- ಶೂನ್ಯದಿಂದ ಸಾಧಕ ಕೌಶಿಕ್ ಮುದ್ದಾ
- ಕಲಬುರಗಿ ಮೂಲದ ನವೋದ್ಯಮಿಗೆ ರಾಷ್ಟ್ರಪತಿ ಆಹ್ವಾನ
ರ್ನಿದಿಷ್ಟ ಗುರಿ, ದುಡಿಯುವ ಛಲವಿದ್ದರೆ ಶೂನ್ಯದಿಂದ ಆರಂಭಿಸಿ ದಿಗಂತದಷ್ಟು ಸಾಧಿಸಬಹುದು ಎಂಬುದಕ್ಕೆ ನವೋದ್ಯಮಿ ನಗರದ ಸಂಗಮೇಶ್ವರ ಕಾಲನಿ ನಿವಾಸಿ ಕೌಶಿಕ್ ಮುದ್ದಾ ನಿದರ್ಶನ.
ಒಂದು ಲಕ್ಷ ರೂಪಾಯಿಯಲ್ಲಿ ಆರಂಭಿಸಿದ್ದ ಕಂಪನಿ ಇದೀಗ 500ಕ್ಕೂ ಹೆಚ್ಚು ದುಡಿಯುವ ಕೈಗಳಿಗೆ ಕೆಲಸ ನೀಡುವಷ್ಟರ ಮಟ್ಟಿಗೆ ಬೆಳೆದಿರುವ ಹಿನ್ನೆಲೆಯಲ್ಲಿ ಕೌಶಿಕ್ ಮುದ್ದಾ ಅವರಿಗೆ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವಂತೆ ರಾಷ್ಟ್ರಪತಿಗಳಿಂದ ವಿಶೇಷ ಆಹ್ವಾನ ಬಂದಿದೆ.
ಸಂಗಮೇಶ್ವರ ಕಾಲನಿ ಮೂಲದ ಕೌಶಿಕ್ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ತಂದೆ ಕೇದಾರನಾಥ ಮುದ್ದಾ ಮಾರ್ಗದರ್ಶನದಲ್ಲಿ ಬೆಂಗಳೂರಿನ ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಅಧ್ಯಯನ ಮಾಡಿ 22ನೇ ವಯಸ್ಸಿನಲ್ಲಿ ಸ್ನೇಹಿತ ನವೀನ್ ಜೈನ್ ಜತೆಗೂಡಿ ಆರಂಭಿಸಿದ್ದ ನವೋದ್ಯಮ ಇದೀಗ ಬೃಹತ್ ಸಂಸ್ಥೆಯಾಗಿ ಬೆಳೆದಿದೆ.
ಸಿಎಚ್ಸಿ ಮಷಿನ್, ಎಸ್ಡಿ ಪ್ರಿಂಟಿಂಗ್ನ ಅಡ್ವಾನ್ಸ್ಡ ಮ್ಯಾನು್ಯಾಕ್ಚರಿಂಗ್ ಟಕಗಳು ಭಾರತದಲ್ಲಿ ಇರಲಿಲ್ಲ. ಜರ್ಮನಿ, ಜಪಾನ್ನಿಂದ ತರಿಸಲಾಗುತ್ತಿತ್ತು. ಭಾರತದಲ್ಲೇ ಉತ್ಪಾದಿಸುವ ಧ್ಯೇಯದೊಂದಿಗೆ ಪ್ರಥಮ ಬಾರಿಗೆ ಎಥಿರಲ್ ಮಷಿನ್ಸ್ ಕಂಪನಿಯನ್ನು ಚಿಕ್ಕದಾಗಿ ಆರಂಭಿಸಲಾಗಿದೆ. ವಿಮಾನಯಾನ, ಆರೋಗ್ಯ ಕ್ಷೇತ್ರದ ಎಕ್ಸ್ರೇ, ಎಂಆರ್ಐ ಯಂತ್ರಗಳಿಗೆ ಬಳಸುವ ಪೂರಕ ಸಾಮಗ್ರಿ ತಯಾರಿಸಿಕೊಡಲಾಗುತ್ತದೆ. ಕೋವಿಡ್ ವೇಳೆ ಇಬ್ಬರು ಬಳಸಬಹುದಾದ ವೆಂಟಿಲೇಟರ್ ಸಿದ್ಧಪಡಿಸಿ ವಿತರಿಸಿದ್ದೇವೆ ಎನ್ನುತ್ತಾರೆ ಕೌಶಿಕ್ ಮುದ್ದಾ.
