ಕಲಬುರಗಿಯಲ್ಲಿನ ತೊಗರಿ ಮಂಡಳಿ ಕಚೇರಿ 
ಕಲಬುರಗಿ

ಕಲ್ಯಾಣದ ತೊಗರಿ ಬ್ರಾÈಂಡ್‌ಗೇಕೆ ಹಿಂದೇಟು?

ಪ್ರಮುಖ ಮುಖ್ಯಾಂಶಗಳು

  • ಜಿಐ ಟ್ಯಾಗ್ ಉತ್ಪನ್ನ ಸಂಸ್ಕರಣೆ ಪ್ರಕ್ರಿಯೆಗೆ ಗ್ರಹಣ
  • ಚುರುಕುಗೊಳ್ಳಬೇಕಿದೆ ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿ
ಕಲಬುರಗಿ: ಜಿಲ್ಲೆಯಲ್ಲಿ ಭೌಗೋಳಿಕ ಸೂಚ್ಯಂಕ (ಜಿಐ-ಟ್ಯಾಗ್) ಹೊಂದಿರುವ ಅತ್ಯಂತ ಪ್ರೊಟೀನ್‌ಯುಕ್ತ ತೊಗರಿ ಉತ್ಪಾದನೆ ಆಗುತ್ತಿದ್ದರೂ ಸಂಸ್ಕರಿಸಿ ಬ್ರಾÈಂಡ್ ಮಾಡಿ ಮಾರುವ ಪ್ರಕ್ರಿಯೆಗೆ ವೇಗ ದೊರೆಯುತ್ತಿಲ್ಲ. ಮಂಡಳಿ ಬಲಪಡಿಸುವ ಮೂಲಕ ಕಲಬುರಗಿ ರೊಟ್ಟಿ ಮಾದರಿಯಲ್ಲಿ ತೊಗರಿ ಬ್ರಾÈಂಡ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಅಚ್ಚರಿ ಮೂಡಿಸಿದೆ.
ಕೆಎಂಎಫ್ ಮಾದರಿಯಲ್ಲಿ ರಾಜ್ಯ ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿ ಮೂಲಕ ಜಿಐ ಟ್ಯಾಗ್ ಹೊಂದಿದ ತೊಗರಿ ಖರೀದಿಸಿ ಸಂಸ್ಕೃರಿಸಿ, ಬ್ರಾÈಂಡಿAಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮೂಲಕ ಬೇಡಿಕೆ ಸೃಷ್ಟಿಸುವ ನಿಟ್ಟಿನಲ್ಲಿ ಮಂಡಳಿ ಚಟುವಟಿಕೆ ಚುರುಕುಗೊಳ್ಳಬೇಕಿದೆ.
ಮಂಡಳಿ ಆಡಳಿತಾತ್ಮಕ ವೆಚ್ಚ ಭರಿಸಲು ಸರ್ಕಾರ ವಾರ್ಷಿಕ 50 ಲಕ್ಷ ರೂ. ಮಾತ್ರ ಅನುದಾನ ನೀಡುತ್ತಿದೆ. ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಇತರ ಖರ್ಚಿಗಾಗಿ ಈ ಹಣ ಬಳಕೆಯಾಗುತ್ತಿದೆ. ಆದರೆ ಸಂಸ್ಕೃರಣೆ ಸೇರಿ ಮಂಡಳಿಯ ಇತರ ಯಾವ ಚಟುವಟಿಕೆಗೂ ಅವಕಾಶ ಇಲ್ಲ. ಕಲ್ಯಾಣ ಕರ್ನಾಟಕ ಮತ್ತು ತೊಗರಿಗೆ ಮಾತ್ರ ಸೀಮಿತವಾಗಿದ್ದ ಮಂಡಳಿ ಇದೀಗ ದ್ವಿದಳ ಧಾನ್ಯ ಸೇರ್ಪಡೆ ಮೂಲಕ ರಾಜ್ಯಮಟ್ಟಕ್ಕೆ ಮೇಲ್ದರ್ಜೆಗೇರಿದೆ. ಪಕ್ಷದ ಕಾರ್ಯಕರ್ತರ ಪುನರ್ವಸತಿಗೆ ಅವಕಾಶ ಕಲ್ಪಿಸಲು ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ. ಹಲ್ಲು ಕಿತ್ತಿದ ಹಾವಿನಂತಿರುವ ಮಂಡಳಿಗೆ ಯಾರೇ ಅಧ್ಯಕ್ಷರಾದರೂ ಮಾಡುವುದೇನು ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ.
ರಾಜ್ಯ ಸರ್ಕಾರಿ ಸ್ವಾಮ್ಯದ ಮಂಡಳಿ 2002ರಲ್ಲಿ ಸ್ಥಾಪನೆಯಾಗಿದೆ. ರಾಜ್ಯದಲ್ಲಿನ ದ್ವಿದಳಧಾನ್ಯ ಉತ್ಪಾದನೆ, ಸಂಸ್ಕೃರಣೆ, ಖರೀದಿ ಮತ್ತು ಮಾರುಕಟ್ಟೆ ಅಭಿವೃದ್ಧಿ ಇದರ ಪ್ರಧಾನ ಉz್ದೆÃಶ. ದ್ವಿದಳಧಾನ್ಯ ಉತ್ಪಾದನೆ ಹೆಚ್ಚಳ ಜತೆ ಬೆಳೆಗಾರರ ಹಿತಾಸಕ್ತಿ ರಕ್ಷಣೆ, ಬೆಂಬಲ ಬೆಲೆ ಮೂಲಕ ನ್ಯಾಯಸಮ್ಮತ ಆದಾಯ ಕಲ್ಪಿಸುವುದು, ಮೌಲ್ಯವರ್ಧನೆ ಮತ್ತು ಬ್ರಾÈಂಡಿAಗ್, ರಾಜ್ಯದ ದ್ವಿದಳ ಧಾನ್ಯಗಳನ್ನು ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ.
ದ್ವಿದಳಧಾನ್ಯ ಖರೀದಿಗೆ ರಾಜ್ಯ ಸರ್ಕಾರದ ಯೋಜನೆ ಜಾರಿ, ಕಲಬುರಗಿ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆ, ತೂರ್‌ದಾಲ್, ಕಡಲೆ, ಹುರುಳಿ ಇತರ ದ್ವಿದಳಧಾನ್ಯ ಶುದ್ಧೀಕರಣ, ಒಡೆಯುವಿಕೆ, ಪ್ಯಾಕೇಜಿಂಗ್, ಸಂಸ್ಕರಣಾ ಘಟಕ ನಿರ್ವಹಣೆ, ಗುಣಮಟ್ಟದ ಆಹಾರ ಉತ್ಪನ್ನ ತಯಾರಿಕೆ, ಮಾರುಕಟ್ಟೆ ಮತ್ತು ಮಾರಾಟ, ರೈತರಿಗೆ ಬೆಂಬಲ ಜತೆ ಸಮಯಕ್ಕೆ ಸರಿಯಾಗಿ ಹಣ ಪಾವತಿ, ಉತ್ಪಾದನೆಗೆ ಮಾರ್ಗದರ್ಶನ, ರೈತ ಉತ್ಪಾದಕ ಮತ್ತು ಸಹಕಾರ ಸಂಘಗಳೊAದಿಗೆ ಸಹಯೋಗ, ಗುಣಮಟ್ಟ ಮತ್ತು ಆಹಾರ ಸುರಕ್ಷತೆ ಒದಗಿಸುವ ಜವಾಬ್ದಾರಿ ಹೊಂದಿದೆ.

