- ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಮಾಹಿತಿ
- 2 ತಿಂಗಳ ವಿಶೇಷ ಕಾರ್ಯಾಚರಣೆ
ಕಲಬುರಗಿ: "ಆಪರೇಷನ್ ಭರವಸೆ' ಅಡಿ ಎರಡು ತಿಂಗಳ ವಿಶೇಷ ಕಾರ್ಯಾಚರಣೆ ನಡೆಸಿ, ನಗರದ ವ್ಯಾಪ್ತಿಯಲ್ಲಿ ವಿವಿಧೆಡೆ ಸಾರ್ವಜನಿಕರು ಕಳೆದುಕೊಂಡ 785 ಮೊಬೈಲ್ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರದ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ಬಗ್ಗೆ ಇ&ಲಾಸ್ ಮತ್ತು ಸಿಇಐಆರ್ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 1.44 ಕೋಟಿ ರೂ. ಮೌಲ್ಯದ ಮೊಬೈಲ್ಗಳನ್ನು ಪತ್ತೆ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಭರವಸೆ ಮೂಡಿಸಬೇಕು ಎಂಬ ದೃಢ ನಿಶ್ಚಯದೊಂದಿಗೆ ಅಮೂಲ್ಯವಾದ ಮೊಬೈಲ್ಗಳನ್ನು ಪತ್ತೆ ಮಾಡಲು ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ನಗರದಲ್ಲಿ ಕಳೆದ ಒಂದೆರಡು ವರ್ಷದಲ್ಲಿ ಪತ್ತೆ ಮತ್ತು ಜಪ್ತಿ ಉತ್ತಮವಾಗಿ ಸಾಗಿದೆ. ಹಿಂದೆ ಶೇ.28ರಿಂದ 32 ಇದ್ದ ಪ್ರಮಾಣವೂ ಇಂದು ಶೇ.58ರವರೆಗೆ ತಲುಪಿದ್ದೇವೆ. ಶೇ.60 ಪತ್ತೆಯಾಗುತ್ತಿವೆ ಎಂದರು.
ನಗರದ ಚೌಕ್ ಠಾಣೆಯಲ್ಲಿ 150, ರೋಜಾ 131, ಸ್ಟೇಷನ್ ಬಜಾರ್ 80, ವಿಶ್ವವಿದ್ಯಾಲಯ 68, ಅಶೋಕ ನಗರ 67, ಸಬ್ ಅರ್ಬನ್ 66, ಸೆನ್ 59, ಬ್ರಹ್ಮಪುರ 54, ಎಂ.ಬಿ.ನಗರ 46, ರಾವೇಂದ್ರ ನಗರ 42, ರಹತಾಬಾದ್ ಠಾಣೆಯಲ್ಲಿ 22, ಸೆನ್ ಸೇರಿ ಒಟ್ಟು 785 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದು, ಅದರ ಮಾಲಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಸಣಪುಟ್ಟ ಮೊಬೈಲ್ ಸೇರಿ ಲಾಂತರ ರೂ. ಮೌಲ್ಯದ ಮೊಬೈಲ್ಗಳನ್ನು ಪತ್ತೆ ಮಾಡಲಾಗಿದೆ. ರೆಡ್ಮಿ, ಒಪ್ಪೋ, ರಿಯಲ್ಮಿ, ವಿವೋ, ಒನ್ಪ್ಲಸ್, ಇನಫಿಕ್ಸ್, ಪೋಕೋ, ಸ್ಯಾಮ್ಸಂಗ್, ಮೊಟೊರೋಲಾ, ಕ್ಸಿಯೋಮಿ, ಟೆಕ್ನೋ ಸ್ಪಾರ್ಕ್, ಹಾನೋರ್, ಐಕ್ಯೂ, ಐಟೆಲ್, ನೋಕಿಯಾ, ಆ್ಯಪ್ಲ್ ಕಂಪನಿಯ ಮೊಬೈಲ್ಗಳು ಸಿಇಐಆರ್ ಪೋರ್ಟ್ಲ್ಗಳ ಮೂಲಕ ಪತ್ತೆ ಹಚ್ಚಿ, ವಶಕ್ಕೆ ಪಡೆದು ವಿತರಿಸಲಾಗಿದೆ ಎಂದರು.
ಉಪ ಪೊಲೀಸ್ ಆಯುಕ್ತೆ ಶಾಲೂ, ಡಿಸಿಪಿ ಪ್ರವಿಣ ನಾಯಕ, ಎಸಿಪಿಗಳಾದ ಶರಣಪ್ಪ ಸುಬೇದಾರ, ಬಸವೇಶ್ವರ ಹೀರಾ, ಜೇಮ್ಸ್ ಮಿನೇಜಸ್, ಪಿಐಗಳಾದ ಗುರುಲಿಂಗಪ್ಪಗೌಡ ಪಾಟೀಲ್, ಚಂದ್ರಶೇಖರ ತಿಗಡಿ, ಸುಶೀಲಕುಮಾರ, ಹುಸೇನ ಭಾಷಾ, ನಟರಾಜ ಲಾಡೆ, ರಾವೇಂದ್ರ ಭಜಂತ್ರಿ, ವಾಜೀದ್ ಪಟೇಲ್, ಅರುಣಕುಮಾರ ಇತರರಿದ್ದರು.
