ಜೋಡೆತ್ತಿನ ಕೃಷಿಕರನ್ನು ಉಳಿಸಲು ಬಜೆಟ್​ನಲ್ಲಿ ಶೇ.10 ಅನುದಾನ ಮೀಸಲಿಡಬೇಕು, ಮಾಸಿಕ 11 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿ ಪ್ರಜಾಸೌಧ ಎದುರು ಕರ್ನಾಟಕ ರಾಜ್ಯ ರೈತ ಸಂಘ, ರೈತ ಸೇನೆಯಿಂದ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಗೌತಮ ಪಾಟೀಲ್​ ಮಾತನಾಡಿದರು. ಶ್ರೀ ಕರುಣೇಶ್ವರ ಶಿವಾಚಾರ್ಯ, ಶ್ರೀ ವಿಜಯಮಾಹಂತ ಶಿವಾಚಾರ್ಯ, ಶ್ರೀ ರೇವಣಸಿದ್ಧ ಶರಣರು ಇತರರಿದ್ದರು. 
ಕಲಬುರಗಿ

ಜೋಡೆತ್ತು ಕೃಷಿಕರ ಉಳಿಸಿ-ಬೆಳೆಸುವ ಕೆಲಸವಾಗಲಿ

ಚಿಂಚೋಳಿ: ಯಾಂತ್ರೀಕರಣದ ಯುಗದಲ್ಲಿ ದೇಶದ ಬೆನ್ನೆಲುಬಾದ ಜೋಡೆತ್ತು ಕೃಷಿಕರು ಎದುರಿಸುತ್ತಿರುವ ಸಂಕಷ್ಟ ಅಪಾರ. ಮಣ್ಣಿನ ಫಲವತ್ತತೆ ಮತ್ತು ಸಾವಯವ ಕೃಷಿ ಪದ್ಧತಿ ಜೀವಂತವಾಗಿಟ್ಟಿರುವ ಎತ್ತಿನಬಂಡಿ ಕೃಷಿಕರನ್ನು ಉಳಿಸಲು ಸರ್ಕಾರ ಮುಂದಾಗಬೇಕು. ಆರ್ಥಿಕವಾಗಿ ಸೂಕ್ತ ಬೆಂಬಲ ನೀಡಬೇಕು ಎಂದು ನಿಡಗುಂದಾದ ಶ್ರೀ ಕರುಣೇಶ್ವರ ಶಿವಾಚಾರ್ಯರು ಹೇಳಿದರು.

ಶ್ರೀ ಮಹಾಂತೇಶ್ವರ ಮಠದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 150 ಜೋಡೆತ್ತು ಕೃಷಿಕರನ್ನು ಸನ್ಮಾನಿಸಿ, ಪ್ರಮಾಣಪತ್ರ ವಿತರಿಸುವ ಮಾತನಾಡಿ, ರೈತರ ಸಮಸ್ಯೆಗಳಿಗೆ ಸರ್ಕಾರ ಧ್ವನಿಯಾಗಬೇಕು. ಸಂಕಷ್ಟದ ಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಹೈದರಾಬಾದ್​ ಕರ್ನಾಟಕ ಹೋರಾಟ ಸಮಿತಿ ಅಧ್ಯ ಗೌತಮ ಪಾಟೀಲ್​ ಮಾತನಾಡಿ, ರೈತರು ಕೇವಲ ಬೆಳೆ ಬೆಳೆಯುವವರಲ್ಲ, ಜೀವವೈವಿಧ್ಯ ಮತ್ತು ಸಾಂಪ್ರದಾಯಿಕ ಕೃಷಿಯ ಸಂರಕರು. ಅವರ ನ್ಯಾಯಯುತ ಬೇಡಿಕೆಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ನದಿ ಪಾತ್ರದ ರೈತರ ಪಂಪಸೆಟ್​ಗಳಿಗೆ ವಿದ್ಯುತ್​ ಕಡಿತಗೊಳಿಸುತ್ತಿರುವುದು ಸರಿಯಲ್ಲ. ನಮ್ಮ ಜಲಾಶಯದ ನೀರು ನಮಗೆ ನೀಡಲು ನಿರಾಕರಿಸುತ್ತಿರುವುದು ರೈತವಿರೋಧಿ ನೀತಿಯಾಗಿದೆ. ಕೂಡಲೇ ರೈತರ ಸಮಸ್ಯೆ ಅರಿತು, ಮನಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಗೋಪಾಲರಾವ ಕಟ್ಟಿಮನಿ, ರೇವಣಸಿದ್ದಪ್ಪ ಅಣಕಲ್​, ಲಕ್ಷ$್ಮಣ ಅವಂಟಿ, ಸಂತೋಷ ಗಡಂತಿ, ಕೆ.ಎಂ.ಬಾರಿ, ಗೋಪಾಲ ಎಂ.ಪಿ. ಮಾತನಾಡಿದರು.

