ಅಕ್ಕಲಕೋಟ ತಾಲೂಕಿನ ಜೇವೂರ ಗ್ರಾಮದಲ್ಲಿ ಕಾಶಿ ವಿಶ್ವೇಶ್ವರ ರಥೋತ್ಸವ ಭಕ್ತರ ಜೈೂಷಗಳ ಮಧ್ಯೆ ಶನಿವಾರ ಜರುಗಿತು. ಮಲ್ಲಿಕಾರ್ಜುನ ಪಾಟೀಲ್​, ಸುಭಾಷ ಪಾಟೀಲ್​, ಕಾಶಿರಾಯ ಪಾಟೀಲ್​, ಕಾಶಿನಾಥ ಕಡಗಂಚಿ ಇತರರಿದ್ದರು. 
ಕಲಬುರಗಿ

ಕಾಶಿ ವಿಶ್ವೇಶ್ವರ ಮಹಾರಾಜ ಕೀ ಜೈ

ಕರಜಗಿ: ಅಕ್ಕಲಕೋಟ ತಾಲೂಕಿನ ಜೇವೂರ ಗ್ರಾಮದಲ್ಲಿ ಕಾಶಿ ವಿಶ್ವೇಶ್ವರ ಮಹಾರಾಜರ ರಥೋತ್ಸವ ಭಕ್ತರ ಜಯಘೋಷಗಳ ಮಧ್ಯೆ ಶನಿವಾರ ಜರುಗಿತು. ಹೂವಿನ ಹಾರ ಹಾಗೂ ವಿದ್ಯುತ್​ ದೀಪಾಲಂಕಾರ ಕಣ್ಮನಸೆಳೆಯಿತು. ದೀಪಾವಳಿ ಪಾಡ್ಯದಿಂದ ಪಾಂಡವ ಪಂಚಮಿವರೆಗೆ ಪ್ರತಿದಿನ ಆಧ್ಯಾತ್ಮಿಕ, ಸಾಮಾಜಿಕ, ಸಾಂಸತಿಕ ಕಾರ್ಯಕ್ರಮ ನಡೆದವು. ಸಂಜಯ ಪಾಟೀಲ್​ ವಾರಕರಿ ತಂಡದಿಂದ ಅಧ್ಯಾತ್ಮಿಕ ಹಾಗೂ ವಿನೋದ ಅವರಿಂದ ಕೀರ್ತನೆ, ಮಹಾಲಿಂಗಯ್ಯ ಶಾಸ್ತ್ರಿಗಳಿಂದ ಜೀವನ ದರ್ಶನ, ಯೂಟ್ಯೂಬ್​ ಸ್ಟಾರ್​ ಹಣಮಂತ ಆಲಮಟ್ಟಿ, ಗಿಡ್ಡ ಶಂಕ್ರ್ಯಾ ತಂಡದಿಂದ ಹಾಸ್ಯ ಸಂಜೆ, ಬೆಂಗಳೂರು ಝೀ ಕನ್ನಡ ಸರಿಗಮಪದ ಜ್ಞಾನ ಗುರುರಾಜ, ಪ್ರಜ್ಞಾ ಮರಾಠೆ ಹಾಗೂ ಅನ್ವಿಥ ಕುಮಾರ ತಂಡದ ಸ್ವರ ಸಂಜೆ ಭಕ್ತರನ್ನು ರಂಜಿಸಿದವು. ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್​, ಪ್ರಮುಖರಾದ ಸುಭಾಷ ಪಾಟೀಲ್​, ಕಾಶಿರಾಯ ಪಾಟೀಲ್​, ಕಾಶಿನಾಥ ಕಡಗಂಚಿ, ಶಿವರಾಜ ಬೋರಿಕರಜಗಿ, ಅಂಬಾರಾಯ ಕನೋಜಿ, ಈರಣ್ಣ ಕಣಮುಸೆ, ಶಂಕರ ಅಜಗೊಂಡೆ, ಲಕ್ಷಿ$್ಮಪುತ್ರ ಕಿರನಳ್ಳಿ, ಸೋಮಯ್ಯಾ ಸ್ವಾಮಿ ಇತರರಿದ್ದರು.