ಕಲಬುರಗಿ: ಕಾನೂನು ಸುವ್ಯವಸ್ಥೆ ಕಾಪಾಡಲು ಚೌಕ್ ಪೊಲೀಸ್ ಠಾಣೆಯ ರೂಢೀಗತ ಅಪರಾಧಿ, ರೌಡಿಶೀಟರ್ ಮಹ್ಮದ್ ಉಸ್ಮಾನ್ಸಾಬ್ನ್ನನ್ನು ಬಾಗಲಕೋಟೆ ಟೌನ್ ಪೊಲೀಸ್ ಠಾಣೆಗೆ ಗಡಿಪಾರು ಮಾಡಿ, ಉಪ ಪೊಲೀಸ್ ಆಯುಕ್ತೆ ಶಾಲೂ ಆದೇಶಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಇತನ ವಿರುದ್ಧ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣ ದಾಖಲಾಗಿದ್ದು, ಎ ರೌಡಿ ಎಂದು ಗುರುತಿಸಲಾಗಿದೆ. ಈತನು ನಿರಂತರ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಆರೋಪಿಯಾಗಿದ್ದು, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ನಿರ್ದೇಶನದಂತೆ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಪಾಡಲು, ಕಾನೂನಿನ ಅರಿವು ಮೂಡಿಸಲು ಗಡಿಪಾರು ಮಾಡುವುದು ಸೂಕ್ತ ಎಂದು ಚೌಕ್ ಠಾಣೆ ಪಿಐ ಸುಶೀಲಕುಮಾರ ವರದಿ ಸಲ್ಲಿಸಿದ್ದರು. ವರದಿಯಂತೆ ಡಿಸಿಪಿ ಶಾಲೂ ಗಡಿಪಾರು ಆದೇಶ ಮಾಡಿದ್ದಾರೆ.
ಗಡಿಪಾರು ಆದೇಶ ಉಲ್ಲಂಘಿಸಿ ನಗರಕ್ಕೆ ಬಂದ ರೌಡಿಯಿಂದ ಹಲ್ಲೆ: ಕಲಬುರಗಿ: ಬೆಂಗಳೂರಿನ ಕೋಣನಕುಂಟೆ ಠಾಣೆಗೆ ಗಡಿಪಾರು ಆಗಿರುವ ರೂಢಿಗತ ಅಪರಾಧಿ, ರಾವೇಂದ್ರ ನಗರ ಪೊಲೀಸ್ ಠಾಣೆ ರೌಡಿಶೀಟರ್ ಖಾಜಾ ಪಾಶಾನು ಗಡಿಪಾರು ಆದೇಶ ಉಲ್ಲಂಘಿಸಿ, ನಗರಕ್ಕೆ ಬಂದು ಹಲ್ಲೆ ಮಾಡಿದ ಟನೆ ನಡೆದಿದೆ. ಮೇ 10ರಂದು ಖಾಜಾ ಪಾಶಾ ಮತ್ತು ರಿಯಾನ್ ಮಧ್ಯೆ ಜಗಳವಾಗಿದ್ದು, ರಿಯಾನ್ಗೆ ಖಾಜಾಪಾಶಾ ಹಲ್ಲೆ ಮಾಡಿದ್ದಾನೆ. ಗಡಿಪಾರು ಆದೇಶ ಉಲ್ಲಂಘಿಸಿದ್ದಾನೆ ಎಂದು ಆತನ ಪರಿಚಿತ ನೀಡಿದ ದೂರಿನಂತೆ ನಗರದ ರಾವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.