ಕಲಬುರಗಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು. ಡಾ.ಅಜಯಸಿಂಗ್, ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ್ ಇದ್ದರು.
- ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
- ಅಮಿತ್ ಷಾ ಅಸಮರ್ಥ ಗೃಹ ಮಂತ್ರಿ
ಕಲಬುರಗಿ: ಸಂವಿಧಾನ ವಿರೋಧಿಯಾಗಿರುವ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ಕಾನೂನು ಹೋರಾಟ ರೂಪಿಸುತ್ತಿದೆ ಎಂದು ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೇಂದ್ರದ ವಿಬಿ ಜಿ ರಾಮ್ ಜಿ ಕಾಯ್ದೆ ದಶರಥನ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ಅದು ನಾಥೂರಾಮ್. ನಾಥೂರಾಮ್ ಎಂದರೆ ಆರೆಸ್ಸೆಸ್ ತತ್ವದ ರಾಮ. ಇವರ ತತ್ವಗಳು ಹೇಗಿರುತ್ತವೆ ಎಂಬುದು ಗೊತ್ತಿದೆ. ಧರ್ಮದ ನಶೆಯಲ್ಲಿ ಜನರನ್ನು ತೇಲಾಡಿಸುವುದಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಕಾಯ್ದೆ ಬಗ್ಗೆ ಚರ್ಚಿಸಲು ಎರಡು ದಿನದ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಬಿಜೆಪಿಯವರು ತಮ್ಮ ವಿಚಾರ ಮತ್ತು ನಾವು ನಮ್ಮ ವಿಚಾರ ಹೇಳುತ್ತೇವೆ. ಇದರೊಂದಿಗೆ ಕಾನೂನು ಹೋರಾಟ ರೂಪಿಸುತ್ತಿದ್ದು, ಮಹಿಳಾ, ಕೂಲಿ ಕಾರ್ಮಿಕ ಸಂಘಟನೆಗಳು ಕೈಜೋಡಿಸಲಿವೆ. ಮೂರು ಕೃಷಿ ಕಾಯ್ದೆ ವಾಪಸ್ ಪಡೆದಂತೆ ಇದೂ ವಾಪಸ್ ಆಗಲಿದೆ ಎಂದು ಹೇಳಿದರು.
ನರೇಗಾದಡಿ ಅವ್ಯವಹಾರ ಆಗಿದ್ದರಿಂದ ಹೊಸ ಕಾಯ್ದೆ ಜಾರಿಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ ಎಂಬ ಬಿಜೆಪಿ ಹೇಳಿಕೆಗೆ, ದಿನಕ್ಕೆ ಸುಮಾರು ೧೨ ಕೋಟಿ ಕಾರ್ಮಿಕರು ಕೆಲಸ ಮಾಡುವ ಯೋಜನೆ ಇದಾಗಿದೆ. ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆ ನಡೆಯುತ್ತಿತ್ತು. ಅಂತಹ ಬೃಹತ್ ಯೋಜನೆಯಲ್ಲಿ ಎ¯್ಲೆÆÃ ಒಂದೆರಡು ಕಡೆ ತಪ್ಪುಗಳಾದಾಗ ಇಡೀ ಯೋಜನೆ ರದ್ದುಗೊಳಿಸುವುದು ಎಷ್ಟು ಸರಿ? ಪ್ರಧಾನಮಂತ್ರಿ ಕೌಶಲ ಯೋಜನೆಯಡಿ ಸುಮಾರು ೧೪,೫೦೦ ಕೋಟಿ ಅವ್ಯವಹಾರವಾಗಿದೆ ಎಂದು ವರದಿ ಹೇಳುತ್ತಿದೆ. ಹಾಗಾದಾರೆ ಅದನ್ನೇಕೆ ರದ್ದುಪಡಿಸಿಲ್ಲ ಎಂದು ಪ್ರಶ್ನಿಸಿದರು.
