ಕಲಬುರಗಿಯ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಗುರುವಾರ ನಡೆದ ಅನುರೂಪ ರಾಯ್ ನಿರ್ದೇಶನದ ಅಬೌಟ್ ರಾಮ್ ನಾಟಕವನ್ನು ನವದೆಹಲಿ ಕತ್ ಕಥಾ ಪಪ್ಪೆಟ್ ಆರ್ಟ್ಸ್ ಟ್ರಸ್ಟ್ ತಂಡವು ಪ್ರಸ್ತುತಪಡಿಸಿತು.
ಕಲಬುರಗಿ: ನಾಟಕೋತ್ಸವದ ಆರನೇ ದಿನವಾದ ಗುರುವಾರ ಸಂಜೆ ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಅನುರೂಪ ರಾಯ್ ನಿರ್ದೇಶನದ ಸಂವಾದ ರಹಿತ ಅಬೌಟ್ ರಾಮ್ ನಾಟಕವನ್ನು ನವದೆಹಲಿ ಕತ್ ಕಥಾ ಪಪ್ಪೆಟ್ ಆರ್ಟ್ಸ್ ಟ್ರಸ್ಟ್ ತಂಡವು ಗೊಂಬೆಯಾಟದ ಮೂಲಕ ಅದ್ಭುತ ಪ್ರದರ್ಶನ ನೀಡಿತು.
ಭವಭೂತಿಯ ರಾಮಾಯಣದ ಮರುವಾಖ್ಯಾನವಾದ ಅಬೌಟ್ ರಾಮ್ ರಾಮಾಯಣವನ್ನು ಪ್ರೀತಿ, ವಿರಹ ಮತ್ತು ಆಂತರಿಕ ಸಂಘರ್ಷಗಳ ಒಂದು ಆತ್ಮೀಯ ಮಾನವೀಯ ಕಥೆಯನ್ನಾಗಿ ಮರುಕಲ್ಪಿಸಲಾಗಿದೆ.
ವನವಾಸದಲ್ಲಿದ್ದಾಗ ರಾವಣನಿಂದ ಅಪಹೃತಳಾದ ಸೀತೆಯನ್ನು, ರಾಮನು ರಾವಣನನ್ನು ಸಂಹರಿಸಿ ಪಡೆಯುತ್ತಾನೆ. ಆದರೆ ಆ ವಿಜಯವು ಅವನಿಗೆ ಶಾಂತಿ ನೀಡುವುದಿಲ್ಲ. ಒಬ್ಬ ರಾಜನಾಗಿ ತನ್ನ ಕರ್ತವ್ಯ ಹಾಗೂ ಪತಿಯಾಗಿ ತನ್ನ ಪ್ರೀತಿಯ ನಡುವೆ ಸಿಲುಕುವ ರಾಮನಿಗೆ ವಿಜಯವೇ ಅವನಿಗೆ ಯಾತನೆಯಾಗಿ ಪರಿಣಮಿಸುತ್ತದೆ.
ಈ ರೂಪಾಂತರವು ರಾಮನನ್ನು ಒಬ್ಬ ದೇವರೆಂದಲ್ಲದೆ, ವಿರಹ, ನೈತಿಕ ಸಂಘರ್ಷ ಮತ್ತು ರಾಜ್ಯದ ಕ್ರೂರ ನಿರೀಕ್ಷೆಗಳಿಂದ ಹೈರಾಣಾದ ಒಬ್ಬ ಮನುಷ್ಯನನ್ನಾಗಿ ಚಿತ್ರಿಸುತ್ತದೆ. ಯುದ್ಧ, ಸಾವು-ನೋವು ಮತ್ತು ಆತ್ಮಸಂದೇಹಗಳ ನಡುವೆ ಸಾಗುವ ಆತನ ಆಂತರಿಕ ಪಯಣವನ್ನು ಈ ನಾಟಕ ಚಿತ್ರಿಸುತ್ತಾ ಪವಿತ್ರತೆ, ಸ್ವೀಕಾರ ಹಾಗೂ ದೈವತ್ವಕ್ಕಾಗಿ ಒಬ್ಬ ಮನುಷ್ಯ ತೆರಬೇಕಾದ ಬೆಲೆ ನಾಟಕದಲ್ಲಿ ಪ್ರಶ್ನಿಸಲಾಗಿದೆ.