ಚಿಂಚೋಳಿ: ಸಮಾಜದ ಏಳಿಗೆಗೆ ಸಂಘಟನೆ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮರಾಠ ಸಮಾಜದ ಜಿಲ್ಲಾಧ್ಯಕ್ಷ ಮಾಣಿಕರಾವ ಪವಾರ್ ಹೇಳಿದರು.
ಚಂದಾಪುರದ ಅಂಬಿಗರ ಚೌಡಯ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮರಾಠ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಶಿವಾಜಿ ಮಹಾರಾಜರ ತತ್ವಗಳು ನಮಗೆ ಪ್ರೇರಣೆಯಾಗಿವೆ. ಅವರ ಮಾರ್ಗದಲ್ಲಿ ಯುವಕರು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ದಿನಕರ ಮೂಲಗೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೋಜಣ್ಣ ಪವಾರ್, ಪ್ರಮುಖರಾದ ಸುಧಾಕರ ಪಾಟೀಲ್, ಜನಾರ್ಧನ ಪಾಟೀಲ್, ದೀಪಕ ಪಾಟೀಲ್, ನರಸಿಂಗರಾವ್ ಪವಾರ್, ಆತೀಶ ಪವಾರ್, ಅವಿನಾಶ ಘಾಟಗೆ, ಲಕ್ಷ್ಮೀಕಾಂತ ಶಿಂಧೆ, ಜಗನ್ನಾಥ ಕದಮ್, ನಾಗುರಾವ್ ಬಸೂದೆ, ಅಶೋಕ ಮಂಗಳೆಕರ, ನಾಗರಾಜ ಸೇವತಕರ್, ಕೃಷ್ಣ ಜಾಧವ್, ಸಂಜು ಪಾಟೀಲ್, ಗೊವಿಂದ ಜಾಧವ್, ಅನುಪಮಾ ಪಾಟೀಲ್, ಅನೀಲ್ ಪಾಟೀಲ್, ಮಧುಕರ್ ಇದ್ದರು.
ಪದಾಧಿಕಾರಿಗಳು: ಶಾಜಿರಾವ ಸೂರ್ಯವಂಶಿ (ತಾಲೂಕು ಅಧ್ಯಕ್ಷ), ರಾಜು ನವಲೆ, ಜ್ಞಾನೇಶ್ವರ ಐನಾಪುರ (ಉಪಾಧ್ಯಕ್ಷರು), ರವೀಂದ್ರ ಟಿ.ಪಾಟೀಲ್ (ಪ್ರಧಾನ ಕಾರ್ಯದರ್ಶಿ), ಘಟೋತ್ಕಜ ಪವಾರ್ (ಖಜಾಂಚಿ), ಅಶೋಕ ಶಿಂಧೆ (ಸಂಘಟನಾ ಕಾರ್ಯದರ್ಶಿ), ಸಂಗೀತಾ ಜಿ. ಪವಾರ್ (ಮಹಿಳಾ ಟಕ ಅಧ್ಯಕ್ಷೆ), ನವೀನ ಮಾಲು (ಯುವ ಘಟಕ ಅಧ್ಯಕ್ಷ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.