ಕಲಬುರಗಿಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೂಜ್ಯ ದೊಡ್ಡಪ್ಪ ಅಪ್ಪ ಉದ್ಘಾಟಿಸಿದರು. ಶ್ರೀ ಡಾ.ಚನ್ನವಿರ ಶಿವಾಚಾರ್ಯ, ಡಾ.ನಾಗೇಂದ್ರ ಮಸೂತಿ, ಬಸವರಾಜ ಬಳೂಂಡಗಿ, ಮಹೇಶ ಹೂಗಾರ, ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸೈಯದ್​ ಇತರರಿದ್ದರು. 
ಕಲಬುರಗಿ

ಬದುಕಿನ ಬೆಳಕಾಗಿ ಸಾಹಿತ್ಯ ಜೀವಂತ

ಕಲಬುರಗಿ: ಸಮಾಜದ ಕಣ್ಣಾಗಿ ಮನಸ್ಸಿನ ಭಾವನಗೆಳಿಗೆ ಧ್ವನಿಯಾಗಿ ಮತ್ತು ಬದುಕಿನ ಹಾದಿಗೆ ಬೆಳಕಾಗಿ ಸಾಹಿತ್ಯ ಸದಾ ಜೀವಂತವಾಗಿರುತ್ತದೆ. ನಾಡು&ನುಡಿ ಕಟ್ಟುವ ಪ್ರಬುದ್ಧ ಮನಸ್ಸುಗಳಿಂದ ಈ ಕನ್ನಡ ನಾಡು ಬಹು ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನಿಂದ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೇತೃತ್ವ ವಹಿಸಿದ್ದ ಅವರು, ಬೆಳಗ್ಗೆ ಎದ್ದು ಕನ್ನಡಮ್ಮನ ನೆನಪಿಸಿ ಧ್ಯಾನಿಸಿ ದೈನಂದಿನ ಕಾರ್ಯಚಟುವಟಿಕೆ ಕೈಗೊಳ್ಳಬೇಕು. ಆ ಮೂಲಕ ಕನ್ನಡಿಗರ ಮನಸ್ಸು ಅರಳಿಸಬೇಕು. ಐದು ವರ್ಷಗಳಿಂದ ಕಸಾಪ ಜಿಲ್ಲಾ ಘಟಕ ನಿರಂತರ ಕನ್ನಡಪರ ಚಟುವಟಿಕೆ ನಡೆಸಿಕೊಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ವಾಧ್ಯಕ್ಷತೆ ವಹಿಸಿದ್ದ ಸಮ್ಮೇಳನಾಧ್ಯಕ್ಷ ಡಾ.ನಾಗೇಂದ್ರ ಮಸೂತಿ ಮಾತನಾಡಿ, ನಮ್ಮ ಭಾಷೆ, ಸಂಸತಿ ಜೀವನದ ಅಸ್ಮಿತೆಯಾಗಲಿ. ಮಾತೃಭಾಷಾ ಶಿಕ್ಷಣದಿಂದ ಮೌಲ್ಯ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರೀಕರಣ ವ್ಯವಸ್ಥೆ ಜಾರಿಯಾಗಬೇಕು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.

ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಮಾಜದಲ್ಲಿ ಮನೆ ಮಾಡಿರುವ ಮೂಢನಂಬಿಕೆ, ಮೌಢ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ಅಂಧಕಾರ ಹೋಗಲಾಡಿಸಲು ಜ್ಞಾನದ ಬೆಳಕು ಕೊಡುವುದರ ಜತೆ ಸಾಹಿತ್ಯ ಹೊಸ ಚೈತನ್ಯ ನೀಡುತ್ತದೆ. ಐದು ವರ್ಷದ ಅವಧಿಯಲ್ಲಿ ಹದಿನಾರು ವಿಶೇಷ ಸಮ್ಮೇಳನ, ಆರು ಜಿಲ್ಲಾ ಸಮ್ಮೇಳನ ಮೂಲಕ ರಾಜ್ಯದಲ್ಲೇ ದಾಖಲೆ ಮಾಡಿದಂತಾಗಿದೆ ಎಂದು ತಿಳಿಸಿದರು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಎಸ್​.ಅಪ್ಪ ಸಮ್ಮೇಳನ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ, ಜಿಲ್ಲಾ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಬಸವರಾಜ ಬಳೂಂಡಗಿ, ನಿವೃತ್ತ ಮುಖ್ಯ ಇಂಜಿನಿಯರ್​ ಡಾ.ಸುರೇಶ ಶರ್ಮಾ, ಮಹೇಶ ಹೂಗಾರ, ಸಂತೋಷ ಗಂಗೂ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸೈಯದ್​ ನಜಿರುದ್ದಿನ್​ ಮುತ್ತವಲ್ಲಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ಧರ್ಮರಾಜ ಜವಳಿ, ಡಾ.ಶಿವಶರಣಪ್ಪ ಮೋತಕಪಳ್ಳಿ, ಶಿವಲೀಲಾ ಕಲಗುರ್ಕಿ, ರಾಜೇಂದ್ರ ಮಾಡಬೂಳ, ಡಾ.ಬಾಬುರಾವ ಶೇರಿಕಾರ, ದಿನೇಶ ಮದಕರಿ, ಸಿದ್ಧರಾಮ ಹಂಚನಾಳ, ಈರಣ್ಣ ಸೋನಾರ, ರಮೇಶ ಬಡಿಗೇರ, ಎಸ್​.ಕೆ. ಬಿರಾದಾರ, ಸುರೇಶ ದೇಶಪಾಂಡೆ, ಪ್ರಭುಲಿಂಗ ಮೂಲಗೆ, ರವಿ ಶಹಾಪುರಕರ್​, ಸಂತೋಷ ಕುಡಳ್ಳಿ, ಕಲ್ಯಾಣಕುಮಾರ ಶೀಲವಂತ ಇತರರಿದ್ದರು.

