bharatiya shikshan mandal 
ಕಲಬುರಗಿ

ಶೈಕ್ಷಣಿಕ ವಿಕಾಸಕ್ಕೆ ಭಾರತೀಯತೆ ಅಗತ್ಯ

ರಮೇಶ ಮೇಳಕುಂದಾ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಬಸವರಾಜ ಡೊಣೂರ ಹೇಳಿಕೆ
  • ಭಾರತೀಯ ಶಿಕ್ಷಣ ಮಂಡಲ ಕಾರ್ಯಕಾರಿಣಿ ಸಭೆ
ಕಲಬುರಗಿ: ರಾಷ್ಟ್ರದ ಅಭಿವೃದ್ಧಿ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣದಲ್ಲಿ ಭಾರತೀಯತೆ ತರುವುದು ಅಗತ್ಯವಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಪ್ರೊ.ಬಸವರಾಜ ಡೊಣೂರ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ ಸಭೆಯಲ್ಲಿ ಮಾತನಾಡಿ, ಶಿಕ್ಷಣದಲ್ಲಿ ಭಾರತೀಯ ಸಂಸತಿ ಮತ್ತು ಪರಂಪರೆಯ ಅಸ್ಮಿತೆಯಿರಲಿ. ಪ್ರತಿ ಭಾರತೀಯ, ನಡೆ ನುಡಿಯಲ್ಲಿ ತನ್ನ ದೇಶದ ಜೀವನ ವಿಧಾನ ಅಳವಡಿಸಿಕೊಳ್ಳಬೇಕು ಎಂದರು.
ದೇಶದ ಸಾಂಸತಿಕ ವೈಭವವನ್ನು ಎತ್ತಿ ಹಿಡಿಯಬೇಕು. ದೇಶದ ಅಭಿವೃದ್ಧಿ ದೃಷ್ಟಿಯಿಂದ ಪಾಲಕರು, ಶಿಕ್ಷಕರು ಮತ್ತು ಸಂಸ್ಥಾಚಾಲಕರು, ಸಾಮಾಜಿಕ ಸಂಘಟನೆಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಕೈಜೊಡಿಸೋಣ. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಲ್ಲಿನ ಪರೀಾ ಭಯ ಹೋಗಲಾಡಿಸಬೇಕು ಎಂದರು.
ಮಂಡಲ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಖಜೂರಿ ಮಾತನಾಡಿ, ಮಕ್ಕಳಿಗೆ ಮುಕ್ತ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕು. ವರ್ತಮಾನದ ಶೈಕ್ಷಣಿಕ ವ್ಯವಸ್ಥೆ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದೆ. ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಒತ್ತು ದೊರೆಯುತ್ತಿಲ್ಲ. ಶಿಕ್ಷಣದಲ್ಲಿ ಭಾರತೀಯ ತರುವುದೆಂದರೆ, ಸ್ಥಳಿಯ ಕಲೆ, ಸಂಗೀತ, ಸಾಹಿತ್ಯ, ಜಾನಪದ, ಭಾರತೀಯ ಯೋಗಮಯ ಜೀವನ ಶೈಲಿ ಪ್ರತಿಯೊಂದರಲ್ಲೂ ಇರಬೇಕು ಎಂದರು.
ಮಂಡಲ ಪ್ರಾಂತ ಸಹ ಕಾರ್ಯದರ್ಶಿ ಡಾ.ಪಲ್ಲವಿ ಪಾಟೀಲ್​ ಸೇಡಂ ಮಾತಾನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು, ಶಿಕ್ಷಕ ವಿಷಯ ಶಿಕ್ಷಕನಾಗದೆ, ಗುರುವಾಗಬೇಕು. ಪಾಲಕರು ಅಂಕಪಟ್ಟಿಗೆ ಆದ್ಯತೆ ನೀಡಿದ್ದರಿಂದ ಶಿಕ್ಷಣ ಜೈಲಿನಂತೆ ಭಾಸವಾಗುತ್ತಿದೆ. ಆಟದ ಜತೆಗೆ ಪಾಠವಿರಲಿ, ದೇಶ ಕ್ರೀಡೆಗಳಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಮಂಡಲ ಕರ್ನಾಟಕ ಉತ್ತರ ಪ್ರಾಂತದ ಅನುಸಂಧಾನ ಗತಿವಿಧಿ ಪ್ರಾಂತ ಪ್ರಮುಖರಾದ ಪ್ರೊ.ರವೀಂದ್ರ ಹೆಡಗಿ, ಜಿಲ್ಲಾ ಉಪಾಧ್ಯಕ್ಷೆ ಡಾ.ಲಕ್ಷಿ$್ಮ ಪಾಟೀಲ್​ ಮಾಕಾ, ಜಿಲ್ಲಾ ಉಪಾಧ್ಯಕ್ಷ ಡಾ.ಉದಯ ಪಾಟೀಲ್​, ಡಾ.ಮಹೇಶ ತನವಾಡೆ, ಡಾ.ಬಾಲಾಜಿ ಬಿರಾದಾರ, ನಿಶಾ ಜೋಶಿ, ಸಂಗಣ್ಣ ಕೆ., ಡಾ.ನಾಗಬಸವಣ್ಣ ಗುರಾಗೋಳ, ಪ್ರೊ.ಭಾರತಿ ಹರಸೂರ, ಪ್ರೊ.ಸುವರ್ಣಾ ನಂದ್ಯಾಳ, ಡಾ.ಜಗದೀಶ ಬಿರಾದಾರ, ಶಶಿಕಲಾ ಬಿ.ಎಸ್​., ಮಳಯ್ಯ ಹಿರೇಮಠ, ಡಾ. ವಿಜಯಕುಮಾರ ಇತರರಿದ್ದರು.
ಪ್ರಾಂತ ವಿದ್ಯಾಲಯ ಗತಿವಿಧಿ ಪ್ರಮುಖ ಶರಣು ಉದನೂರ ನಿರೂಪಣೆ ಮಾಡಿದರು. ಡಾ.ಶರಭಯ್ಯ ಸ್ವಾಮಿ ಪರಿಚಯಸಿ, ಸ್ವಾಗತಿಸಿದರು. ಡಾ.ಉದಯ ಪಾಟೀಲ್​ ವಂದಿಸಿದರು.