Khamenei condolence 
ಕಲಬುರಗಿ

ಕಲಬುರಗಿ ಪಾಲಿಕೆಯಲ್ಲಿ ಖಮೇನಿಗೆ ಸಂತಾಪ: ಆಂದೋಲಾ ಶ್ರೀ ಕಿಡಿ

ಕಲಬುರಗಿ: ಯುದ್ಧದಲ್ಲಿ ಸತ್ತ ಇರಾನ್​ನ ಸವೋರ್ಚ್ಛ ನಾಯಕ ಅಯಾತುಲ್ಲಾ ಖಮೇನಿಗೆ ಮಹಾನಗರ ಪಾಲಿಕೆಯ ಬಜೆಟ್​ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದು ಖಂಡನೀಯ. ನೂರಾರು ಮಹಿಳೆಯರನ್ನು ನಡು ಬೀದಿಯಲ್ಲಿ ಕೊಂದವನಿಗೆ ನಮನ ಸಲ್ಲಿಸುವುದು ಸಲ್ಲದು ಎಂದು ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿಡಿಕಾರಿದರು.
ಖಮೇನಿ ಸತ್ತನೆಂದು ಇರಾನ್​ ರಾಷ್ಟ್ರದ ಲಾಂತರ ಜನರು ಬೀದಿಗಿಳಿದು ಸಂಭ್ರಮಿಸಿದ್ದಾರೆ. ಆದರೆ ಕರ್ನಾಟಕದ ಅಲಿಪುರದಲ್ಲೂ ಸಂತಾಪ ಸೂಚಿಸಲಾಗಿತ್ತು. ಹಲವು ಮುಸ್ಲಿಂ ರಾಷ್ಟ್ರಗಳೇ ಖಮೇನಿಯನ್ನು ಆತಂಕವಾಗಿ ಎಂದು ಹೇಳಿವೆ. ಹೈದರಾಬಾದ್​ ಸಂಸದ ಅಕ್ಬರುದ್ದೀನ್​ ಓವೈಸಿಯು ಸಂತಾಪ ಸೂಚಿಸುವುದನ್ನು ಖಂಡಿಸಿದ್ದಾನೆ. ಆದರೆ ಕಲಬುರಗಿ ಪಾಲಿಕೆಯವರಿಗೆ ಏನಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ವಾರ್ಡ್​ 24 ಸದಸ್ಯೆ ಸೈಯದಾ ನೂರ್​ ಾತಿಮಾ ಸಭೆ ಆರಂಭಕ್ಕೆ ಮುನ್ನ ಎದ್ದು ನಿಂತು ಖಮೇನಿಯ ಗುಣಗಾನ ಮಾಡಿದ್ದಾರೆ. 10 ಸಾವಿರ ಜನರನ್ನು ಪೊಲೀಸ್​, ಸೈನ್ಯವನ್ನು ಬಿಟ್ಟು ಹತ್ಯೆ ಮಾಡಿದವ, ಪ್ರಶ್ನಿಸಿದ ಮುಗ್ದ ಹೆಣ್ಣು ಮಕ್ಕಳನ್ನು ನಡು ಬೀದಿಯಲ್ಲಿ ಹತ್ಯೆ, ಅತ್ಯಾಚಾರ, ಚಿತ್ರಹಿಂಸೆ ನೀಡಿ, ಕಗ್ಗೊಲ್ಲೆ ಮಾಡಿದವ. ದೇಶದ ಯಾವುದೇ ಸದನಲ್ಲಿ ಸಂತಾಪ ಸೂಚಿಸಿಲ್ಲ. ಇತನ ಬಗ್ಗೆ ನಗರದ ಪಾಲಿಕೆಯವರಿಗೆ ಏಕೆ ಸಹನಾಭೂತಿ ಎಂದು ಕೇಳಿದರು.
ಪಾಲಿಕೆಯಲ್ಲಿ ಹೀಗೆ ಬಿಟ್ಟರೆ ಪಾಕಿಸ್ತಾನದಲ್ಲಿ ದಾವೂದ್​ ಇಬ್ರಾಹಿಂ ಸತ್ತರೂ ಸಂತಾಪ ಮಾಡುತ್ತಾರೆ. ಸದಸ್ಯರಿಗೇನೋ ಮಂಡಿಸುತ್ತಾರೆ. ಆದರೆ ಪಾಲಿಕೆ ಆಯುಕ್ತರ ಬುದ್ಧಿಗೆ ಏನಾಗಿತ್ತು?. ಅದನ್ನು ತಡೆಯಬೇಕಿತ್ತು. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿಪಕ್ಷ ಬಿಜೆಪಿಗರೂ ಶಕ್ತೀಹಿನರಾಗಿ, ವರ್ತಿಸಿದ್ದಾರೆ. ಕಾಂಗ್ರೆಸ್​ನ ಬಿ ಟೀಂ ಆಗಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಜೇವರ್ಗಿಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ಕಟ್ಟುತ್ತಿದ್ದು, ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಜೇವರ್ಗಿಯಲ್ಲಿ ಅನಧಿಕೃ ಮುರುಮ್​ ಸಾಗಣೆ ತಡೆಯಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ರಾಕೇಶ ಜಮಾದಾರ, ಶಿವರಾಜ ಬಾಳಿ, ರೋಹಿತ್​ ಪಿಸ್ಕೆ, ಶರಣು ಶಿವಣಗಿ, ಭಾಗೇಶ ಆಂದೋಲಾ ಇತರರಿದ್ದರು.