ಶ್ರೀ ವಿಜಯಮಹಾಂತ ಶಿವಾಚಾರ್ಯ, ಶ್ರೀ ರೇವಣಸಿದ್ಧ ಶರಣರು, ಶ್ರೀ ವಿಠಲ ಮಹಾರಾಜ, ಪ್ರಮುಖರಾದ ವೀರಣ್ಣ ಗಂಗಣ್ಣಿ, ಖೀರು ಪವಾರ್​, ಉಮೇಶ ಬೆಳಕೇರಿ, ಶಂಕರಗೌಡ ಅಲ್ಲಾಪುರ, ಶರಣಪ್ಪ ಹಲಚೇರಾ, ರಾಮರೆಡ್ಡಿ ಪಾಟೀಲ್​, ಶಂಕರ ಶಿವಪೂರಿ, ವೀರೇಶ ಯಂಪಳ್ಳಿ, ಶಿವಕುಮಾರ ಅಂಬಲಗಿ, ಅಮರ ಲೋಡ್ಡನೂರ, ರಾಜಕುಮಾರ ತಳವಾರ, ನಂದಕುಮಾರ ಪಾಟೀಲ್​, ಸುಭಾಷ ಕೊಂಡಾ, ವೀರಭದ್ರಪ್ಪ ಮಲಕೊಡ, ನಾಗರಾಜ ಮಲಕೊಡ ಇತರರಿದ್ದರು.

ಎತ್ತಿನ ಬಂಡಿಗಳ ಬೃಹತ್​ ಮೆರವಣಿಗೆ

ಶ್ರೀ ಮಹಾಂತೇಶ್ವರ ಮಠದಿಂದ ಪ್ರಜಾಸೌಧದವರೆಗೂ 150 ಎತ್ತಿನ ಬಂಡಿಗಳ ಬೃಹತ್​ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ರೈತಪರ ೂಷಣೆ ಮೊಳಗಿದವು. ಸಾಲಾಗಿ ಸಾಗಿದ ಎತ್ತಿನಬಂಡಿಗಳು ಗ್ರಾಮೀಣ ಸಂಸತಿ ಮತ್ತು ಕೃಷಿಯ ಗತವೈಭವವನ್ನು ಮರುಕಳಿಸುವಂತೆ ಮಾಡಿದವು. ಬಳಿಕ ಜೋಡೆತ್ತಿನ ಕೃಷಿಕರನ್ನು ಉಳಿಸಿ&ಬೆಳೆಸಲು ಬಜೆಟ್​ನಲ್ಲಿ ಶೇ.10 ಅನುದಾನ ಮೀಸಲಿಡಲು ಸೂಕ್ತ ಕಾನೂನು ಜಾರಿಗೆ ತರಬೇಕು. ಮಾಸಿಕ 11,000 ರೂ. ಪ್ರೋತ್ಸಾಹ ಧನ ವಿತರಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಲಾಯುತು.