Lokayukth trap constables
ಕಲಬುರಗಿ: ಎಂಓಬಿ ಬಳಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪೊಲೀಸ್ ಪೇದೆಗಳಿಬ್ಬರನ್ನು ಅಮಾನತು ಮಾಡಿ ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಆದೇಶಿಸಿದ್ದಾರೆ.
ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದ ವೇಳೆ ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಕಾನ್ಸಟೇಬಲ್ ಪರಶುರಾಮ್ , ಪರಾರಿಯಾದ ವೀರೇಶನನ್ನು ಇಲಾಖಾ ವಿಚಾರಣೆಯಲ್ಲಿ ಇರಿಸಿ, ಅಮಾನತು ಮಾಡಲಾಗಿದೆ.
ಸೆ.3ರಂದು ನಗರದ ಬ್ರಹ್ಮಪುರ ಠಾಣೆಯಲ್ಲಿ ರೂಢಿಗತ ಅಪರಾಧಿ ಕಾರ್ತಿಕನನ್ನು ಹಣ ನೀಡದಿದ್ದರೆ ಗಡಿಪಾರು ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿ, ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಹಿಂದೆಯೇ 50 ಸಾವಿರ ರೂ. ಪಡೆದಿದ್ದು, ಪುನಃ 50 ಸಾವಿರ ರೂ.ಗೆ ಬೇಡಿಕೆ ಇಟ್ಟು ಠಾಣೆ ಆವರಣದಲ್ಲೆ 20 ಸಾವಿರ ರೂಪಾಯಿ ಪಡೆಯುವ ವೇಳೆ ಪರಶುರಾಮ ಸಿಕ್ಕಿ ಬಿದ್ದಿದ್ದು, ವೀರೇಶ ಪರಾರಿ ಆಗಿದ್ದ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಿನ ಠಾಣೆ ಆವರಣದಲ್ಲೆ ನಡೆದ ಘಟನೆಯೂ ತೀವ್ರ ಚರ್ಚೆಗೆ ಈಡಾಗಿತ್ತು.