farmers strike 
ಕಲಬುರಗಿ

ರೈತರಿಗಾಗಿ ಆ.20ಕ್ಕೆ ಬೆಳಗ್ಗೆ 6ರಿಂದಲೇ ಕಲಬುರಗಿ ಬಂದ್​: ವಿವಿಧ ಸಂಘಟನೆ ಸಾಥ್​

ಪ್ರಮುಖ ಮುಖ್ಯಾಂಶಗಳು

  • ರೈತ, ಕಾರ್ಮಿಕ, ವರ್ತಕ, ದಲಿತ, ಕನ್ನಡಪರ ಸಂಘಟನೆಗಳ ಬೆಂಬಲ
  • ಕಲಬುರಗಿ ಜಿಲ್ಲೆಯನ್ನು ಬರ ಪೀಡಿತ ಘೋಷಣೆಗೆ ಆಗ್ರಹ

ಕಲಬುರಗಿ: 

ಜಿಲ್ಲೆಯನ್ನು ಬರಪೀಡಿತ ಎಂದು ಘೊಷಿಸಬೇಕು, ಪ್ರತಿ ಎಕರೆಗೆ ೫೦ ಸಾವಿರ ರೂ. ಪರಿಹಾರ ನೀಡಬೇಕು, ವಿಮೆಯಿಂದ ವಂಚಿತ ಎಲ್ಲ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಬೇಕು, ಉಜನಿ ಡ್ಯಾಂನಿಂದ ನಿಗದಿತ ೧೫ ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಗುರುವಾರ ಬಂದ್​ ಕರೆ ನೀಡಲಾಗಿದೆ.

ಸಂಯುಕ್ತ ಹೋರಾಟ ರ‍್ನಾಟಕ ಸಂ, ಕನ್ನಡ, ರೈತ, ಕರ‍್ಮಿಕ ಸೇರಿ ವಿವಿಧ ಸಂಟನೆಗಳ ಬೆಂಬಲದೊಂದಿಗೆ ಬೆಳಗ್ಗೆ ೬ಗಂಟೆಯಿಂದಲೇ ಬಂದ್​ ಆಚರಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ. ಬಂದ್​ ಕರೆಗೆ ಅಡತ್​ ಮಾಲಿಕರ ಸಂ ಬೆಂಬಲ ನೀಡಿದೆ. ೧೧ಗಂಟೆಗೆ ನೆಹರು ಗಂಜ್​ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್​ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ಹೊಟೇಲ್​, ಬೇಕರಿ ಮಾಲಿಕರ ಸಂ ಸೇರಿ ವಿವಿಧ ಸಂಟನೆಗಳು ಬಂದ್​ಗೆ ಬೆಂಬಲ ನೀಡಿವೆ.

ಹೋಟೆಲ್​ ಸಂಘದ ಬೆಂಬಲ: 

ಕಲಬುರಗಿ: ಮಳೆ ಅಭಾವದಿಂದ ಬರಗಾಲ ಎದುರಿಸುತ್ತಿರುವ ಜಿಲ್ಲೆಗೆ ರ‍್ಕಾರ ಬರ ಘೋಷಿಸಲು ಆಗ್ರಹಿಸಿ ರೈತರು ಕರೆ ನೀಡಿರುವ ಆ.೨೦ರ ಬಂದ್​ಗೆ ಜಿಲ್ಲಾ ಹೋಟೆಲ್​ ವಸತಿ ಮತ್ತು ಬೇಕರಿ ಮಾಲಿಕರ ಸಂವು ಬೆಂಬಲ ವ್ಯಕ್ತಪಡಿಸಲಿದೆ ಎಂದು ಅಧ್ಯಕ್ಷ ನರಸಿಂಹ ಮೆಂಡನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.