ಚಿಂಚೋಳಿ : ತಾಲೂಕಿನ ರೋಡ ಕಲ್ಲೂರ ಗ್ರಾಮದಲ್ಲಿ ಹಿಂದೂ ಮಹಾ ಸಮ್ಮೇಳನ ನಿಮಿತ್ತ ವೀರಭದ್ರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಗ್ರಾಮದ ಪ್ರಮುಖರಾದ ಸುದರ್ಶನರೆಡ್ಡಿ, ವೀರಾರೆಡ್ಡಿ ಪಾಟೀಲ್, ಅವರು ಭಾರತ ಮಾತೆ, ಶ್ರೀ ರಾಮಚಂದ್ರಪ್ರಭುವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದ ಭದ್ರತೆ, ಐಕ್ಯತೆಗಾಗಿ ಜಾತಿ, ಮತ, ಪಂಥ ಎನ್ನದೆ ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು ಎಂಬ ಘೋಷ ವಾಕ್ಯದ ತತ್ವದಡಿ ಸೌಹಾರ್ದತೆಯಿಂದ ಬದುಕಿ ಬಾಳೋಣ ಎಂದು ಕರೆ ಕೊಟ್ಟರು.
ಅನೀಲ ಕಂಟ್ಲಿ, ನರಸಿಂಗರಾವ ಪವಾರ, ರೇವಣಸಿದ್ದಪ್ಪ ಮೋಘಾ, ವಿಶ್ವನಾಥ ಇದಲಾಯಿ, ಶರಣು ನಾಟೀಕಾರ, ಸುಧಾಕರ ಪಾಟೀಲ್, ಆನಂದ ಪೂಜಾರಿ, ಚಂದ್ರಶೇಖರ ಜೊನ್ನಲ್, ವೀರಭದ್ರಪ್ಪ ಜೊನ್ನಲ್, ರಾಮಶೇಟ್ಟಿ ಜೊನ್ನಲ್, ರಾಘವೇಂದ್ರ ಗುತ್ತೇದಾರ, ವಿಜಯಕುಮಾರ ಪರೀಟ, ರವಿಕುಮಾರ ಕಂಟ್ಲಿ, ರಮೇಶ ಪೂಜಾರಿ, ದಿನೇಶ, ಜಗನ್ನಾಥ ಮ್ಯಾಕಲ್, ಮಹೇಶ ಮರಾಠ ಸೇರಿದಂತೆ ಅನೇಕರು ಇದ್ದರು.