ಕೆಎಂಎಫ್ ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು, ತೊಗರಿ ಬೆಳೆಗಾರರ ಸಂರP್ಷÀಣೆಗಾಗಿ ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಎತ್ತಿನ ಬಂಡಿ, ಟ್ರಾÈಕ್ಟರ್‌ನೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು. ಶರಣಬಸಪ್ಪ ಮಮಶೆಟ್ಟಿ, ಮೌಲಾ ಮು¯್ಲÁ, ಉಮಾಪತಿ ಪಾಟೀಲï, ಸಿದ್ದು ಎಸ್.ಎಲ್, ಭಿಮಾಶಂಕರ ಮಾಡಿಯಾಳ, ಅರ್ಜುನ್ ಗೊಬ್ಬುರು, ಕರೆಪ್ಪಾ ಕರಗೊಂಡ, ನಾಗಯ್ಯಾ ಸ್ವಾಮಿ ಇತರರಿದ್ದರು. 
ಕಲಬುರಗಿ

ಮಧ್ಯಂತರ ಪರಿಹಾರ ಮಂಜೂರು ಮಾಡಿ

ಪ್ರಮುಖ ಮುಖ್ಯಾಂಶಗಳು

  • ಎತ್ತಿನ ಬಂಡಿ, ಟ್ರಾÈಕ್ಟರ್‌ಗಳೊಂದಿಗೆ ತೊಗರಿ ರೈತರ ಪ್ರತಿಭಟನೆ
  • ಡಿಸಿ ಕಚೇರಿ ಎದುರು ರೈತರ ಆಕ್ರೋಶ
ಕಲಬುರಗಿ: ಜಿ¯್ಲೆಯಲ್ಲಿ ಕೆಎಂಎಫ್ ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು, ತೊಗರಿ ಬೆಳೆಗಾರರ ಸಂರP್ಷÀಣೆಗಾಗಿ ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡಬೇಕು, ಬೆಳೆ ವಿಮೆ ಹಣ ಮಂಜೂರು ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಕಾರ್ಯಕರ್ತರು ಡಿಸಿ ಕಚೇರಿ ಎದುರು ಎತ್ತಿನ ಬಂಡಿ, ಟ್ರಾÈಕ್ಟರ್‌ನೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು.
ಗೊಡ್ಡು ಹೋದ ತೊಗರಿಗೆ ಪರಿಹಾರ, ಅತಿವೃಷ್ಟಿ ಪರಿಹಾರದಲ್ಲಿ ತಾರತಮ್ಯ ಸರಿಪಡಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು, ಹೊರದೇಶದ ತೊಗರಿಗೆ ಶೇ.೫೦ರಷ್ಟು ಆಮದು ಸುಂಕ ವಿಧಿಸಬೇಕು, ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಅತಿವೃಷ್ಟಿಗೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಸಮೀಕ್ಷೆಗೆ ಕೇಂದ್ರ ತಂಡ ಜನವರಿಯಲ್ಲಿ ಬಂದದ್ದು ನಿಷ್ಪçಯೋಜಕ. ಅನ್ನದಾತ ಸಂಕಷ್ಟಕ್ಕೆ ಸಿಲುಕಿದಾಗ ತP್ಷÀಣವೇ ಬೆಳೆ ಸಮೀಕ್ಷೆ ಮಾಡಲು ಬಂದರೆ ಸತ್ಯಾಸತ್ಯತೆ ಗೊತ್ತಾಗಲಿದೆ. ತೊಗರಿ ಬೆಳೆಗಾರರ ಜತೆಗೆ ಒಂದು ಸಭೆ ನಡೆಸದಿರುವುದು ವಿಷಾದನೀಯ ಎಂದರು.
ಒAದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವAತೆ ಮಾಡಿದೆ. ತೊಗರಿ ಬೆಳೆಗಾರರ ಎಂಎಸ್‌ಪಿ ಕಾನೂನು ಜಾರಿ ಮಾಡಬೇಕು. ೩,೦೧,೦೦೦ ತೊಗರಿ ಬೆಳೆಗಾರರು ಬೆಳೆ ವಿಮೆ ೯೯ ಕೋಟಿ ರೂ. ಭರಿಸಿದ್ದು, ಜಿ¯್ಲÉಯ ಒಟ್ಟು ೩,೭೮,೯೯೦ ಹೆಕ್ಟೇರ್ ಪ್ರದೇಶದ ಬೆಳೆ ವಿಮೆಗೆ ಒಳಪಟ್ಟಿದೆ ಎಂದು ಹೇಳಿದರು.
ಹೊರದೇಶಗಳಿಂದ ೮,೧೪,೦೬೮.೬೫ ಲP್ಷÀ ಮೆಟ್ರಿಕ್ ಟನ್ ತೊಗರಿ ಆಮದು ಮಾಡಿಕೊಂಡು ಮಾರುಕಟ್ಟೆ ಹಾಳು ಮಾಡಿರುವ ರೈತ ವಿರೋಧಿ ಕೇಂದ್ರ ಸರ್ಕಾರ ತP್ಷÀಣ ಹೊರದೇಶದ ತೊಗರಿಗೆ ಶೇ.೫೦ರಷ್ಟು ಆಮದು ಸುಂಕ ಹೇರಬೇಕು ಎಂದು ಆಗ್ರಹಿಸಿದರು.
ಶರಣಬಸಪ್ಪ ಮಮಶೆಟ್ಟಿ, ಮೌಲಾ ಮು¯್ಲÁ, ಉಮಾಪತಿ ಪಾಟೀಲï, ಸಿದ್ದು ಎಸ್.ಎಲ್, ಭಿಮಾಶಂಕರ ಮಾಡಿಯಾಳ, ಅರ್ಜುನ್ ಗೊಬ್ಬುರು, ಕರೆಪ್ಪಾ ಕರಗೊಂಡ, ನಾಗಯ್ಯಾ ಸ್ವಾಮಿ, ಸಿದ್ದಪ್ಪ ಕಲಶೆಟ್ಟಿ, ವೀರಣ್ಣ ಗಂಗಾಣಿ, ಜಾಫರ್ ಖಾನ್, ಗುಂಡಪ್ಪ ಅರಣಕಲ್, ಮೌನೇಶ ನಾಲವಾರ, ಸಿದ್ದಮ್ಮ ಮುತ್ತಗಾ, ಸಿದ್ಧಾರ್ಥ ಠಾಕೂರ್, ಸಲೀಂ ಅಹ್ಮದ್, ಶಾಮರಾಯ ದಿಗ್ಗಾಂವ್ ಇತರರಿದ್ದರು.
"

ಹಾಲು ಉತ್ಪಾದಕರ ಸಹಕಾರ ಸಂಘ ಕೆಎಂಎಫ್ ಮಾದರಿಯಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಲï ತೊಗರಿಗೆ ೧೨೫೦೦ ಬೆಂಬಲ ಬೆಲೆ ನೀಡಬೇಕು, ಪ್ರತಿ ಕ್ವಿಂಟಲï ತೊಗರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ೧೦೦೦ ರೂ. ಪ್ರೋತ್ಸಾಹಧನ ನೀಡಬೇಕು.

ಶರಣಬಸಪ್ಪ ಮಮಶೆಟ್ಟಿ,ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ.