drug 
ಕಲಬುರಗಿ

ಉಡ್ತಾ ಕಲಬುರಗಿಗೆ ಹೊಡೆತ

ಪ್ರಮುಖ ಮುಖ್ಯಾಂಶಗಳು

  • ವ್ಯಸನ ನಿಯಂತ್ರಣಕ್ಕೆ ಕಲಬುರಗಿ ಪೊಲೀಸರ ಕಟ್ಟುನಿಟ್ಟಿನ ಕ್ರಮ
  • ನಿರಂತರ ನಿಗಾ, ಆಪ್ತ ಸಮಾಲೋಚನೆಗೆ ಸನ್ಮಿತ್ರ
ರಮೇಶ ಮೇಳಕುಂದಾ ಕಲಬುರಗಿ
ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಗಾಂಜಾ, ಡ್ರಗ್ಸ್​ ಮಾರಾಟ, ಸೇವನೆಗೆ ಕಡಿವಾಣಕ್ಕೆ ನಗರ ಪೊಲೀಸರು ಶ್ರಮಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ದಾಖಲೆಯ 343 ಪ್ರಕರಣಗಳನ್ನು ದಾಖಲಿಸಿ, ಅವರ ಮೇಲೆ ನಿರಂತರ ನಿಗಾ ಇಡುವ ಸನ್ಮಿತ್ರ ಯೋಜನೆಗೆ ಚಾಲನೆ ನೀಡಿ, ಉಡ್ತಾ ಕಲಬುರಗಿಗೆಗೆ ಹೊಡೆತ ನೀಡುತ್ತಿದ್ದಾರೆ.
ಭಾಗಶ@ ಅಪರಾಧಗಳಿಗೆ ಮೂಲ ಕಾರಣವಾಗಿರುವ ಗಾಂಜಾ, ಡ್ರಗ್ಸ್​ ಸೇವನೆಯೂ ನಗರದಲ್ಲಿ ಮಿತಿ ಮೀರಿ ನಡೆಯುತ್ತಿತ್ತು. ಹಿರಿಯರು ಸೇರಿ ಶಾಲಾ ಮಕ್ಕಳು ಸಹ ಜನಸಂಚಾರವಿರದ ಸ್ಥಳಗಳಲ್ಲಿ ಗಾಂಜಾ ಸೇವಿಸಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಈ ಪ್ರಕ್ರಿಯೆಗೆ ಕಡಿವಾಣ ಹಾಕಲು ಕಳೆದ 2025 ಜನೆವರಿಯಲ್ಲಿ "ಡ್ರಗ್ಸ್​ ಮುಕ್ತ ಕಲಬುರಗಿ' ಅಭಿಯಾನವನ್ನು ಆರಂಭಿಸಿದ ನಗರ ಪೊಲೀಸರು ಗಾಂಜಾ, ಸಿಂಥೆಟಿಕ್​ ಡ್ರಗ್ಸ್​ ಮಾರಾಟವಷ್ಟೇ ಅಲ್ಲ ಸೇವಕರನ್ನು ಬಂಧಿಸಿ, ಜೈಲಿಗಟ್ಟಲು ಆರಂಭಿಸಿದರು. ದಂಡ, ಶಿೆ, ಎಚ್ಚರಿಕೆ ಪ್ರಮಾಣವನ್ನು ಹೆಚ್ಚಿಸಿದ್ದರು.
ಪೊಲೀಸರ ನಿಗಾವಣೆ, ನಿರಂತರ ಕಾರ್ಯಾಚರಣೆ ಪರಿಣಾಮ 2023ರಲ್ಲಿ 26 ಡ್ರಗ್​ ಮಾರಾಟದ ಪ್ರಕರಣ ಪತ್ತೆ ಮಾಡಿ, 42 ಆರೋಪಿಗಳನ್ನು ಬಂಧಿಸಿ, 22 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿತ್ತು. 23 ಸೇವನೆ ಕೇಸ್​ ದಾಖಲಿಸಿ, 34 ಆರೋಪಿಗಳನ್ನು ಬಂಧಿಸಲಾಗಿತ್ತು. 2024ರಲ್ಲಿ ಗಾಂಜಾ, ಡ್ರಗ್​ ಮಾರಾಟದ 21 ಕೇಸ್​ ದಾಖಲಿಸಿ, 34 ಜನರನ್ನು ಬಂಧಿಸಿ 18 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿತ್ತು. 32 ಸೇವನೆ ಕೇಸ್​ ದಾಖಲಿಸಿ, 36 ಆರೋಪಿಗಳನ್ನು ಬಂಧಿಸಲಾಗಿತ್ತು.
2025ರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ 11 ತಿಂಗಳಲ್ಲಿ 315 ಮಾರಾಟ, ಸೇವನೆ ಪ್ರಕರಣ ದಾಖಲಿಸಿ, 343 ಜನರನ್ನು ಬಂಧಿಸಿ, 778 ಕೆಜಿ ಸಿಂಥೆಟಿಕ್​ ಡ್ರಗ್ಸ್​, 22 ಕೆ.ಜಿ.ಗಾಂಜಾ ಸೇರಿ ಒಟ್ಟು 43.64 ಲಕ್ಷ ರೂ. ಮೌಲ್ಯದ ಗಾಂಜಾ, ಡ್ರಗ್ಸ್​ ವಶಕ್ಕೆ ಪಡೆದು, ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡ್ರಗ್ಸ್​ ಸಾಗಿಸುತ್ತಿದ್ದ ಆರೋಪಿ ಮೇಲೆ ಗುಂಡಿನ ದಾಳಿ ಸಹ ಮಾಡಲಾಗಿತ್ತು.
ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಅವರು ಬೆಂಗಳೂರಿನಲ್ಲಿ ಸಿಸಿಬಿ ಜಂಟಿ ಕಮೀಷನರ್​ ಆಗಿದ್ದಾಗ ಡ್ರಗ್ಸ್​ ಮುಕ್ತ ಬೆಂಗಳೂರು' ಅಭಿಯಾನವನ್ನು ನಡೆಸಿ, ಮಾದಕ ಜಾಲವನ್ನು ಭೇದಿಸಿ, ಕಡಿವಾಣಕ್ಕೆ ಶ್ರಮಿಸಿದ್ದರು. ಇದೀಗ ಕಲಬುರಗಿ ನಗರದಲ್ಲೂ ಪ್ರಯತ್ನ ಮುಂದುವರಿಸಿ, ಡ್ರಗ್ಸ್​ ಮುಕ್ತ ಕಲಬುರಗಿಗೆ ನಗರ ಪೊಲೀಸರು ಶ್ರಮಿಸುತ್ತಿದ್ದಾರೆ.

ಶಾಶ್ವತ ಪರಿಹಾರಕ್ಕೆ ಸನ್ಮಿತ್ರ

ನಗರದಲ್ಲಿ ಗಾಂಜಾ ವ್ಯಸನಿಗಳ ಮೇಲೆ ಕೇಸ್​, ದಂಡ ಹಾಕುವುದಷ್ಟೇ ಅಲ್ಲ ಅವರನ್ನು ಶಾಶ್ವತವಾಗಿ ಮಾದಕ ಲೋಕದಿಂದ ಹೊರ ತರುವ ಯೋಜನೆಯನ್ನು ನಗರ ಪೊಲೀಸರು ಹಮ್ಮಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಸನ್ಮಿತ್ರ ಯೋಜನೆ ಅಡಿ ಪ್ರತಿ ಠಾಣೆಗೆ ಓರ್ವ ಪೊಲೀಸ್​ ಸಿಬ್ಬಂದಿಯನ್ನು ನೇಮಿಸಿ, ಆಯಾ ಠಾಣೆ ವ್ಯಾಪ್ತಿಯ ವ್ಯಸನಿಗಳನ್ನು ಪತ್ತೆ ಹಚ್ಚಿ, ಈಗಾಗಲೇ ಕೇಸ್​ ದಾಖಲಾಗಿರುವವರನ್ನು ಕರೆಸಿ, ಆಪ್ತ ಸಮಾಲೋಚನೆ, ಔಷಧ ವಿತರಣೆ, ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ.

ಕುಡಿದ್ರೆ ಕೇಸ್​, ವ್ಯಸನಿಗಳ ಗಡಿಪಾರಿಗೆ ಚಿಂತನೆ

ಗಾಂಜಾ, ಡ್ರಗ್ಸ್​ ಮಾತ್ರವಲ್ಲ ಮದ್ಯ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವ ರೂಢಿಗತ ವ್ಯಸನಿಗಳನ್ನು ಗುರುತಿಸಿ, ಅವರ ಮೇಲೂ ಪ್ರಕರಣ ದಾಖಲಿಸಲು ನಗರ ಪೊಲೀಸರು ನಿರ್ಧರಿಸಿದ್ದಾರೆ. ಗಾಂಜಾ, ಡ್ರಗ್ಸ್​, ಮದ್ಯ ಸೇವಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಕೊಡುವ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ವ್ಯಸನಿಗಳನ್ನು ಗುರುತಿಸಿ ಗಡಿಪಾರು ಮಾಡಲೂ ಸಹ ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ತಿಳಿಸಿದ್ದಾರೆ.

ಸದ್ದು ಮಾಡಿದ್ದ ವಿಜಯವಾಣಿ

ಕಲಬುರಗಿ ನಗರದಲ್ಲಿ ಗಾಂಜಾ, ಡ್ರಗ್ಸ್​ ಸೇವನೆ, ಮಾರಾಟ ಹೆಚ್ಚಳವಾಗಿದ್ದು, ಬಯಲು ಪ್ರದೇಶಗಳಲ್ಲಿ, ನಗರದ ಹೃದಯ ಭಾಗದಲ್ಲೇ ಶಾಲೆ, ಕಾಲೇಜು ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್​, ಇ& ಸಿಗಾರ ಸೇವಿಸುತ್ತಿರುವುದು, ನಿಯಂತ್ರಣಕ್ಕೆ ಪೊಲೀಸ್​ ಇಲಾಖೆ, ಔಷಧ ನಿಯಂತ್ರಣ ಇಲಾಖೆ ನಿಷ್ಕಾಳಜಿ ವಿರುದ್ಧ 2024 ಜುಲೈ, ಆಗಸ್ಟ್​ನಲ್ಲಿ "ಉಡ್ತಾ ಕಲಬುರಗಿ' ಸರಣಿ ವರದಿಗಳನ್ನು ಪ್ರಕಟಿಸಿತ್ತು. ಪ್ರಸ್ತುತ ಒಂದು ವರ್ಷದಲ್ಲಿ ಮಾದಕ ಲೋಕಕ್ಕೆ ಇಲಾಖೆ ಕಠಿಣ ಕ್ರಮ ಕೈಗೊಂಡು, ಕಡಿವಾಣ ಹಾಕುತ್ತಿದೆ.

" ಡ್ರಗ್ಸ್​ ಮುಕ್ತ ಕಲಬುರಗಿ' ನಗರಕ್ಕೆ ಕಳೆದ ಒಂದು ವರ್ಷದಿಂದ ನಿರಂತರ ನಿಗಾ ಇಟ್ಟು, ಇಡೀ ಅಧಿಕಾರಿ, ಸಿಬ್ಬಂದಿಯನ್ನು ಕಾರ್ಯಾಚರಣೆಗಿಳಿಸಿ, ಕಡಿವಾಣ ಹಾಕಲಾಗಿದೆ. ಪಿಜಿಗಳು, ಮಹಿಳಾ ವಸತಿಗೃಹಗಳಲ್ಲಿ ಡ್ರಗ್ಸ್​ ಮಾರಾಟ ಸ್ಥಗಿತಕ್ಕೆ ನಿಗಾ ಇಡಲಾಗಿದೆ. ಸನ್ಮಿತ್ರ ಅಡಿ ವ್ಯಸನಿಗಳಿಗೆ ಆಪ್ತಸಮಾಲೋಚನೆ ನಡೆಸುತ್ತಿದ್ದು, ವ್ಯಸನಿಗಳಿಂದ ಸನ್ನಡತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ವ್ಯಸನಿಗಳು, ಮಾರಾಟಗಾರರ ವಿರುದ್ಧ ರೌಡಿಶೀಟರ್​, ಗಡಿಪಾರು ಮಾಡುವ ಚಿಂತನೆ ಇದೆ.

2025ರಲ್ಲಿ ಪತ್ತೆ ಮಾಡಿದ್ದ ಪ್ರಕರಣ

ತಿಂಗಳು ಪ್ರಕರಣ ಆರೋಪಿಗಳ
ಜನೆವರಿ 122 130
ೆಬ್ರವರಿ 16 19
ಮಾರ್ಚ್​ 30 32
ಏಪ್ರಿಲ್​ 23 28
ಮೇ 13 16
ಜೂನ್​ 58 58
ಜುಲೈ 23 23
ಆಗಸ್ಟ್​ 14 15
ಸೆಪ್ಟೆಂಬರ್​ 04 07
ಅಕ್ಟೋಬರ್​ 06 08
ನವೆಂಬರ್​ 06 07
ಒಟ್ಟು 315 343