ವಿದೇಶಿ ಉತ್ಪನ್ನಕ್ಕೆ ಸುಂಕ ಹೆಚ್ಚಿಸಲಿ ಕೇಂದ್ರ

ಕಲಬುರಗಿ ಜಿಲ್ಲೆಯಲ್ಲಿ ಸುಮಾರು 6.50 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗುತ್ತಿದ್ದು, ಪ್ರತಿವರ್ಷ ಸುಮಾರು 6.50 ಲಕ್ಷ ಮೆಟ್ರಿಕ್ ಟನ್ (65 ಲಕ್ಷ ಕ್ವಿಂಟಾಲ್) ಉತ್ಪಾದನೆಯಾಗುತ್ತಿದೆ. ದೇಶಕ್ಕೆ ವಾರ್ಷಿಕ 45 ಮಿಲಿಯನ್ ಟನ್ ತೊಗರಿಬೇಳೆ ಬೇಡಿಕೆ ಇದೆ. ಆದರೆ ಪ್ರಸಕ್ತ 35 ಮಿಲಿಯನ್ ಟನ್ ಉತ್ಪಾದನೆಯಾಗುತ್ತಿದೆ. ಇನ್ನೂ 10 ಮಿಲಿಯನ್ ಟನ್ ಕೊರತೆ ಇದ್ದುದರಿಂದ ಕೇಂದ್ರ ಸರ್ಕಾರ ದಕ್ಷಿಣ ಆಫ್ರಿಕಾ ಸೇರಿ ಅನೇಕ ರಾಷ್ಟçಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕನಿಷ್ಠ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶಿ ತೊಗರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುವ ಅಗತ್ಯವಿದೆ.
"

ಸಮರ್ಪಕ ಅನುದಾನ, ಸಿಬ್ಬಂದಿ ನೇಮಕ ಸೇರಿ ಮಂಡಳಿ ಬಲಪಡಿಸುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜತೆ ಚರ್ಚಿಸಿದ್ದು, ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ತೊಗರಿ ಸಂಸ್ಕರಿಸಿ ಬ್ರಾÈಂಡ್ ಮಾಡಿ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಕೋಟನೂರ ಬಳಿ ಪ್ರತ್ಯೇಕ ಕಟ್ಟಡ, ಗೋದಾಮು ನಿರ್ಮಾಣವಾಗುತ್ತಿದೆ.

| ಸೈಯದ್ ಮೆಹಮೂದ್ ಚಿಸ್ತಿ (ಸಾಹೇಬ್)ಅಧ್ಯಕ್ಷ, ಕರ್ನಾಟಕ ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿ

"

ದ್ವಿದಳಧಾನ್ಯ ಅಭಿವೃದ್ಧಿ ಮಂಡಳಿಯು ಜಿ-ಟ್ಯಾಗ್ ಹೊಂದಿದ ತೊಗರಿ ಮಾತ್ರ ಖರೀದಿಸಬೇಕು. ಬ್ರಾÈಂಡ್ ಮಾಡಲು ಗುಣಮಟ್ಟದ ತೊಗರಿ ಅಗತ್ಯ. ಮಂಡಳಿಗೆ ಸಿಬ್ಬಂದಿ ಒದಗಿಸಬೇಕು. ಕೆಎಂಎಫ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ದೇಶ ಮಾತ್ರವಲ್ಲ ವಿದೇಶಕ್ಕೂ ನಮ್ಮ ತೊಗರಿ ಬೇಳೆ ಸರಬರಾಜು ಮಾಡಬಹುದಾಗಿದೆ.

| ಚಂದ್ರಶೇಖರ ಹರಸೂರಅಧ್ಯಕ್ಷ, ಶ್ರೀ ನೀಲಕಂಠೇಶ್ವರ ರೈತ ಉತ್ಪಾದಕರ ಸಂಘ