nirman tech fest pda college
- ವಿದ್ಯಾರ್ಥಿಗಳ ಕಲರವ
- ಸಾಧಕ ಹಳೇ ವಿದ್ಯಾರ್ಥಿಗಳಿಂದ ಸಲಹೆ
- ತಾಂತ್ರಿಕ, ಸಾಂಸ್ಕೃತಿಕ ಸ್ಪರ್ಧೆ
ಕಲಬುರಗಿ: ಜಗತ್ತಿನಲ್ಲಿ ಹಲವು ಆವಿಷ್ಕಾರ, ಸಂಶೋಧನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಎಲ್ಲವಕ್ಕೂ ಮೂಲವನ್ನು ಅರಿತು ಕಾರ್ಯಪ್ರವೃತ್ತರಾದಾಗ ಯಶಸ್ಸು ಸಾಧ್ಯವಾಗಲಿದೆ ಎಂದು ಪಿಡಿಎ ಕಾಲೇಜಿನ ಹಳೇ ವಿದ್ಯಾರ್ಥಿ, ಇನ್ಫಿನಿಯೋನ್ ಟೆಕ್ನಾಲಜಿಯ ನಿರ್ದೇಶಕ ಡಾ.ಪ್ರಕಾಶ ಬಾಲಸುಬ್ರಮಣಿಯನ್ ಹೇಳಿದರು.
ನಗರದ ಎಚ್ಕೆಇನ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿರ್ಮಾಣ ತಾಂತ್ರಿಕ, ಸಾಂಸತಿಕ ಉತ್ಸವದಲ್ಲಿ ಗೌರವ ಅತಿಥಿಗಳಾಗಿ ಮಾತನಾಡಿ, 1958ರಲ್ಲಿ ಪ್ರಥಮ ಬಾರಿಗೆ ಸಕ್ಯುರ್ಟ್ ಸಂಶೋಧಿಸಲಾಯಿತು. ಅದಕ್ಕೆ ಕಾಲಕ್ಕೆ ತಕ್ಕಂತೆ ಮರುಪರಿಷ್ಕರಿಸಿ, ಹೊಸ ರೂಪ ನೀಡಲಾಯಿತು. ಇಂತಹ ಮಹತ್ವದ ಟನೆಗಳನ್ನು ಅರಿತಾಗ ಆವಿಷ್ಕಾರದ ಯೋಜನೆಗಳು ಬರಲಿವೆ ಎಂದರು.
ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶಾಲೂ ಮಾತನಾಡಿ, ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ಪ್ರಾಯೋಗಿಕ ಜ್ಞಾನ ಅರಿತು, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಬೋಧನೆಯ ಜತೆಗೆ ನಿತ್ಯ ಜೀವನಕ್ಕೆ ಬೇಕಾದ ಅಗತ್ಯತೆಗಳನ್ನು ಅರಿತಾಗ ಅನುಕೂಲವಾಗಲಿದೆ. ಡ್ರೋನ್, ಎಐ, ಸೈಬರ್, ಮಶೀನ್ ಲರ್ನಿಂಗ್ ಸೇರಿ ನಿತ್ಯ ಜೀವನದ ಪ್ರಮುಖ ವಿಷಯ ಅರಿತು, ಕೆಲಸ ಮಾಡಬೇಕು ಎಂದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಎಂಎಲ್ಸಿ ಶಶೀಲ್ ನಮೋಶಿ ಮಾತನಾಡಿ, ಪಿಡಿಎ ಕಾಲೇಜಿನಲ್ಲಿ ಭವಿಷ್ಯ ನಿರ್ಮಾಣಕ್ಕೆ ಕ್ರಿಯಾಶೀಲ ವಿದ್ಯಾರ್ಥಿಗಳನ್ನು ಸೃಷ್ಟಿಸಲಾಗುತ್ತಿದೆ. ನಾಯಕತ್ವಕ್ಕೆ ಉತ್ಸವಗಳಿಂದ ಬಲ ಬರಲಿದೆ. ಪ್ರತಿಭೆ ಹೊರ ಹಾಕಲು ಉತ್ಸವ ವೇದಿಕೆಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಪ್ರಸಕ್ತ ದಶಕವೂ ಭಾರತದ್ದಾಗಿದೆ. ತಂತ್ರಜ್ಞಾನ ಬದಲಾವಣೆಗೆ ಎಐ, ಬಾಹ್ಯಾಕಾಶ, ಡಿಜಿಟಲ್, ಗ್ರೀನ್ ಎನರ್ಜಿ ಸೇರಿ ಮಹತ್ವದ ಕ್ಷೇತ್ರಗಳಲ್ಲಿ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಂಜಿನಿಯರಿಂಗ್ ಕೇವಲ ಉದ್ಯೋಗವಲ್ಲ, ಪರಿಹಾರ ಹುಡುಕುವ, ಆವಿಷ್ಕಾರಗಳ ಮೂಲವಿದ್ದಂತೆ ಎಂದರು.
ಎಚ್ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಆರ್.ಹರವಾಳ, ಡಾ.ಅನೀಲಕುಮಾರ ಬಿ.ಪಟ್ಟಣ, ಡಾ.ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ಡಾ.ಅನೀಲಕುಮಾರ ಪಟ್ಟಣ, ಡಾ.ಕಿರಣ ದೇಶಕುಂ, ನಾಗಣ್ಣ ಂಟಿ, ನಿಶಾಂತ ಜಿ ಯೇಲಿ, ಡಾ.ಎಸ್.ಆರ್.ಹೊಟ್ಟಿ, ಉಪಪ್ರಾಂಶುಪಾಲೆ ಡಾ.ಭಾರತಿ ಹರಸೂರ ಇತರರಿದ್ದರು. ಪ್ರಾಂಶುಪಾಲ ಡಾ.ಎಸ್.ಆರ್.ಪಾಟೀಲ್ ಸ್ವಾಗತಿಸಿದರು. ಸಂಯೋಜಕ ಜಯಪ್ರಕಾಶ ಎ.ಕೆ. ಪ್ರಾಸ್ತಾವಿಕ ಮಾತನಾಡಿದರು.
