students fall ill 
ಕಲಬುರಗಿ

ಕಲಬುರಗಿ: ನೀರಿನಲ್ಲಿ ಹಲ್ಲಿ ಬಿದ್ದು, ವಿದ್ಯಾರ್ಥಿಗಳು ಅಸ್ವಸ್ಥ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಕಲಬುರಗಿ: ಹಲ್ಲಿ ಸತ್ತು ಬಿದ್ದಿರುವ ನೀರು ಕುಡಿದು ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ವಸತಿ ನಿಲಯದಲ್ಲಿ ನೀರಿನ ಟ್ಯಾಂಕರನಲ್ಲಿ ಹಲ್ಲಿ ಬಿದ್ದಿದ್ದು, ನೋಡದೇ ಅದೇ ನೀರನ್ನು ಕುಡಿಯಲು ಮತ್ತು ಅಡುಗೆಗೆ ಬಳಸಲಾಗಿದೆ.
ಅದೇ ನೀರನ್ನು ಸೇವಿಸಿದ್ದು, ನೀರು ವಾಸನೇ ಬಂದಿದ್ದು, ಅನುಮಾನ ಪಟ್ಟ ವಿದ್ಯಾರ್ಥಿಗಳು ಟ್ಯಾಂಕರ್ ಪರಿಶೀಲಿಸಿದಾಗ ಹಲ್ಲಿ ಬಿದ್ದಿದ್ದು, ತಿಳಿದಿದೆ.
20 ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಸುಸ್ತು ಕಂಡು ಬಂದಿದ್ದು, ನಾಲ್ಕು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಎಲ್ಲರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸ್ತು ಆದವರನ್ನು ತಪಾಸಣೆ ನಡೆಸಿ, ಔಷಧ ನೀಡಿದ್ದಾರೆ. ನಾಲ್ವರಿಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.