೨೦ ವರ್ಷದಿಂದ ನರೇಗಾ ಜಾರಿಯಲ್ಲಿದ್ದು, ಕಳೆದ ೧೧ ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಭ್ರಷ್ಟಾಚಾರ ನಡೆದಿದ್ದರೆ ಏಕೆ ವಿರೋಧಿಸಲಿಲ್ಲ? ಇವರಿಗೆಷ್ಟು ಪಾಲು ಹೋಗಿತ್ತು? ಅಥವಾ ಪಾಲು ಕಡಿಮೆಯಾಗಿತ್ತಾ ಎಂದು ಖಾರವಾಗಿ ಪ್ರಶ್ನಿಸಿದ ಖರ್ಗೆ, ಬಿಜೆಪಿ ಮೊದಲಿನಿಂದಲೂ ಮೀಸಲು ವಿರೋಧಿಯಾಗಿದೆ. ಸುಪ್ರೀಂಕೋರ್ಟ್ ಒಳಮೀಸಲಾತಿ ತೀರ್ಮಾನ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಈ ವಿಚಾರದಲ್ಲಿ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ಶುದ್ಧ ನೀರು ಒದಗಿಸುವ ಆರ್‌ಒ ಪ್ಲಾಂಟ್ ನಿರ್ವಹಣೆಗೆ ನೀಲಿನಕ್ಷೆ ತಯಾರಿಸಲಾಗುತ್ತಿದೆ. ಈ ಹಿಂದೆ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ಸ್ಥಾಪಿಸಿ ನಿರ್ವಹಣೆ ಗ್ರಾಪಂಗಳಿಗೆ ವಹಿಸಲಾಗುತ್ತಿತ್ತು. ಅದರಿಂದ ಘಟಕಗಳ ನಿರ್ವಹಣೆ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳೊAದಿಗೆ ಚರ್ಚೆ ನಡೆಸುತ್ತಿದ್ದರೂ ಯಾವ ಕಂಪನಿಯೂ ತಯಾರಿಲ್ಲ. ಆದರೂ ನೂತನ ತಂತ್ರe್ಞÁನ ಬಳಸಿ ನೀರಿನ ಮರುಬಳಕೆ ಮತ್ತು ಉಳಿಕೆ ಬಗ್ಗೆ ಸಮಗ್ರ ಕಾರ್ಯ ರೂಪಿಸಿಲು ನೀಲಿನಕ್ಷೆ ತಯಾರಿಸುವುದಾಗಿ ತಿಳಿಸಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಇದ್ದರು.
ಬಾಂಗ್ಲಾ ವಲಸೆ ತಡೆ ಕೇಂದ್ರದ ಕೆಲಸ
ಅಕ್ರಮ ಬಾಂಗ್ಲಾ ವಲಸೆ ತಡೆಗಟ್ಟಬೇಕಿರುವುದು ಕೇಂದ್ರದ ಜವಾಬ್ದಾರಿ. ಪಾಕಿಸ್ತಾನ ಭಯೋತ್ಪಾದಕರು ಹಾಗೂ ಬಾಂಗ್ಲಾದೇಶ ಪ್ರಜೆಗಳು ಗಡಿಯಿಂದ ಒಳಗೆ ಬಂದರೆ ಗೃಹ ಸಚಿವ ಅಮಿತ್ ಷಾ ತಡೆಯಬೇಕು. ಅದನ್ನು ಬಿಟ್ಟು ತಮಿಳುನಾಡು, ಬಿಹಾರ ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪಿಸುತ್ತಿz್ದÁರೆ. ನನ್ನ ಪ್ರಕಾರ ಅವರೊಬ್ಬ ಅಸಮರ್ಥ ಗೃಹ ಮಂತ್ರಿ ಎಂದು ಸಚಿವ ಖರ್ಗೆ ಟೀಕಿಸಿದರು.
ತನಿಖಾ ವರದಿ ಸಿಎಂ ಬಳಿ
ಕಲಬುರಗಿಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಬಂದ್ ಸಹ ಮಾಡಿಲ್ಲ. ಯಾಕೆಂದರೆ ಸಂಘದ ವ್ಯವಹಾರ ಕುರಿತು ಇನ್ನೂ ಆಡಿಟ್ ಬಾಕಿ ಇದೆ. ಈವರೆಗೆ ಕೈಗೊಂಡ ತನಿಖಾ ವರದಿ ಸಿಎಂ ಕೈ ಸೇರಿದೆ ಎಂದರು. ಮೆಗಾ ಟೆಕ್ಸ್ಟೈಲï ಪಾರ್ಕ್ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ನಗರ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ ಆಡಿಟ್ ನಡೆಸಿದ್ದು, ಸದ್ಯದಲ್ಲೇ ಆ ವಿಚಾರ ಹಂಚಿಕೊಳ್ಳಲಾಗುವುದು. ಸಂಕ್ರಾAತಿ ನಂತರ ರಾಜ್ಯದಲ್ಲಿ ಭಾರಿ ಬದಲಾವಣೆ ಆಗಲಿದೆ. ಅದು ಬಿಜೆಪಿ ರಾಜ್ಯಾಧ್ಯP್ಷÀ ಹಾಗೂ ವಿಪಕ್ಷ ನಾಯಕರ ವಿಷಯದಲ್ಲಿ ಎಂದು ವ್ಯಂಗ್ಯವಾಡಿದರು.
ದ್ವೇಷ ಭಾಷಣ ವಿರುದ್ಧದ ಬಿಲï ರಾಜ್ಯಪಾಲರ ಬಳಿ ಇದ್ದು, ಸರ್ಕಾರದ ಕೆಲ ಬಿಲïಗಳು ಪಾಸಾಗಿವೆ. ಸರ್ಕಾರಕ್ಕೆ ಸಲಹೆ ಸೂಚನೆ ಇದ್ದರೆ ಕೊಡಲಿ. ಆದರೆ ರಾಜಕೀಯ ದುರುz್ದÉÃಶದಿಂದಾಗಿ ತಡೆಹಿಡಿಯುವುದು ಸರಿಯಲ್ಲ.
| ಪ್ರಿಯಾಂಕ್ ಖರ್ಗೆಜಿಲ್ಲಾ ಉಸ್ತುವಾರಿ ಸಚಿವ