ಗುಲ್ಬರ್ಗ ವಿವಿ ಹರಿಹರ ಸಭಾಂಗಣದಲ್ಲಿ ಸನ್ನತಿ (ಕನಗನಹಳ್ಳಿ) ಬೌದ್ಧ ಕೇಂದ್ರದ ಸಾಂಸತಿಕ ಆಯಾಮ ಕುರಿತು ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಹಿರಿಯ ಪುರಾತತ್ವ ಶಾಸ ಡಾ.ಎಂ.ಎಸ್.ಕೃಷ್ಣಮೂರ್ತಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಪ್ರೊ.ಶಶಿಕಾಂತ್ ಉಡಿಕೇರಿ, ಪ್ರೊ.ಮಲ್ಲೇಪುರಂ ವೆಂಕಟೇಶ್, ಪ್ರೊ.ಬಸವರಾಜ ಸಣ್ಣಕ್ಕಿ, ಪ್ರೊ.ಎಚ್.ಟಿ. ಪೋತೆ ಇದ್ದರು.
- ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣ
- ಪುರಾತತ್ವಶಾಸಜ್ಞ ಡಾ.ಎಂ.ಎಸ್.ಕೃಷ್ಣಮೂರ್ತಿ ಅನಿಸಿಕೆ
ಕಲಬುರಗಿ: ಭಾರತದಲ್ಲಿ ಕನಗನಹಳ್ಳಿ ಸನ್ನತಿ ವಿಶಿಷ್ಟ ಬೌದ್ಧ ಕೇಂದ್ರವಾಗಿದೆ. ಇಲ್ಲಿನ ಬೌದ್ಧ ಮಹಾ ಸ್ತೂಪಗಳು, ಶಾಸನಗಳು ಬುದ್ಧನ ಜೀವನದ ಐತಿಹಾಸಿಕ ಪರಂಪರೆ ಹೇಳುತ್ತವೆ. ಅಲ್ಲಿನ ಕುರುಹುಗಳು ನಮ್ಮೆಲ್ಲರಿಗೂ ಮುಂದಿನ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತವೆ ಎಂದು ಮೈಸೂರಿನ ಹಿರಿಯ ಪುರಾತತ್ವಶಾಸಜ್ಞ ಡಾ.ಎಂ.ಎಸ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಕಲಬುರಗಿಯ ನಳಂದ ವಿಹಾರದ ಪಾಲಿ ಇನ್ಸ್ಟಿಟ್ಯೂಟ್ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಹರಿಹರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸನ್ನತಿ (ಕನಗನಹಳ್ಳಿ) ಬೌದ್ಧ ಕೇಂದ್ರದ ಸಾಂಸತಿಕ ಆಯಾಮಗಳು ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
1954ರಲ್ಲಿ ಕಪಟರಾಳ ಕೃಷ್ಣರಾವ್ ಅವರು ಸನ್ನತಿಯ ಮಹತ್ವ ದಾಖಲೆ ಶೋಧಿಸಿ ಅವುಗಳ ಮಹತ್ವ ದಾಖಲಿಸಿದ್ದಾರೆ. ತುಂಬಾ ಅಪರೂಪದ ವಸ್ತುಗಳು, ಶಿಲ್ಪಗಳು, ಭೌತಿಕ ಅವಶೇಷಗಳು, ಪುರಾವೆಗಳು ಬುದ್ಧನ ಜೀವನ ಮತ್ತು ಸಾಧನೆ ಹೇಳುತ್ತವೆ. ಕರ್ನಾಟಕದಲ್ಲಿ ಬೌದ್ಧ ಸಂಸತಿ ಯೋಜನೆಗಾಗಿ ಸನ್ನತಿ ಭೇಟಿ ಸಂದರ್ಭದಲ್ಲಿ ಸಿಕ್ಕಿದ ಪಳಿಯುಳಿಕೆಗಳಲ್ಲಿ ಮಹತ್ವದ ಅಂಶಗಳು ದೊರಕಿವೆ ಎಂದರು.