ಪ್ರಸ್ತುತ ಅಟೋಮೆಟೆಡ್ ಕಾರ್ಗಳು ಬಂದಿವೆ. ಒಂದು ಕಾರ್ ಸಿದ್ಧಪಡಿಸಲು ಇಂಜಿನಿಯರಿಂಗ್ನ ಭಾಗಶ@ ಎಲ್ಲ ವಿಭಾಗಗಳ ತಂತ್ರಜ್ಞರ ಅವಶ್ಯಕತೆ ಇದೆ. ಆದ್ದರಿಂದ ಜಗತ್ತಿನಲ್ಲಿ ಪ್ರಸ್ತುತ ಏನು ನಡೆಯುತ್ತಿದೆ ಎಂಬುದನ್ನು ಅರಿತು, ಅದಕ್ಕೆ ತಕ್ಕಂತೆ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಬೇಕು.
— > ಡಾ.ಪ್ರಕಾಶ ಬಾಲಸುಬ್ರಮಣಿಯನ್ ಹಿರಿಯ ನಿರ್ದೇಶಕ, ಇನಫಿನಿಯೋನ್ ಟೆಕ್ನಾಲಜಿ
ತಂತ್ರಜ್ಞಾನದ ದುರುಪಯೋಗದ ಬಗ್ಗೆ ಜಾಗೃತರಾಗಿರಬೇಕು. ಭಯ ಹುಟ್ಟಿಸಿ, ಆನ್ಲೈನ್ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಸೈಬರ್ ಅಪರಾಧ ತಡೆಗೆ ಹೆಜ್ಜೆ ಇಡಬೇಕು. ಕಾಲೇಜು ಜೀವನ ಮಹತ್ವದ ಟ್ಟವಾಗಿದ್ದು, ಮಾದಕ ವ್ಯಸನಕ್ಕೆ ಬಲಿಯಾಗಬಾರದು. ಡ್ರಗ್ಸ್ ಗಮನಕ್ಕೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ರುಚಿ ನೋಡಲು ಆರಂಭಿಸಿ ನಂತರ ಅದೇ ವ್ಯಸನವಾಗಲಿದೆ.
— > ಶಾಲೂ, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ
2027ಕ್ಕೆ ಐಟಿ ಪಾರ್ಕ್ ಲೋಕಾರ್ಪಣೆ
ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಪ್ರಥಮ ಐಟಿ ಪಾರ್ಕ್ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಾಣಕ್ಕೆ ನಿರ್ಧರಿಸಿದ್ದು, 2027ಕ್ಕೆ ಲೋಕಾರ್ಪಣೆ ಮಾಡಲಾಗುವುದು. ಪಾರ್ಕ್ನಲ್ಲಿ ಸ್ಟಾರ್ಟ್ಪ್, ಕಂಪನಿಗಳಿಗೆ ಸ್ಥಳ, ಸಂದರ್ಶನ ಕೋಣೆ, ಚರ್ಚಾ ಕೋಣೆ, ಕೆೆಟೇರಿಯಾ ಸೇರಿ 35 ಸಾವಿರ ಚದರ ಅಡಿಯ ಅತ್ಯಾಧುನಿಕ ಕಟ್ಟಡ ನಿರ್ಮಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ, ಕೌಶಲ, ಆವಿಷ್ಕಾರ, ಸಂಹವನ ವೃದ್ಧಿಗೆ ಬಲ ಬರಲಿದೆ ಎಂದು ಶಶೀಲ ನಮೋಶಿ ತಿಳಿಸಿದರು.
ಸಾಂಸ್ಕೃತಿಕ ಕಲರವ
ನಿರ್ಮಾಣ ಉತ್ಸವದ ನಿಮಿತ್ತ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಇಡೀ ದಿನ ಸಾಂಸತಿಕ ಕಲರವ ನಡೆಯಿತು. ಬೆಳಗ್ಗೆ ವಿದ್ಯಾರ್ಥಿಗಳಿಂದ ಬೃಹತ್ ಮ್ಯಾರಾಥಾನ್ ಓಟ ನಡೆಯಿತು. ಮಾರ್ಗ ಮಧ್ಯೆ ಪ್ಲಾ$್ಯಷ್ ಮಾಬ್ ರೂಪಿಸಿ, ನೃತ್ಯ ಮಾಡಿ, ಸಂಭ್ರಮಿಸಲಾಯಿತು. ನಂತರ ಟೆಕ್ನೋ ವಿಸನ್ ಹ್ಯಾಕಾಥಾನ್ ಸೇರಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಡಿಜೆ ಸದ್ದಿನೊಂದಿಗೆ ಸಂಭ್ರಮ ನಡೆದರೆ. ರಾತ್ರಿ ವಿದ್ಯಾರ್ಥಿಗಳು, ಕಲಾವಿದರಿಂದ ಸಾಂಸತಿಕ ಕಲರವದ ಕಾರ್ಯಕ್ರಮಗಳು ಉತ್ಸವದ ಮೆರಗು ಹೆಚ್ಚಿಸಿದ್ದು, ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು. |
|---|