ಪ್ರಶಸ್ತಿ ಹಣದಿಂದ ಕಂಪನಿ
ಕೌಶಿಕ್ ಮುದ್ದಾ ಕಾಲೇಜು ದಿನಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅದರಿಂದ ಬಂದ ಹಣವನ್ನು ಕೂಡಿಟ್ಟು ಒಂದು ಲಕ್ಷ ರೂ.ನಲ್ಲಿ ಸ್ನೇಹಿತ ನವೀನ್ ಜೈನ್ ಜತೆ ಅಂತಿಮ ಸೆಮಿಸ್ಟರ್ನಲ್ಲಿ ಎಥಿರಲ್ ಮಷಿನ್ಸ್ ಆರಂಭಿಸಿದರು. ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರೂ ಬೃಹತ್ ಕಂಪನಿಯಾಗಿ ಬೆಳೆಸಿದ್ದಾರೆ. ಪೀಣ್ಯದಲ್ಲಿ 1.5 ಎಕರೆಯಲ್ಲಿ ಕಂಪನಿ ಇದ್ದು, ದೇವನಹಳ್ಳಿಯಲ್ಲಿ ಅದಕ್ಕಿಂತ ಏಳು ಪಟ್ಟು ದೊಡ್ಡದಾದ ಸ್ಥಳ, ಉತ್ಪಾದನಾ ಸಾಮರ್ಥ್ಯದ ಟಕ ಸ್ಥಾಪನೆಗೆ ಮುಂದಾಗಿದ್ದಾರೆ.
2014ರಲ್ಲಿ ಎಥಿರಲ್ ಮಷಿನ್ಸ್ ಎಂಬ ಹೆಸರಿನ ನವೋದ್ಯಮವನ್ನು ಇಬ್ಬರು ಸೇರಿ ಆರಂಭಿಸಿದೆವು. ಇಬ್ಬರೇ ಕಸಗುಡಿಸುವುದು ಸೇರಿ ಎಲ್ಲ ಕೆಲಸ ಮಾಡಿದೆವು. ಮೇಕ್ ಇನ್ ಇಂಡಿಯಾದಿಂದ ದೇಶದ ಉತ್ಪಾದನೆ ಮೇಲೆ ವಿಶ್ವಾಸ ಹೆಚ್ಚಿಸಿತು. ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಭವಿಷ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟಕ ಸ್ಥಾಪಿಸುವ ಯೋಜನೆ ಇದೆ.
ಗಣರಾಜ್ಯೋತ್ಸವ ಔತಣಕೂಟಕ್ಕೆ ಆಹ್ವಾನ
ಕೌಶಿಕ್ ಮುದ್ದಾ ಅವರ ನವೋದ್ಯಮದ ಸಾಧನೆ ಪರಿಗಣಿಸಿ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿ ಶ್ಲಾನೆ ವ್ಯಕ್ತಪಡಿಸಿದ್ದರು. ಇದೀಗ ಜ.26ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಗಣರಾಜ್ಯೋತ್ಸವದ ಔತಣ ಕೂಟದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಇವರ ಸಾಧನೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಸಂಸ್ಥೆಗಳು ಸಾಧಕರ ಪಟ್ಟಿಯಲ್ಲಿ ಸ್ಥಾನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿವೆ.