Dating app 
ಕಲಬುರಗಿ

ಡೆಟಿಂಗ್​ ಆ್ಯಪ್​ನಲ್ಲಿ ಪರಿಚಯ: 15.40 ಲ ರೂ. ಸೈಬರ್​ ವಂಚಿಸಿದ ಹೆಣ್ಣು

ಪ್ರಮುಖ ಮುಖ್ಯಾಂಶಗಳು

  • ಪ್ರೀತಿಯ ನಾಟಕ, ಮದುವೆ ಆಗುವುದಾಗಿ ಹೆಚ್ಚುವರಿ ಹಣ ವಸೂಲಿ
ಕಲಬುರಗಿ: ಡೆಟಿಂಗ್​ ಆ್ಯಪ್​ ಮೂಲಕ ಪರಿಚಯವಾದ ಯುವತಿ ನಗರದ ಕಿರಾಣಾ ಬಜಾರ್​ನ ಸ್ಟೀಲ್​ ಪಾತ್ರೆಗಳ ಹೋಲ್​ಸೇಲ್​ ವ್ಯಾಪಾರಿಯೊಬ್ಬರಿಗೆ ಟ್ರೇಡಿಂಗ್​ ಎಂದು ನಂಬಿಸಿ 15.40 ಲಕ್ಷ ರೂ. ವಂಚನೆ ಮಾಡಿದ್ದಾಳೆ. ನಗರದ ಕಿರಾಣಬಜಾರ್​ ಮಾರವಾಡಿ ಗಲ್ಲಿ ನಿವಾಸಿ ಮೋಸಕ್ಕೆ ಒಳಗಾದವರು.
ಲವ್ಲಿ ಡೆಟಿಂಗ್​ ಆ್ಯಪ್​ನಲ್ಲಿ ಶ್ರೀ ಹೆಸರಿನ ಪ್ರೊೈಲ್​ನಿಂದ ಪರಿಚಯವಾದ ಯುವತಿ ತನ್ನ ಹೆಸರು ಶ್ರೀಷಾ ಶರ್ಮಾ ಮುಂಬಯಿ ಮೂಲದವಳು ಎಂದು ಪರಿಚಯಿಸಿಕೊಂಡಿದ್ದಾಳೆ. ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್​ನಲ್ಲಿ ಐದು ವರ್ಷ ಅನುಭವವಿದೆ ಎಂದು ನಂಬಿಸಿ, ನಿಕಟ ಸಂಪರ್ಕ ಬೆಳೆಸಿಕೊಂಡು, ಹಲವು ಖಾತೆಗಳ ಮೂಲಕ ಮೂಲಕ ಮೊದಲಿಗೆ ಸಣ್ಣ ಮಟ್ಟದ ಹಣ ವರ್ಗಾವಣೆ ಮಾಡಿಸಿ, 25 ಸಾವಿರ ರೂ. ಲಾಭಾಂಶ ತೋರಿಸಿದ್ದಾಳೆ.
ನಂತರ ಹಂತ ಹಂತವಾಗಿ ಬ್ಯಾಂಕ್​ ಖಾತೆಗಳ ಮೂಲಕ 4,40,000 ರೂ. ಪಡೆದಿದ್ದಾಳೆ. ನಂತರ ಮನೆಯಲ್ಲಿ ಮದುವೆ ಬಗ್ಗೆ ಮಾತನಾಡಿದ್ದು, ದೊಡ್ಡ ಮೊತ್ತದ ಟ್ರೇಡಿಂಗ್​ ಮಾಡೋಣ ಎಂದು ಹೇಳಿ, 50 ಲಕ್ಷ ರೂ. ಹೂಡಿಕೆ ಮಾಡಿ, ಲಾಭ ಮಾಡಿಕೊಂಡು ಮದುವೆ ಆಗೋಣ ಎಂದಿದ್ದಾಳೆ. ಅಷ್ಟು ದೊಡ್ಡ ಮೊತ್ತ ಇಲ್ಲ ಎಂದಾಗ ಕನಿಷ್ಠ 10 ಲಕ್ಷ ರೂ. ಬೇಡಿಕೆ ಇಟ್ಟು ಬೇರೆ ಬೇರೆ ಖಾತೆಗಳಿಂದ 11,00,000 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಟ್ರೇಡಿಂಗ್​ ಅಕೌಂಟ್​ನಲ್ಲಿ 10,583 ಕ್ರಿಪ್ಟೋ ಕರೆನ್ಸಿ ತೋರಿಸಿದ್ದಾರೆ. ನಂತರ ವೆಬ್​ಸೈಟ್​ಗಳು ಬಂದ್​ ಆಗಿದ್ದು, ಶ್ರೀಷಾ ಶರ್ಮಾ ಮೊಬೈಲ್​ ಕೂಡ ಸ್ವಿಚ್​ ಆ್​ ಆಗಿದ್ದು, ಮೋಸ ಹೋಗಿರುವುದು ತಿಳಿದು ಬಂದಿದೆ ಎಂದು ಸೈಬರ್​ ಕ್ರೆೃಮ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.