police commissioner visit jail 
ಕಲಬುರಗಿ

ಕಲಬುರಗಿ ಜೈಲಿನಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಅಕ್ರಮ, ಕೈದಿಗಳ ರಾಜಾತಿಥ್ಯ ಪ್ರಕರಣಗಳ ವಿಡಿಯೋ ಬಹಿರಂಗವಾಗಿರುವ ಮಧ್ಯೆಯೇ ಇದೀಗ ಕೈದಿಗಳ ಮಧ್ಯೆ ಕ್ಷುಲಕ್ಕ ಕಾರಣಕ್ಕೆ ಮಾರಾಮಾರಿ ನಡೆದಿರುವ ಟನೆ ಮಂಗಳವಾರ ನಡೆದಿದೆ.
ಜೈಲಿನ ಬ್ಯಾರಕ್​ 1ರಲ್ಲಿನ ಬೆಂಗಳೂರು ಮೂಲದ ಕೈದಿ ವೆಂಕಟರಮಣ ಮತ್ತು ಇತರೆ ಸ್ಥಳಿಯ ಕೈದಿಗಳ ಮಧ್ಯೆ ತಡರಾತ್ರಿವರೆಗೆ ಟಿವಿ ನೋಡುವುದು ಸೇರಿ ಇತರೆ ಕಾರಣಕ್ಕೆ ವಾಗ್ವಾದ ಶುರುವಾಗಿದ್ದು, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ನಡೆದಿದೆ. ಪರಿಸ್ಥಿತಿ ಕೈ ಮೀರಿದ್ದು, ಪರಸ್ಪರ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದೆ. ಗಲಾಟೆ ವೇಳೆ ಕೈದಿ ವೆಂಕಟರಮಣ ಕಾರಾಗೃಹದಲ್ಲಿನ ಟಿವಿಯನ್ನು ಒಡೆದು ಹಾಕಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಜೀವಾವದಿ ಶಿಕ್ಷಗೆ ಒಳಗಾಗಿ, ಪುನ@ ಕೊಲೆ ಅಪರಾಧ ಪ್ರಕರಣದಲ್ಲಿ ಜೈಲು ಪಾಲಾಗಿರುವ ವೆಂಕಟರಮಣನನ್ನು ಶಿಾತ್ಮಕ ವರ್ಗಾವಣೆಯಾಗಿ ಕಲಬುರಗಿ ಕಾರಾಗ್ರಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಗಲಾಟೆ ತಕ್ಷಣ ಸ್ಥಳಕ್ಕೆ ನಗರದ ಎಸಿಪಿ, ರಹತಾಬಾದ್​ ಠಾಣೆ ಇನ್​ಸ್ಪೆಕ್ಟರ್​ ಹುಸೇನ್​ ಭಾಷಾ ಸೇರಿ ಇತರೆ ಪೊಲೀಸ್​ ಸಿಬ್ಬಂದಿ ಜೈಲಿಗೆ ದೌಡಾಯಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಆಯುಕ್ತರ ಭೇಟಿ: ನಂತರ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ ಅವರು ಜೈಲಿಗೆ ಭೇಟಿ ನೀಡಿ, ಗಲಾಟೆ ವಿಷಯ ಪರಿಶೀಲಿಸಿ, ಕೈದಿಗಳಿಗೆ ವಾರ್ನಿಂಗ್​ ಸಹ ನೀಡಿದ್ದಾರೆ. ಡಿಸಿಪಿ ಪ್ರವಿಣ ನಾಯಕ, ಎಸಿಪಿ ಶರಣಪ್ಪ ಸುಬೇದಾರ, ಜೈಲಿನ ಮುಖ್ಯ ಅಧೀಕ್ಷಕಿ ಡಾ.ಆರ್​.ಅನಿತಾ, ಇನ್​ಸ್ಪೆಕ್ಟರ್​ಗಳಾದ ಹುಸೇನ್​ ಭಾಷಾ, ಚಂದ್ರಶೇಖರ ತಿಗಡಿ ಇತರೆ ಪೊಲೀಸ್​ ಸಿಬ್ಬಂದಿ ಇದ್ದರು.