ಕಲಬುರಗಿ ನೆಕ್ಸ್ಟ್​ ಫೌಂಡೇಷನ್ ಉದ್ಘಾಟನೆ 
ಕಲಬುರಗಿ

ಸಹಭಾಗಿತ್ವದಲ್ಲಿ ಸಮಗ್ರ ಸಮೃದ್ಧಿ: ಕಲಬುರಗಿ ನೆಕ್ಸ್ಟ್​ ಫೌಂಡೇಷನ್ ಉದ್ಘಾಟನೆ

ರಮೇಶ ಮೇಳಕುಂದಾ
ಕಲಬುರಗಿ: ಮಾನವ ಸಂಪನ್ಮೂಲದ ಅಭಿವೃದ್ಧಿ, ಸುಸ್ಥಿರ ಆರ್ಥಿಕ ಸಬಲತೆ, ಹೊಸ ಆವಿಷ್ಕಾರಕ್ಕೆ ಅವಕಾಶಗಳ ಸೃಷ್ಟಿ, ಕೌಶಲಾಭಿವೃದ್ಧಿ ಪರ್ಯಾವರಣದ ರಕ್ಷಣೆ, ಕಲೆ ಸಂಸತಿಯ ಹೆಗ್ಗುರುತನ್ನು ಪ್ರೋತ್ಸಾಹಿಸುವ ಮೂಲಕ ಸಂ, ಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಲಬುರಗಿ ನೆಕ್ಟ್​ ೌಂಡೇಷನ್​ ಗುರಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಹೇಳಿದರು.
ನಗರದ ಹೊರವಲಯದ ಜಸ್ಟ್​ ಕ್ಲಬ್​ನಲ್ಲಿ ಕಲಬುರಗಿ ನೆಕ್ಸ್​$್ಟ ಫೌಂಡೇಶನ್​ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಪ್ರಗತಿಗೆ ಹಲವು ಕಂಪನಿಗಳು, ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಲು ಮುಂದಾಗಿವೆ. ಆದರೆ ಅವುಗಳಿಗೆ ಸೂಕ್ತ ವೇದಿಕೆ ಕೊರತೆ ಇತ್ತು. ಆದ್ದರಿಂದ ೌಂಡೇಷನ್​ ಮೂಲಕ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದು, ಸರ್ವರ ಸಹಕಾರ ಅಗತ್ಯ ಎಂದರು.
ೌಂಡೇಷನ್​ಗೆ ಹಲವು ಹೆಸರಾಂತ ಕಂಪನಿಗಳು ಸಹಭಾಗಿತ್ವ ನೀಡಲು ಒಪ್ಪಿದ್ದು, ಒಪ್ಪಂದವಾಗಿದೆ. ಔದ್ಯೋಗಿಕ ಹಬ್​ ಮಾಡಿ, ರಾಜ್ಯದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವ ಗುರಿ ಹೊಂದಲಾಗಿದೆ. ಫೌಂಡೇಶನ್​ಗೆ ನೆರವು ಬರುತ್ತಿದ್ದು, ಎಸ್ಸೆಸ್ಸೆಲ್ಸಿ ಮಕ್ಕಳಿಗೆ 35,000 ಪುಸ್ತಕ 80 ಲಕ್ಷ ರೂ. ನೀಡಿ ಮುದ್ರಿಸಿ ಕಳಿಸಿದೆ ಎಂದರು.
ಬರೀ ಬಿಸಿಲೂರಲ್ಲ ತೊಗರಿ ಖಣಜ: ಫೌಂಡೇಶನ್​ ಲಾಂಛನವೂ ಸೂರ್ಯನ ಬೆಳಕಿನ ಪ್ರಖರತೆ ಬಿಂಬಿಸುವ ಜತೆಗೆ ಬೆಳಕು ಮೂಡಿಸುವ ಸಂದೇಶ ಹೊಂದಿದೆ. ಬರೀ ಬಿಸಿಲೂರಲ್ಲ. ತೊಗರಿ ಖಣಜ, ಸಮೃದ್ಧ ನಾಡಾಗಿ, ಹಿಂದುಳಿದ ಭಾವ ಹೋಗಬೇಕಿದೆ ಎಂದು ಪ್ರಿಯಾಂಕ್​ ರ್ಖಗೆ ತಿಳಿಸಿದರು.
ೌಂಡೇಷನ್​ ಉಪಾಧ್ಯೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್​ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್​ ಫಾತಿಮಾ, ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತೇದಾರ್​, ಮೇಯರ್​ ವರ್ಷಾ ಜಾನೆ, ಮಜರ್​ ಆಲಂಖಾನ್​, ಪ್ರವಿಣ್​ ಪಾಟೀಲ್​ ಹರವಾಳ, ಪರಮೇಶ್ವರಿ, ಸಿಇಓ ಭಂವರ್​ ಸಿಂಗ್​ ಮೀನಾ, ಪೊಲೀಸ್​ ಆಯುಕ್ತ ಡಾ.ಶರಣಪ್ಪ, ಎಸ್​ಪಿ ಅಡ್ಡೂರು ಶ್ರೀನಿವಾಸುಲು, ರಾಯಪ್ಪ ಹುಣಸಗಿ, ಸಾಹಿತ್ಯ ಆಲದಕಟ್ಟಿ, ಸಮದ್​ ಪಟೇಲ್​ ಸೇರಿ ಜಿಲ್ಲೆಯ ಖ್ಯಾತ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.