ಸಾರ್ವಜನಿಕರು ಮೊಬೈಲ್ ಕಳೆದ ತಕ್ಷಣ ಸಿಇಐಆರ್ ಪೋರ್ಟ್ಲ್ನಲ್ಲಿ ದೂರು ದಾಖಲಿಸಿದರೆ ಪತ್ತೆಗೆ ಅನುಕೂಲವಾಗಲಿದೆ. ಜನರು ಮೊಬೈಲ್ ಬಿಲ್ ಇಲ್ಲದೇ, ದಾಖಲೆ ಇಲ್ಲದೇ ಖರೀದಿಸಬಾರದು. ಕಡಿಮೆ ಬೆಲೆ ಆಸೆಗೆ ಕಳ್ಳತನದ ಮೊಬೈಲ್ ಖರೀದಿಸಿದರೆ ಸಿಮ್ ಹಾಕಿದ ತಕ್ಷಣ ಸಿಇಐಆರ್ ಪೋರ್ಟ್ಲ್ ಮೂಲಕ ಮೊಬೈಲ್ ಪತ್ತೆ ಆಗುತ್ತದೆ. ಕಲಬುರಗಿ ನಗರ ಪೊಲೀಸ್ ಇತಿಹಾಸದಲ್ಲೇ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್ ಕೇಸ್ ಪತ್ತೆ ಹಚ್ಚಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
— ಡಾ.ಶರಣಪ್ಪ ಎಸ್.ಡಿ. ನಗರ ಪೊಲೀಸ್ ಆಯುಕ್ತ
ಆರು ದಿನದಲ್ಲಿ 1.75 ಲಕ್ಷ ಕೇಸ್
ನಗರದಲ್ಲಿ ಅಳವಡಿಸಿರುವ ಅತ್ಯಾಧುನಿಕ ಐಟಿಎಂಎಸ್ ಕ್ಯಾಮೆರಾ ಆಧಾರಿತ ಸಂಚಾರ ನಿಯಮ ಉಲ್ಲಂನೆ ನಿಗಾ ವ್ಯವಸ್ಥೆ ಅಡಿ ಮೇ 1ರಿಂದ 6ರವರೆಗೆ 1.75 ಲಕ್ಷ ಕೇಸ್ಗಳು ಪತ್ತೆಯಾಗಿವೆ. ದಿನಕ್ಕೆ 33 ಸಾವಿರ ಕೇಸ್ ದಾಖಲಾಗುತ್ತಿವೆ. ಸಾರ್ವಜನಿಕರು ದಂಡದಿಂದ ತಪ್ಪಿಸಿಕೊಳ್ಳಲು, ಜೀವನ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ಮುಲಾಜಿ ಇಲ್ಲ. ಪ್ರಸ್ತುತ ಒಂದಿಷ್ಟು ರಿಯಾಯಿತಿ ನೀಡಿದ್ದು, ಜೂ.1ರಿಂದ ಎಲ್ಲರೂ ಸಂಪೂರ್ಣವಾಗಿ ಸಂಚಾರ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ದಂಡ ಎದುರಿಸಬೇಕು ಎಂದು ಡಾ.ಶರಣಪ್ಪ ಎಸ್.ಡಿ.ಎಚ್ಚರಿಕೆ ನೀಡಿದರು.
ಕೆಲವರು ರಸ್ತೆ ಸುಧಾರಿಸಿ, ವ್ಯವಸ್ಥೆ ಬದಲಿಸಿ ಎಂದು ನೆಪ ಹೇಳುತ್ತಿದ್ದಾರೆ. ಅದೆಲ್ಲ ನೆಪವನ್ನು ನಾವು ಕೇಳುವುದಿಲ್ಲ. ಜೀವಕ್ಕಿಂತ ಇದ್ಯಾವುದು ದೊಡ್ಡದಲ್ಲ. ನಿಯಮ ಪಾಲಿಸಿದರೆ ಸಮಸ್ಯೆ ಣವಾಗಲಿದೆ. ಶಿಸ್ತು ಬದ್ಧ ಸಂಚಾರಕ್ಕೆ ನಿಯಮ ಪಾಲನೆ ಅಗತ್ಯ. ಸೀಟ್ ಬೆಲ್ಟ್, ಮೊಬೈಲ್ ಮಾತು, ಹೆಚ್ಚು ಜನರ ಆಟೋ ಓಡಾಟ, ಹೆಲ್ಮೆಟ್ ಸೇರಿ ಇತರೆ ಉಲ್ಲಂನೆಗೆ ದಂಡ ಹಾಕುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.