- 108.10ಕೋಟಿ ರೂ. ಕಾಮಗಾರಿಗೆ ಅಡಿಗಲ್ಲು
- ಪ್ರಿಯಾಂಕ್ ರ್ಖಗೆ ಹೇಳಿಕೆ
ಕಲಬುರಗಿ: 50 ವರ್ಷದಲ್ಲಿ ಕಲಬುರಗಿ ಹೇಗಿರಬೇಕೆಂಬ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದು, ಎರಡು ವರ್ಷದಲ್ಲಿ ನಗರದ ನೆ ಬದಲಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕೆಕೆಆರ್ಡಿಬಿ ಹಾಗೂ ವಸತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ 108.85 ಕೋಟಿ ರೂ. ಒಳಚರಂಡಿ ಸೇರಿ ವಿವಿಧ ಕಾಮಗಾರಿಗಳ ಅಡಿಗಲ್ಲು, ಪೌರಕಾರ್ಮಿಕರಿಗೆ, ಕುಷ್ಠ ರೋಗದಿಂದ ಗುಣಮುಖರಾದವರಿಗೆ ನಿವೇಶನ ಪತ್ರ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜೀವ್ ಅವಾಸ್ ಯೋಜನೆಯ ಮನೆ ಹಂಚಿಕೆ ಪತ್ರ ವಿತರಿಸಿ ಮಾತನಾಡಿದರು.
ನಗರದ ರಸ್ತೆ ಆಡಿಟ್ ಮಾಡಿಸಿದ್ದು, 357 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಿಸಲಾಗುತ್ತಿದೆ. 400 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಕಂಬ ಬದಲಾಯಿಸುತ್ತೇವೆ. ಕೂಡಾದಿಂದ 19 ಜಂಕ್ಷನ್, 3 ಕೆರೆ ಅಭಿವೃದ್ಧಿ ಕಾಮಗಾರಿ, ಉದ್ಯಾನ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನಗರದ ಒಳಚರಂಡಿ ವ್ಯವಸ್ಥೆ 40&-50 ವರ್ಷ ಹಳೆಯದಾಗಿದ್ದು, ಪೂರ್ಣ ಹಾಳಾಗಿದ್ದು, 700 ಕೋಟಿ ರೂ. ಅವಶ್ಯವಿದ್ದು, ರಾಜ್ಯ ಸರ್ಕಾರದಿಂದ ಹಣ ಒದಗಿಸಬೇಕು ಎಂದು ಮನವಿ ಮಾಡಿದರು.
ವೈದ್ಯಕಿಯ ಶಿಕ್ಷಣ, ಕೌಲಶ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಕನೀಜ್ ಫಾತಿಮಾ, ಎಂ.ವೈ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೂಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವಿಣ ಹರವಾಳ, ಮೇಯರ್ ವರ್ಷಾ ಜಾನೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಪಮಾ ಕಮಕನೂರ, ಮಹ್ಮದ ಆಯೇಜ್ ಖಾನ್, ಶೇಖ ಹುಸೇನಿ, ಆಡಳಿತ ಪಕ್ಷದ ನಾಯಕ ಶೇಖ್ ಅಜ್ಮಲಗೋಲಾ, ಚಂದ್ರಿಕಾ ಪರಮೇಶ್ವರಿ, ಬಿ.ಫೌಜಿಯಾ ತರನ್ನಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್.ಪಿ.ಅಡ್ಡೂರು ಶ್ರೀನಿವಾಸುಲು ಇತರರಿದ್ದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ವಿಭಾಗದ ಉಪ ಆಯುಕ್ತೆ ಪ್ರಮೀಳಾ ಎಂ.ಕೆ. ಸ್ವಾಗತಿಸಿದರು.