರ್ಧೆ ಪಟಪಳ್ಳಿ (ಪ್ರ), ಐನೋಳ್ಳಿ (ದ್ವಿ). ರಿಲೇ ಓಟ ಗಾರಂಪಳ್ಳಿ (ಪ್ರ), ದೇಗಲಮಡಿ (ದ್ವಿ). ರನ್ನಿಂಗ್ ಐನೋಳ್ಳಿ (ಪ್ರ), ಕಲಭಾವಿ ತಾಂಡಾ (ದ್ವಿ) ತಂಡಗಳು ಪ್ರಶಸ್ತಿ ಪಡೆದವು. ವಿವಿಧ ಗ್ರಾಮಗಳ 280ಕ್ಕೂ ಅಧಿಕ ಕಿಶೋರಿಯರು ಭಾಗವಹಿಸಿದ್ದರು.