ಕಲಬುರಗಿ: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಪೊಲೀಸ್ ಪೇದೆ ವಿದ್ಯಾರ್ಥಿನಿಯನ್ನು ಪ್ರೇಮದ ಬಲೆಗೆ ಬೀಳಿಸಿ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗದೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಮಹಾಲಕ್ಷಿ$್ಮ ಲೇಔಟ್ನ ವಿದ್ಯಾರ್ಥಿನಿಯನ್ನು ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಕೆಎಸ್ಆರ್ಪಿ ಪೇದೆ ಶಿವಾನಂದ ಅವಲಕ್ಕಿ ಮೋಸ ಮಾಡಿದವ. 2024ರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ 2025ರವರೆಗೆ ನಿರಂತರ ೋನ್ನಲ್ಲಿ ಮಾತನಾಡಿದ್ದು, ಪ್ರೀತಿಸಿದ್ದು ಮದುವೆ ಆಗುವುದಾಗಿ ನಂಬಿಸಿದ್ದಾನೆ. ನಂತರ ಕಲಬುರಗಿ, ವಿಜಯಪುರ, ಹಾಸನ ಸೇರಿ ವಿವಿಧೆಡೆ ಲಾಡ್ಜ್ಗಳಲ್ಲಿ ನಾಲ್ಕೆ$ದು ಬಾರಿ ಎರಡ್ಮೂರು ದಿನ ಇದ್ದು, ದೈಹಿಕ ಸಂಪರ್ಕ ಬೆಳೆಸಿದ್ದಾನೆ. 2025ರ ನ.19ರಂದು ಕರೆ ಮಾಡಿದಾಗ ಮದುವೆ ಆಗುವುದಿಲ್ಲ. ಕರೆ ಮಾಡಬೇಡ ಎಂದಿದ್ದಾನೆ. ನಂತರ ಸಂತ್ರಸ್ತೆ ಪೊಲೀಸಪ್ಪನ ಮನೆಗೆ ಹೋಗಿದ್ದು, ಹೆತ್ತವರು ನಿಂದಿಸಿ ಕಳುಹಿಸಿದ್ದಾರೆ. ನಾನು ಪೊಲೀಸ್. ಸುಮ್ಮನಿರದಿದ್ದರೆ ನಿನ್ನ ಖಾಸಗಿ ೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಸಿದ ಪೊಲೀಸಪ್ಪನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ನೀಡಿದ ದೂರಿನನ್ವಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.