krishikalpa center 
ಕಲಬುರಗಿ

ಉದ್ಯಮ ಬೆಳವಣಿಗೆಗೆ ಕೃಷಿಕಲ್ಪ ಸೆಂಟರ್​

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ್​ ರ್ಖಗೆ ಹೇಳಿಕೆ
  • ಎಕ್ಸ್​ಲೆನ್ಸ್​, ವಿಕಾಸ, ಪ್ರೇರಣೆ ಉದ್ಘಾಟನೆ
ಕಲಬುರಗಿ: ಕೃಷಿಕಲ್ಪ ಸೆಂಟರ್​ ಆಫ್​ ಎಕ್ಸ್​ಲೆನ್ಸ್​ ಕಲ್ಯಾಣ ಕರ್ನಾಟಕ ಭಾಗದ ಉದ್ಯಮ ಬೆಳವಣಿಗೆಗೆ ಪೂರಕ ಆಗಲಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಹೇಳಿದರು.
ನಗರದ ಗೋಲ್ಡ್​ ಹಬ್​ನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​, ಐಟಿ ಬಿಟಿ ಇಲಾಖೆ, ಕೆಕೆಆರ್​ಡಿಬಿ, ಕೃಷಿಕಲ್ಪ ಅಡಿ ಆಯೋಜಿಸಿದ್ದ ಕೃಷಿಕಲ್ಪ ಸೆಂಟರ್​ ಆ್​ ಎಕ್ಸ್​ಲೆನ್ಸ್​ ಉದ್ಘಾಟನೆ, ವಿಕಾಸ ಮತ್ತು ಪ್ರೇರಣಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ 18,000 ನೂತನ ಸ್ಟಾರ್ಟ್​ಪ್​ ನೋಂದಣಿ ಮಾಡಿಕೊಂಡಿದ್ದು, ಸೂಕ್ತ ಮಾರ್ಗದರ್ಶನ, ಪೈಲೆಟ್​, ಹೂಡಿಕೆ ಬೇಕು. ಇದಕ್ಕೆ ಅನುದಾನ ಅಗತ್ಯವಿದ್ದು, ಸರ್ಕಾರ 1500 ಸ್ಟಾರ್ಟ್​ಪ್​ಗಳಿಗೆ ಅನುದಾನ ನೀಡಲು ತಯಾರಿದೆ ಎಂದರು.
ಬಿಯಾಂಡ್​ ಬೆಂಗಳೂರು ಅಡಿ ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ವಾತಾವರಣ ನಿರ್ಮಿಸಲು, ಸ್ಟಾರ್ಟ್​ಪ್​ಗಳಿಗೆ ಸಹಕಾರ ನೀಡಲಾಗುತ್ತಿದೆ
ನವೋದ್ಯಮದ ಅಭಿವೃದ್ದಿಯನ್ನು ಪರಿಗಣಿಸಿ ಡೀಪ್​ ಟೆಕ್​ ಸ್ಟಾರ್ಟ್​ಪ್​ ಪ್ರೋತ್ಸಾಹಕ್ಕೆ ಅನುದಾನ ನೀಡಲಾಗುವುದು. ಕೃಷಿ ವಲಯದ ಅಭಿವೃದ್ಧಿಗೆ ಕಲಬುರಗಿಯಲ್ಲಿ ಅಗ್ರಿಕಲ್ಚರ್​ ಸೆಂಟರ್​ ಆ್​ ಎಕ್ಸ್​ಲೆನ್ಸ್​ ಸ್ಥಾಪನೆಗೆ ಮುಂದಾಗಿದ್ದು, ಕೃಷಿ ವಲಯಕ್ಕೆ ಎಕ್ಸ್​ಲೆನ್ಸ್​ ದೇಶದಲ್ಲೇ ಮೊದಲನೆಯದ್ದು ಎಂದರು.
ಕೆಕೆಆರ್​ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ ಅಜಯ್​ ಸಿಂಗ್​ ಮಾತನಾಡಿ, ಸರ್ಕಾರ, ಕೆಕೆಆರ್​ಡಿಬಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮ ಸ್ಥಾಪನೆಗೆ ಆದ್ಯತೆ ನೀಡಿದೆ. ಕೃಷಿ ಕಲ್ಪದೊಂದಿಗೆ ಹೊಸ ಕಾರ್ಯಕ್ರಮ ಜಾರಿ ಮಾಡುತ್ತಿದೆ ಎಂದರು.
ಶಾಸಕರಾದ ಎಂ.ವೈ ಪಾಟೀಲ್​, ಅಲ್ಲಮಪ್ರಭು ಪಾಟೀಲ್​, ಎಂಎಲ್​ಸಿ ಜಗದೇವ ಗುತ್ತೇದಾರ, ಪ್ರಮುಖರಾದ ಚಂದ್ರಿಕಾ ಪರಮೇಶ್ವರ, ಅರುಣಕುಮಾರ ಎಂ.ವೈ ಪಾಟೀಲ, ಪ್ರವಿಣ ಹರವಾಳ, ಜಿಲ್ಲಾಧಿಕಾರಿ ಇಕ್ರಮ್​ ಶರ್​ೀ, ಸಿಇಒ ಭಂವರ್​ ಸಿಂಗ್​ ಮೀನಾ, ಡಾ.ಶರಣಪ್ಪ ಎಸ್​.ಡಿ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಎಡಿಸಿ ರಾಯಪ್ಪ ಹುಣಸಗಿ, ಎಸಿ ಸಾಹಿತ್ಯ, ಕೃಷಿಕಲ್ಪದ ಸಿಇಒ ಸಿಎಂ ಪಾಟೀಲ್​ ಇತರರಿದ್ದರು.

ಐದು, , ಹತ್ತು ವರ್ಷದ ಅಭಿವೃದ್ಧಿ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕಾದ ಅನುದಾನದ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಗೋವಿಂದರಾವ್​ ವರದಿಯಂತೆ ಈ ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಕೃಷಿ ಕಲ್ಪಕ್ಕೆ ಕೆಕೆಆರ್​ಡಿಬಿಯಿಂದ ಸಹಕಾರ ನೀಡಿ, ನವೋದ್ಯಮದ ಬೆಳವಣಿಗೆಗೆ ಶಕ್ತಿ ತುಂಬಲಾಗುವುದು.

— ಡಾ.ಅಜಯಸಿಂಗ್​, ಅಧ್ಯಕ್ಷ ಕೆಕೆಆರ್​ಡಿಬಿ