slum dwellers 
ಕಲಬುರಗಿ

ಸರ್ಕಾರ ಸ್ಲಂ ಜನರ ಋಣ ತೀರಿಸಲಿ

ಪ್ರಮುಖ ಮುಖ್ಯಾಂಶಗಳು

  • ಎ.ನರಸಿಂಹಮೂರ್ತಿ ಕೋರಿಕೆ
  • ವಸತಿ ಹಕ್ಕಿಗೆ ಆಗ್ರಹ
ಕಲಬುರಗಿ: ಕಾಂಗ್ರೆಸ್​ ಸರ್ಕಾರ ಕಳೆದ ಮೂರು ವರ್ಷದಲ್ಲಿ ವಸತಿ ಯೋಜನೆಗೆ 3.5 ಲಕ್ಷ ಸಬ್ಸಿಡಿ ಬಿಟ್ಟರೆ ಯಾವುದೇ ಗುರುತರ ಸಾಧನೆ ಅಥವಾ ಸ್ಲಂ ಜನರಿಗೆ ಅನುಕೂಲ ಮಾಡಿದ್ದು, ಇನ್ನಾದರೂ ಸ್ಲಂ ಜನರ ಋಣ ತೀರಿಸಬೇಕು ಎಂದು ಸ್ಲಂ ಜನಾಂದೋಲನದ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.
ನಗರದ ಜಗತ್​ ವೃತ್ತದಲ್ಲಿನ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿ ಎದುರು ಸ್ಲಂ ಜನಾಂದೋಲನ ಗದಗನಲ್ಲಿ ಜೂ.20ರಂದು ನಡೆಯಲಿರುವ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಭಿತ್ತಿ ಪತ್ರ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಸ್ಲಂ ಜನರಿಗೆ ಉದ್ಯೋಗ ಖಾತ್ರಿ ನೀಡಬೇಕು, ಪ್ರತ್ಯೇಕ ಸಚಿವಾಲಯ ಘೋಷಿಸಬೇಕು, ನಿವೇಶನ ರಹಿತರಿಗೆ ವಸತಿ ಖಾತ್ರಿಗಾಗಿ ವಸತಿ ಹಕ್ಕು ಮತ್ತು ಭೂಮಿ ಬ್ಯಾಂಕ್​ ನೀತಿ ಜಾರಿಗೆ ತರಬೇಕು, ಚಿತ್ರದುರ್ಗದಲ್ಲಿ ಘೋಷಿಸಿದಂತೆ ಸ್ಲಂ ನಲ್ಲಿರುವ ಎಸ್ಸಿ, ಎಸ್ಟಿ ಕುಟುಂಬಗಳಿಗೆ ಉಚಿತ ವಸತಿ ಮತ್ತು ಸೈಟ್​ ವಿತರಿಸಬೇಕು, ಭೂ ಗ್ಯಾರಂಟಿ ಯೋಜನೆ ಅಡಿ ಹಕ್ಕುಪುತ್ರ ಮತ್ತು ಪ್ರಧಾನ ಮಂತ್ರಿ ಅವಾಸ್​ ಯೋಜನೆ ಅಡಿ ಮನೆಗಳನ್ನು ನೀಡಬೇಕು ಎಂದು ಕೋರಿದರು.
ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಗೌರಮ್ಮ ಮಾಕಾ, ಸುನಿತಾ ಕೊಲ್ಲೂರ, ಶರಣು ಹಂಗರಗಿ, ಶರಣು ಕಣ್ಣಿ ಇತರರಿದ್ದರು.