ಸನ್ನತಿ ಶಿಲೆಗಳ ಆಯಾಮ ದೊಡ್ಡದು
ಸನ್ನತಿಯ ವಸ್ತುಗಳು ಮತ್ತು ಶಿಲೆಗಳ ಆಯಾಮ ಬಹಳ ದೊಡ್ಡದಿದೆ. ಪ್ರತಿ ಶಿಲೆಗಳ ಮೇಲೆ ಬುದ್ಧನ ಕುರಿತ ಹೇಳಿಕೆಗಳು, ಚಿತ್ರಗಳಿವೆ. ಸನ್ನತಿಯ ಶಿಲೆಗಳ ಮೇಲೆ ರಾಯ ಅಶೋಕೋ ಎಂಬ ವಾಕ್ಯವಿದೆ. ಬಹುಶ@ ಅಶೋಕ ಸನ್ನತಿಗೆ ಬಂದಿರಬಹುದೆಂಬ ಗೋಚರವಿದೆ. ಮೊದಲು ಹೀನಯಾನ ಸಂಸತಿ, ಅನಂತರ ಮಹಾಯಾನ ಪಂಥ ಬೆಳೆದಿದೆ. ಅದು ಯಾವಾಗ ಬದಲಾಯಿತು ಎಂಬುದಕ್ಕೂ ಕುರುಹು ಪತ್ತೆಯಾಗಿವೆ. ಬುದ್ಧನ ಹುಟ್ಟು, ಧ್ಯಾನ, ಶಾಂತಿ ಮಾರ್ಗ, ಪರಿನಿರ್ವಾಣ, ಧರ್ಮಚಕ್ರದ ನಿರೂಪಣೆ, ಅಶೋಕನ ಬೌದ್ಧಧರ್ಮ ಪ್ರಚಾರ, ಬ್ರಾಹ್ಮಿಲಿಪಿ ಮತ್ತಿ ಪಾಲಿ ಭಾಷೆಯಲ್ಲಿ ದಾಖಲಿರುವ ಬುದ್ಧನ ಜೀವನ ಚರಿತ್ರೆಯ ಅವಶೇಷ ಮತ್ತು ಕುರುಹುಗಳ ಸಂಗತಿ, ಛಾಯಾಚಿತ್ರಗಳನ್ನು ಪ್ರದರ್ಶಿಸಿ ಬೆಳಕು ಚೆಲ್ಲಿದರು.
ಸನ್ನತಿ ಪ್ರವಾಸಿಗರ ಆಕರ್ಷಣೆ
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಮಾತನಾಡಿ, ಸನ್ನತಿ ಕೇಂದ್ರ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರಖ್ಯಾತ ಹಂಪಿ ೇತ್ರದಂತೆ ಬೌದ್ಧ ೇತ್ರ ಸನ್ನತಿಯೂ ಪ್ರಸಿದ್ಧಿ ಪಡೆಯಬೇಕಿದೆ. ಸನ್ನತಿ ಕೇವಲ ಸ್ಥಳವಲ್ಲ. ಅದೊಂದು ಭಾರತೀಯರ ನಾಗರೀಕತೆ ಮತ್ತು ಪರಂಪರೆ. ಕಲ್ಯಾಣ ಕರ್ನಾಟಕ ಭಾಗದ ಸಂಪತ್ತು, ಸುಪ್ರಸಿದ್ಧ ಸ್ಥಳ, ಪ್ರೇಕ್ಷಣಿಯ ಸ್ಥಳವಾಗಿದೆ. ಈ ೇತ್ರದ ಬಗ್ಗೆ ಹೆಚ್ಚು ಅಧ್ಯಯನ ಮತ್ತು ಸಂಶೋಧನೆಗಳು ನಡೆಯಬೇಕು ಎಂದರು.
ವಿವಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಕಲಬುರಗಿಯಲ್ಲಿ ಮೇರು ನಾಯಕ ಡಾ.ಮಲ್ಲಿಕಾರ್ಜುನ ರ್ಖಗೆ ಕಾಳಜಿ ಮತ್ತು ಮುತುವರ್ಜಿಯಿಂದ ಸ್ಥಾಪನೆಗೊಂಡಿರುವ ಎರಡು ಸಂಸ್ಥೆಗಳು ಒಪ್ಪಂದದ ಮೂಲಕ ಪಾಲಿ ಮತ್ತು ಬೌದ್ಧ ಪಿಜಿ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ. ಹದಿನೈದು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಾರ್ಯಾಗಾರ, ವಿಶೇಷ ಉಪನ್ಯಾಸ ಆಯೋಜಿಸಲಾಗುತ್ತಿದೆ. ಮುಂದಿನ ವರ್ಷದಿಂದ ಎಂಎ ಇನ್ ಪಾಲಿ ಮತ್ತು ಬೌದ್ಧ ಸ್ಟಡಿಸ್ ಆರಂಭಿಸಲು ಈಗಾಗಲೇ ಪಠ್ಯಕ್ರಮ ಸಿದ್ಧಗೊಂಡಿದೆ ಎಂದರು.
