SP press meet 
ಕಲಬುರಗಿ

ಸಿಇಐಆರ್​ನಲ್ಲಿ ದೂರು ನೀಡಿದ್ರೆ ಮೊಬೈಲ್​ ಪತ್ತೆ

ಪ್ರಮುಖ ಮುಖ್ಯಾಂಶಗಳು

  • ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿಕೆ
  • 173 ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸ್​
ಕಲಬುರಗಿ: ಜಿಲ್ಲೆಯ ವಿವಿಧೆಡೆ ಮೊಬೈಲ್​ ಕಳೆದುಕೊಂಡವರ 173 ಮೊಬೈಲ್​ಗಳನ್ನು ಸಿಇಐಆರ್​ ಪೋರ್ಟ್​ಲ್​ ಮೂಲಕ ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು ಅವುಗಳ ವಾರಸುದಾರರಿಗೆ ಹಸ್ತಾಂತರಿಸಿ, ಮುಖದಲ್ಲಿ ಮಂದಹಾಸ ಮೂಡಿಸಿದರು.
ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಕಳುವಾದ, ಮರೆ ಹೋದ, ಕಳೆದುಕೊಂಡ ಮೊಬೈಲ್​ ೋನ್​ಗಳನ್ನು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸೆಂಟ್ರಲ್​ ಇಕ್ಯುಪ್ಮೆಂಟ್​ ಐಡೆಂಟಿಟಿ ರೆಜಿಸ್ಟರ್​ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದು, ಪತ್ತೆ ಹಚ್ಚಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ಕಳೆದುಹೋದ ಮೊಬೈಲ್​ಗಳನ್ನು ಪತ್ತೆ ಹಚ್ಚಲಾಗಿದೆ. ಮೊಬೈಲ್​ ಕಳೆದುಕೊಂಡವರು ಸಿಇಐಆರ್​ ಪೋರ್ಟಲ್​ನಲ್ಲಿ ಮೊಬೈಲ್​ ನಂಬರ್​, ಐಎಎಂಆರ್​ ಸಂಖ್ಯೆಯನ್ನು ಉಲ್ಲೇಖಿಸಿ, ದೂರು ನೀಡಿದರೆ ಅದನ್ನು ಟ್ರಾ$್ಯಕ್​ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಡಿಎಸ್​ಪಿಗಳು, ಸೈಬರ್​ ಕೆಂ ವಿಭಾಗ ಹಾಗೂ ಜಿಲ್ಲೆಯ ವಿವಿಧ ಉಪವಿಭಾಗಗಳ ಪೊಲೀಸರು ಕಾರ್ಯಾಚರಣೆ, ನಿಗಾ ಇಟ್ಟು ಮೊಬೈಲ್​ಗಳನ್ನು ಪತ್ತೆ ಹಚ್ಚಿದ್ದು, ನಿರಂತರವಾಗಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಎರಡ್ಮೂರು ತಿಂಗಳಿಗೊಮ್ಮೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೂರು ದಾಖಲಿಸುವುದು ಹೇಗೆ?: ಮೊಬೈಲ್​ ಕಳೆದ ತಕ್ಷಣ ಜನರು ಗಾಬರಿಯಾಗುವ ಬದಲು ಸಿಇಐಆರ್​ ಪೋರ್ಟಲ್​ಗೆ ಭೇಟಿ ನೀಡಿ ಐಎಂಇಐ ಸಂಖ್ಯೆಯೊಂದಿಗೆ ದೂರು ದಾಖಲಿಸಬೇಕು. ಇದರಿಂದ ಕಳ್ಳರು ಮೊಬೈಲ್​ ಬಳಸದಂತೆ ಬ್ಲಾಕ್​ ಮಾಡಬಹುದು. ಪೊಲೀಸರು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿ ಆಗಿದೆ ಎಂದರು.
ಎಎಸ್​ಪಿ ಮಹೇಶ ಮೇಣ್ಣನವರ್​, ಡಿವೈಎಸ್​ಪಿಗಳಾದ ಶಂಕರಗೌಡ ಪಾಟೀಲ್​, ತಮ್ಮರಾಯ ಪಾಟೀಲ್​, ಸಿಪಿಐ ಜಗದೇವಪ್ಪ ಪಾಳಾ ಇತರರಿದ್ದರು.