ಕಲಬುರಗಿ ಸಂಗಮೇಶ್ವರ ಬಡಾವಣೆಯ ಶ್ರೀಯಾಜ್ಞವಲ್ಕÈ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಮಾಧವತೀರ್ಥರ ಆರಾಧನಾ ಮಹೋತ್ಸವದಲ್ಲಿ ಅಶೋಕ ಮಳ್ಳಿ, ವೆಂಕಟೇಶ ಕುಲಕರ್ಣಿ, ವಿನೂತ್ ಜೋಶಿ ಇತರರಿದ್ದರು. 
ಕಲಬುರಗಿ

ಮಾಧವ ತೀರ್ಥರು ಸರ್ವವಿದ್ಯಾ ಪ್ರವೀಣರು

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಯಾಜ್ಞವಲ್ಕö್ಯ ಭವನ
ಕಲಬುರಗಿ: ಶ್ರೀಮಾಧವ ತೀರ್ಥರು ಶೇಷಾಂಶ ಸಂಭೂತರು. ವಿಷ್ಣು ಸರ್ವೋತ್ತಮ ತತ್ವe್ಞÁನದಲ್ಲಿ ನಿಪುಣರಾಗಿದ್ದ ಅವರು ಉಪಾಸ್ಯ ಮೂರ್ತಿಯಾದ ಶ್ರೀವಿಠ್ಠಲ ಕೃಷ್ಣನಲ್ಲಿ ಅನನ್ಯ ಭಕ್ತಿ ಹೊಂದಿದ್ದರು. ಧರ್ಮನಿಷ್ಠರು, ಸರ್ವವಿದ್ಯಾ ಪ್ರವೀಣರು ಆಗಿದ್ದ ಯತಿವರ್ಯರು ಶಿಷ್ಯಕೋಟಿಗಾಗಿ ಶ್ರೀಮದ್ ಕಣ್ವ ಮಠ ಸ್ಥಾಪಿಸಿ ಮಹತ್ತರ ಸೇವೆ ಸಲ್ಲಿಸಿದರು ಎಂದು ಶ್ರೀಯೋಗೀಶ್ವರ ಯಾಜ್ಞವಲ್ಕö್ಯ ಸೇವಾ ಸಮಿತಿಯ ಖಜಾಂಚಿ ಅಶೋಕ ಮಳ್ಳಿ ಹೇಳಿದರು.
ನಗರದ ಸಂಗಮೇಶ್ವರ ಬಡಾವಣೆಯ ಶ್ರೀಸೂರ್ಯನಾರಾಯಣ ದೇವಸ್ಥಾನದ ಯಾಜ್ಞವಲ್ಕö್ಯ ಭವನದಲ್ಲಿ ಭಾನುವಾರ ನಡೆದ ಶ್ರೀಮದ್ ಕಣ್ವ ಮಠದ ಸಂಸ್ಥಾಪಕ ಮಾಧವ ತೀರ್ಥರ ೨೧೬ನೇ ಆರಾಧನಾ ಮಹೋತ್ಸವದ ವಿಶೇಷ ಪಾರಾಯಣದಲ್ಲಿ ಪಾಲ್ಗೊಂಡು ಮಾತನಾಡಿ, ಮಹರ್ಷಿ ಯಾಜ್ಞವಲ್ಕö್ಯ ಹಾಗೂ ಮಹರ್ಷಿ ಕಣ್ವರಿಂದ ಬಂದ ಶುಕ್ಲ ಯಜುರ್ವೇದದ e್ಞÁನವನ್ನು ಜನಸಾಮಾನ್ಯರಿಗೆ ಬೋಧಿಸಿ, ಸ್ವಧರ್ಮಾಚರಣೆಯ ಮಹತ್ವ ಸಾರಿ ಕೃತಾರ್ಥರನ್ನಾಗಿ ಮಾಡಿ ಧರ್ಮಜಾಗೃತಿಗೆ ಮಹತ್ತರ ಕೊಡುಗೆ ನೀಡಿದರು. ಯತಿಶ್ರೇಷ್ಠರಾದ ಶ್ರೀಮಾಧವ ತೀರ್ಥರನ್ನು ಭಕ್ತಿಯಿಂದ ಸ್ಮರಿಸಿ ನಿತ್ಯ ಪೂಜಿಸುವವರಿಗೆ ಆಯುಷ್ಯ, ಕೀರ್ತಿ ಮತ್ತು e್ಞÁನ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ ಎಂದು ವಿವರಿಸಿದರು.
ಸಮಿತಿಯ ಹಿರಿಯ ಸದಸ್ಯ ವೆಂಕಟೇಶ ಕುಲಕರ್ಣಿ ಮಾತನಾಡಿ, ರಾಯಚೂರು ಜಿ¯್ಲೆಯ ಮಸ್ಕಿ ತಾಲೂಕಿನ ಶ್ರೀಕ್ಷೇತ್ರ ಬುದ್ಧಿನ್ನಿ ಗ್ರಾಮದಲ್ಲಿರುವ ಮಾಧವ ತೀರ್ಥರ ವೃಂದಾವನಕ್ಕೆ ಕಲಬುರಗಿಯ ಶ್ರೀಯೋಗೀಶ್ವರ ಯಾಜ್ಞವಲ್ಕö್ಯ ಸಮಿತಿಯ ವತಿಯಿಂದ ಭಕ್ತರೊಂದಿಗೆ ಯಾತ್ರೆ ಆಯೋಜಿಸಲಾಗಿದ್ದು, ದರ್ಶನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಆರಾಧನಾ ಮಹೋತ್ಸವದ ಅಂಗವಾಗಿ ಅರ್ಚಕರಿಂದ ಬೆಳಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ಪೂಜೆ, ನೈವೇದ್ಯ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಬಳಿಕ ಶ್ರೀಮನ್ ಮಾಧವ ತೀರ್ಥ ಶ್ರೀಪಾದಂಗಳವರ ಅಷ್ಟೋತ್ತರ ಪಾರಾಯಣ ಹಾಗೂ ೧೦೮ ಚರಮ ಶ್ಲೋಕ ಪಠಣೆ, ಶ್ರೀಮಾಧವತೀರ್ಥರ ಹಾಡುಗಳ ಭಜನೆ ನಡೆಯಿತು.
ವಾಸುದೇವರಾವ್ ಕುಳಗೇರಿ, ವಿನುತ ಜೋಶಿ, ವೆಂಕಟೇಶ ಕುಲಕರ್ಣಿ, ಸತ್ಯನಾರಾಯಣ ಕುಲಕರ್ಣಿ, ಶಂಕರರಾವ ಕುಲಕರ್ಣಿ, ವ್ಯವಸ್ಥಾಪಕ ಶ್ರೀನಿವಾಸರಾವ ಕುಲಕರ್ಣಿ ಸೇರಿ ಪಾರಾಯಣ ಸಂಘದ ಸದಸ್ಯರು, ಅನೇಕ ಭಕ್ತರು ಭಾಗವಹಿಸಿದ್ದರು.