ಡಾ.ಶಿವಶರಣಪ್ಪ ಮೋತಕಪಳ್ಳಿ ಹಾಗೂ ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ ಸಾಹಿತ್ಯ ಬೆಳಕು, ಡಾ.ನಾಗೇಂದ್ರ ಮಸೂತಿ ಅವರ ಕಿರು ಭಾಮಿನಿ ಕೃತಿಗಳು ಲೋಕಾರ್ಪಣೆಗೊಂಡವು. ಸಾಂಸತಿಕ ಮೆರವಣಿಗೆಗೆ ಹೋರಾಟಗಾರ ಮಲ್ಲಿಕಾರ್ಜುನ ಸಾರವಾಡ ಚಾಲನೆ ನೀಡಿದರು. ಡಾ.ಹನುಮಂತರಾವ ದೊಡ್ಡಮನಿ, ಸಿದ್ಧರಾಮ ಪೊಲೀಸ್​ ಪಾಟೀಲ್​, ರವೂಫ್​ ಖಾದ್ರಿ, ಡಾ.ಎಸ್​.ಎಸ್​.ಪಾಟೀಲ್​, ಡಾ.ಶಶಿಶೇಖರ ರೆಡ್ಡಿ, ಶಿವಶರಣಪ್ಪ ಸಿರಿ, ಉಮೇಶ ಬಾಬು ಸಾಸಾಬಾಳ, ಪವನಕುಮಾರ ವಳಕೇರಿ, ಶಾಮರಾವ ಪ್ಯಾಟಿ, ಡಾ.ಬಸವರಾಜ ಭಾಗಾ ಅವರಿಗೆ ಸಾಹಿತ್ಯ ಸಂಗಾತಿ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಗಮನಸೆಳೆದ ಗೋಷ್ಠಿ

ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್​ ಅಧ್ಯಕ್ಷತೆಯಲ್ಲಿ ಕನ್ನಡ ಕಾವ್ಯ ಪರಂಪರೆ ಮತ್ತು ಮೌಲ್ಯಗಳು ಕುರಿತು ಡಾ.ಶ್ರೀಶೈಲ ನಾಗರಾಳ, ಕನ್ನಡ ಸಾಹಿತ್ಯ ವಿಕಾಸದಲ್ಲಿ ಕಥೆ&ಕಾದಂಬರಿಗಳ ಪಾತ್ರ ಕುರಿತು ಡಾ.ಕೆ.ಎಸ್​. ನಾಯಕ, ಮಹಿಳಾ ವಿಕಾಸ ಮುನ್ನೋಟ ಕುರಿತು ಡಾ.ಜಯದೇವಿ ಗಾಯಕವಾಡ ಮಾತನಾಡಿದರು. ಸೈಯ್ಯದ್​ ಎಸ್​.ಜೆ.ಇನಾಮದಾರ, ಜಯಶ್ರೀ ಜಮಾದಾರ, ಪೂಜಾ ಬಂಕಲಗಿ ಇದ್ದರು. ಅನೇಕ ಸೇವಾ ಮುಖಿಗಳಿಗೆ ಸೇವಾ ಕಲಾ ಕೌಶಲ ಗೌರವ ಪುರಸ್ಕಾರ ನೀಡಲಾಯಿತು. ಸಾಹಿತಿ ಡಾ.ಚಿ.ಸಿ. ನಿಂಗಣ್ಣ ಅಧ್ಯಕ್ಷತೆಯಲ್ಲಿ ನೋಡು ಕನ್ನಡ ಹಾಡು ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಗಮನ ಸೆಳೆದರು. ಪತ್ರಕರ್ತ ರಾಜಕುಮಾರ ಉದನೂರ ಆಶಯ ನುಡಿಗಳನ್ನಾಡಿದರು. ಡಾ.ರಾಜೇಂದ್ರ ಕೊಂಡಾ ಮಾತನಾಡಿದರು. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ನಾಗೇಂದ್ರ ಮಸೂತಿ ಅವರ ಸಾಂಸತಿಕ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಈ ಭಾಗದ ಇತಿಹಾಸ ಮತ್ತು ಸಾಂಸತಿಕ ಪರಂಪರೆ ತಿಳಿಹೇಳುವ ಕಾರ್ಯ ಆಗಬೇಕಾಗಿದೆ. ಕಡೆಗಣಿಸಲ್ಪಟ್ಟ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವೇಗ ಹೆಚ್ಚಿಸಬೇಕು. ಕನ್ನಡಕ್ಕೆ ಮೊಟ್ಟ ಮೊದಲ ಲಾಕ್ಷಣಿಕ ಗ್ರಂಥ ಕೊಟ್ಟಿದ್ದ ಈ ನೆಲದ ಹಿರಿಮೆ ಎತ್ತಿ ಹಿಡಿಯಬೇಕು. ಜನಪದರು ಕಟ್ಟಿಕೊಡುವ ಸಿರಿ ಸಂಪತ್ತಿನ ನಾಡು ಗೌರವದಿಂದ ಕಾಣಬೇಕಾಗಿದೆ.
> ಡಾ.ನಾಗೇಂದ್ರ ಮಸೂತಿ ಸಮ್ಮೇಳನದ ಸರ್ವಾಧ್ಯಕ್ಷ