Lorry Accident 
ಕಲಬುರಗಿ

ಲಾರಿ ಡಿಕ್ಕಿ ಬಸ್, ಆಟೋ ಪಲ್ಟಿ 12 ಜನರಿಗೆ ಗಂಭೀರ ಗಾಯ

ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ತಾಂಡಾ ಬಳಿ ಸಿಮೆಂಟ್ ಲಾರಿ ( ಟ್ಯಾಂಕರ್ ) ಹಾಗೂ ಟಂಟಂ ಆಟೋ ಮತ್ತು ಬಸ್ ಡಿಕ್ಕಿ 12 ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಾಯಂಕಾಲ ಜರುಗಿದೆ.
ಚಿಂಚೋಳಿಯಿಂದ ಕುಂಚಾವರಂ ಭಾಗದ ವೆಂಕಟಾಪೂರ ಗ್ರಾಮಕ್ಕೆ ಹೊರಟ ಬಸ್ ಗೆ ಚಿಂಚೋಳಿ ಕಡೆ ಬರುತ್ತಿದ್ದ, ಸಿಮೆಂಟ್ ಲಾರಿ ಆಟೋ ಹಾಗೂ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 9 ಜನ ಪ್ರಯಾಣಿಕರು ಸೇರಿದಂತೆ 12 ಜನಕ್ಕೆ ಗಾಯಗಳಾಗಿದ್ದು, ವಿಜಯಕುಮಾರ ತಂದೆ ವಿಠಲ ತಳವಾರ ರುಸ್ತಂಪೂರ (37), ಲಾಲಪಟೇಲ ತಂದೆ ಚಾಂದಪಟೇಲ ವಡ್ಡನಕೇರಾ (34), ಲಿಂಬು ತಂದೆ ಧಾವಜಿ ಪವಾರ ಕಲಬಾವಿ ತಾಂಡಾ, ರಮೇಶ ತಂದೆ ವೀರಶೇಟ್ಟಿ ಚಿಟ್ಟಾ ( 37) ವಿದ್ಯಾವತಿ ಗಂಡ ಕಾಶಿನಾಥ ಪೂಜಾರಿ ಚಿಕ್ಕನಿಂಗದಳ್ಳಿ (35), ಭಾಗಮ್ಮ ಗಂಡ ಕಾಶಿನಾಥ ಚಿಕ್ಕನಿಂಗದಳ್ಳಿ (36), ಶಂಕರ ತಂದೆ ರಾಮಶೇಟ್ಟಿ ಪವಾರ (65), ಸುಶೀಲಾ ಬಾಯಿ ಸೇರಿದಂತೆ ಆಟೋ ಚಾಲಕನ ಸ್ಥಿತಿ ಗಂಭೀವಾಗಿದ್ದು, 10 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾರಿಗೆ ಚಾಲಕ ಮತ್ತು ನಿರ್ವಾಹಕ ಇಬ್ಬರನ್ನು ಚಿಂಚೋಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಿಮೆಂಟ್ ಲಾರಿ ಚಾಲಕ ಪರಾರಿಯಾಗಿದ್ದು, ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪಿಎಸ್ಐ ಗಂಗಮ್ಮ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.