ಸಂಗೀತ ವಿಭಾಗದ ಅಧ್ಯಾಪಕಿ ಡಾ.ಲಕ್ಷಿ$್ಮಶಂಕರ ಜೋಷಿ, ಡಾ. ದಾನಮ್ಮ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಸಂಶೋಧನಾ ವಿದ್ಯಾರ್ಥಿ ಭಾಗ್ಯಶ್ರೀ ನಿರೂಪಿಸಿದರು.
ವಿಚಾರ ಗೋಷ್ಠಿ ವಿಷಯ ಮಂಡನೆ
ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಬೆಂಗಳೂರು ಐ.ಜಿ.ಎನ್.ಸಿ ಪೇಲಿಯೋ ಗ್ರಾಫಿಸ್ಟ್ ಡಾ.ಸದ್ಯೋಜಾತ ಭಟ್ಟ ಸನ್ನತಿ ಶಾಸನಗಳು ಲಿಪಿ&ಭಾಷೆ ಸ್ವರೂಪ ವಿಚಾರ, ಚಾಣಕ್ಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಅರ್ಜುನ್ ಭಾರದ್ವಾಜ್ ಸನ್ನತಿ ಶಿಲ್ಪ ವಾಸ್ತುಶಿಲ್ಪ ಲಕ್ಷಣ, ಸಂಶೋಧಕ ಡಾ.ಕೇಯೂರ ರಾಮಚಂದ್ರ ಕರಗುದರಿ ಸನ್ನತಿ ಜಾತಕಶಿಲ್ಪಗಳು ಕಥಾನಕದ ಹಿನ್ನೆಲೆ ಹಾಗೂ ವರ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಚಂದ್ರಪ್ಪ ಸನ್ನತಿ ಮತ್ತು ಅಶೋಕ ಸಂಬಂಧಗಳ ಸ್ವರೂಪ ಕುರಿತು ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ದೇವರ ಕೊಂಡಾರೆಡ್ಡಿ ಸನ್ನತಿ ಮತ್ತು ರಾಜಮನೆತನಗಳು, ಸಂಶೋಧಕ ಡಾ.ಎಸ್.ಚಂದ್ರಮೋಹನ್ ಸನ್ನತಿ ಮತ್ತು ಬೌದ್ಧ ಧರ್ಮ, ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕ ಡಾ.ಎಂ.ಬಿ.ಕಟ್ಟಿ ಸನ್ನತಿ ಮತ್ತು ಇತರ ಬೌದ್ಧ ಕೇಂದ್ರಗಳು ಕುರಿತು ವಿಷಯ ಮಂಡಿಸಿದರು.
ಗುಲ್ಬರ್ಗ ವಿವಿ ಕುಲಸಚಿವ ಪ್ರೊ.ರಮೇಶ ಲಂಡನಕರ್ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿದರು. ನಳಂದ ವಿಹಾರದ ಪಾಲಿ ಇನ್ಸ್ಟಿಟ್ಯೂಟ್ನ ಗೌರವ ನಿರ್ದೇಶಕ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ವಿದ್ಯಾವಿಷಯಕ ಪರಿಷತ್ ಸದಸ್ಯ ಪೊ.ಬಸವರಾಜ ಸಣ್ಣಕ್ಕಿ ಇತರರಿದ್ದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಪಾಲಿ, ಬೌದ್ಧ ವಿಷಯ ಕಲಿಕೆಗೆ ಅವಕಾಶ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಪಾಲಿ ಮತ್ತು ಬೌದ್ಧ ವಿಷಯ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲು ಯೋಜನೆ ರೂಪಿಸಲಾಗುವುದು.
ಕುಲಪತಿ, ಗುಲ್ಬರ್ಗ ವಿವಿ, ಕಲಬುರಗಿ.