ಬಾಲಬೆನಕ ಗಣೇಶೋತ್ಸವ ಸಮಿತಿಯಿಂದ ಚಿತ್ತಾಪುರ ಅಕ್ಕಮಹಾದೇವಿ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ದೀಪೋತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಶ್ರೀ ಶಿವಶಂಕರ ಶಿವಾಚಾರ್ಯರು ಉದ್ಘಾಟಿಸಿದರು. ಕಂಬಳೇಶ್ವರ ಶ್ರೀ, ಪ್ರಸಾದ ಅವಂಟಿ, ಕೋಟೇಶ್ವರ ರೇಷ್ಮಿ, ಸಂಗಮೇಶ ರೋಣದ ಇತರರಿದ್ದರು.  
ಕಲಬುರಗಿ

ಹೆತ್ತವರನ್ನು ಗೌರವಿಸುವವರಿಗೆ ಗಣಪ ಒಲಿವ

ಶ್ರೀ ಸೋಮಶೇಖರ ಶಿವಾಚಾರ್ಯ ಸಲಹೆ

ಚಿತ್ತಾಪುರದಲ್ಲಿ ದೀಪೋತ್ಸವ, ಪ್ರಸಾದ ವಿತರಣೆ

ಚಿತ್ತಾಪುರ: ಪ್ರತಿ ಸಮಾರಂಭಗಳಲ್ಲೂ ಪ್ರಥಮ ಪೂಜಿತ ಶ್ರೀ ಗಣಪತಿಯು ಸಕಲ ದೇವರುಗಳಲ್ಲಿಯೇ ಅತ್ಯಂತ ಶ್ರೇಷ್ಠನಾಗಿದ್ದಾನೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ನುಡಿದರು.

ಶಿವಶಂಕರ ಮಠದ ಅಕ್ಕಮಹಾದೇವಿ ಮಂದಿರದಲ್ಲಿ ಬಾಲ ಬೆನಕ ಗಣೇಶೋತ್ಸವ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ದೀಪೋತ್ಸವ ಹಾಗೂ ಪ್ರಸಾದ ವಿತರಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿಯನ್ನು ವೃದ್ಧಾಶ್ರಮಗಳಿಗೆ ಕಳಿಸುವ ಜನರಿಗೆ ವಿಘ್ನನಿವಾರಕ ಎಂದಿಗೂ ಒಲಿಯಲ್ಲ. ಹೆತ್ತವರನ್ನು ಪ್ರೀತಿ, ಆದರದಿಂದ ನೋಡಿಕೊಂಡಾಗ ಮಾತ್ರ ಗಣೇಶನ ಪೂಜೆ ಸಾರ್ಥಕ್ಯ ಎಂದು ಹೇಳಿದರು.

ಚಿತ್ತಾಪುರ-ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಾಲಬೆನಕ ಗಣೇಶೋತ್ಸವ ಸಮಿತಿಯ ಪ್ರಸಾದ್​ ಅವಂಟಿ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಕೋಟೇಶ್ವರ ರೇಶ್ಮಿ, ಓಂಕಾರೇಶ್ವರ ರೇಶ್ಮಿ, ನೇಹಲ್​ ಪಾಟೀಲ್​, ಸಿದ್ರಾಮಪ್ಪ ರೇಶ್ಮಿ, ಮಲ್ಲಣ್ಣ ಮಾಸ್ಟರ್​, ಶಿವಶರಣಪ್ಪ ರೇಶ್ಮಿ, ಅಂಬರೀಷ ಕೊಲ್ಲೂರ, ವಿಶಾಲ್​ ಗುಂಡಗುರ್ತಿ, ಸಾಬಣ್ಣ ಪೂಜಾರಿ, ಮಹಾದೇವ ಅಂಗಡಿ ಇತರರಿದ್ದರು. ತನುಶ್ರೀ ದೇಶಪಾಂಡೆ ಅವರ ಭರತನಾಟ್ಯ ಜನಮನಸೂರೆಗೊಂಡಿತು.

ಸಂಗಮೇಶ ರೋಣದ ಪ್ರಾಸ್ತಾವಿಕ ಮಾತನಾಡಿದರು. ಗೋದಾವರಿ ಹಿರೇಮಠ ಪ್ರಾರ್ಥಿಸಿದರು. ವಿಶ್ವಭಾರತಿ ರೇಶ್ಮಿ ಸ್ವಾಗತಿಸಿದರು. ಗಂಗಣ್ಣ ಹೊಸ್ಸುರ್​ ನಿರೂಪಣೆ ಮಾಡಿ ವಂದಿಸಿದರು.