Kaskota farmers 
ಕಲಬುರಗಿ

ಕಸ್ಕೊಟಾದಿಂದ ಹಾನಿ ಪರಿಹಾರಕ್ಕೆ: ಸಿಎಂಗೆ ರೈತರ ಮನವಿ

ಚಿಂಚೋಳಿ : ತಾಲೂಕಿನ ಕಸ್ಕೊಟಾ ನಿರ್ಮೂಲನ ಹೋರಾಟ ಸಮಿತಿ ಸದಸ್ಯ ರೈತರು ಚಿತ್ತಾಪೂರ ತಾಲೂಕಿನ ಸೂಗೂರು (ಎನ್) ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಭೇಟಿ ಮಾಡಿ ಕಸ್ಕೊಟಾದೊಂದಿಗೆ ಮನವಿ ಸಲ್ಲಿಸಿದರು.
ರೈತರೊಂದಿಗೆ ಧ್ವನಿಗೂಡಿಸಿದ ಉಸ್ತುವಾರಿ ಮಂತ್ರಿ ಖರ್ಗೆ
ರೈತ ಮುಖಂಡ ಗೋಪಾಲ ಎಂ.ಪಿ ಸಿ. ಎಂ ಬಳಿ ಕಸ್ಕೊಟಾ ಕುರಿತು ಅಳಿಲು ತೊಡಿಕೊಳ್ಳುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಧ್ವನಿ ಗೂಡಿಸಿ ಈಗಾಗಲೇ ಕಸ್ಕೊಟಾ ನಿಯಂತ್ರಣ ಕುರಿತು ಚಿಂಚೋಳಿ, ಚಿತ್ತಾಪೂರ, ಸೇಡಂ ಪಟ್ಟಣಕ್ಕೆ ವಾಹನ ಸಂಚಾರಕ್ಕೆ ಚಾಲನೆ ನೀಡಿದ್ದೇವೆ.
ಚಿಂಚೋಳಿ, ಚಿತ್ತಾಪೂರ, ಸೇಡಂ ಮತಕ್ಷೇತ್ರದಲ್ಲಿ ಕಸ್ಕೊಟಾ ವ್ಯಾಪಕವಾಗಿ ಹರಡಿದೆ. ಬೆಳೆಗಳಿಗೆ ಮಾರಕವಿದೆ. ಸದನದಲ್ಲಿ ಹಾಗೂ ಚಿಂಚೋಳಿಯಲ್ಲಿ ವರದಿ ಬಂದ ನಂತರ ಪರಿಹಾರ ಕಲ್ಪಿಸುವ ವಾಗ್ದನ್ ಮಾಡಿದ್ದೇನೆ. ತಾವು ಗಂಭೀರವಾಗಿ ಪರಿಗಣಿಸಿ ಎಂದು ಸಿ. ಎಂ. ಅವರಿಗೆ ಮನವರಿಕೆ ಮಾಡಿದರು.
ಸ್ಪಂದಿಸುವ ಭರವಸೆ ಸಿ. ಎಂ
ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈರುಳ್ಳಿ ಬೆಳೆಗೆ ಆವರಿಸಿದ ಕಸ್ಕೊಟಾ ಪರಿಶೀಲನೆ ನಡೆಸಿದರು. ತಕ್ಷಣವೇ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಈ ವೇಳೆ ಗೋಪಾಲ ಎಂ. ಪಿ. ಗಾರಂಪಳ್ಳಿ, ಶಿವಕುಮಾರ ಅಂಬಲಗಿ, ಸಂಗಪ್ಪ ಚಿಂಚೋಳಿ, ರೇವಣಸಿದ್ದಪ್ಪ ಪೂಜಾರಿ, ನಾಗರಾಜ ಗುತ್ತೇದಾರ, ಪ್ರಭು ಭೋವಿ, ಮೈಬೂಬ ಅಲಿ ಸೇರಿದಂತೆ ಅನೇಕರು ಇದ್ದರು.