ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 16 ಹಾಗೂ 17 ರಂದು ಕಲಬುರಗಿಯ ನಗರದ ಭಾಪೂಗೌಡ ದರ್ಶನಾಪುರ ರಂಗಮಂದಿರ ಕನ್ನಡ ಭವನದಲ್ಲಿ ಇಂದು ಕನ್ನಡ ಸಾಹಿತ್ಯ ಸಮ್ಮೇಳನ ಆರಂಭ ಆಯಿತು.
ರಾಷ್ಟ್ರಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ , ಹಾಗೂ ನಾಡ ಧ್ವಜಾರೋಹಣ
ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಲೀಲಾ ಎಸ್. ಕಲಗುರ್ಕಿ ಅವರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಮುಡಬಿ ಗುಂಡೇರಾವ್, ಗೌರವ ಕಾರ್ಯದರ್ಶಿಗಳಾದ ಶಿವರಾಜ್ ಅಂಡಗಿ, ಧರ್ಮಣ್ಣ ಹೆಚ್ ದನ್ನಿ, ಗೌರವ ಸಲಹೆಗಾರರಾದ ಗೌರವ ಕೋಶ್ಯಾಧ್ಯಕ್ಷರಾಗಿ ಧರ್ಮರಾಜ್ ಜವಳಿ ಧರ್ಮರಾಜ್ ಜವಳಿ,ಶರಣ್ ರಾಜ್ ಚಪ್ಪರಬಂದಿ ಗೌರವ ಸಲಹೆಗಾರರಾಗಿ ಸೇರಿದಂತೆ ಅತಿಥಿಗಳು, ಪದಾಧಿಕಾರಿಗಳು ಇದ್ದರು.