ಕಲಬುರಗಿ ಶರಣಬಸವೇಶ್ವರ ಅಪ್ಪನ ಕೆರೆ ಬಳಿ ಭಾನುವಾರ ಆಯೋಜಿಸಿದ್ದ ಫಲ-ಪುಷ್ಪ ಪ್ರದರ್ಶನದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಿಇಒ ಭಂವರ್‌ಸಿAಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಮದಾರ್, ಹಿರಿಯ ವಿಜ್ಞಾನಿ ಡಾ.ರಾಜು ತೆಗ್ಗೆಳ್ಳಿ, ರೈತ ಲಚ್ಚಪ್ಪ ಜಮಾದಾರ್ ಇತರರಿದ್ದರು.
- ಅಪ್ಪ ಕೆರೆಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ
- ಎಂಎಲ್‌ಸಿ ಜಗದೇವ ಗುತ್ತೇದಾರ್ ಚಾಲನೆ
ಕಲಬುರಗಿ: ನಗರದ ಶರಣಬಸವೇಶ್ವರರ ಕೆರೆ ಉದ್ಯಾನವನ ಆವರಣದಲ್ಲಿ ಭಾನುವಾರ ಎರಡು ದಿನಗಳ ಫಲಪುಷ್ಟ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದ್ದು, ಸುಮಾರು ೧.೫೦ ಲP್ಷÀ ಹೂವುಗಳಿಂದ ಆಲಂಕರಿಸಿದ ಭಾರತದ ಸಂವಿಧಾನ ಪ್ರತಿಕೃತಿ ಪ್ರಮುಖ ಅಕರ್ಷಣೀಯವಾಗಿ ಕಂಡುಬAತು.
ಕಲಬುರಗಿ ಜಿ¯್ಲÁಡಳಿತ, ಜಿ¯್ಲÁ ಪಂಚಾಯಿತಿ, ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಜೈ ಶ್ರೀಕೃಷ್ಣ ಇವೆಂಟ್ಸï ಹೂ ನಿರ್ಮಾಣ ವಿನ್ಯಾಸಕ ಕೆ.ಜಗದೀಶ ಅವರ ಕಲಾಕೃತಿಯಲ್ಲಿ ಮೂಡಿಬಂದಿರುವ ಭಾರತೀಯ ಸಂವಿಧಾನ ಪ್ರತಿಕೃತಿ ಅಲಂಕಾರಕ್ಕೆ ವಿವಿಧ ತಳಿಯ ಚೆಂಡು, ಸೇವಂತಿಗೆ, ಚೈನಾ ಆಸ್ಟರ್, ಆಸ್ಪರಾಗಸ್ ಹಾಗೂ ವಿವಿಧ ಅಲಕಂಕಾರಿಕ ಸುಮಾರು ೧.೫೦ ಲP್ಷÀ ಹೂವು ಬಳಸಿದ್ದು, ಇದು ವೀP್ಷÀಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ತರಕಾರಿಯಲ್ಲಿ ಪ್ರವಾಸಿತಾಣ: ಭಾರತ ಸಂವಿಧಾನ ಪ್ರತಿಕೃತಿಯ ಕಲಾಕೃತಿ ಸುಂದರವಾಗಿ ಕಾಣಲು ಸುತ್ತಲು ವಿವಿಧ ತರಕಾರಿಗಳಾದ ಕಲ್ಲಂಗಡಿ, ಬದನೆಕಾಯಿ, ಸೋರೆಕಾಯಿ, ಗಜರಿ, ಸವತೆಕಾಯಿ, ಕ್ಯಾಪ್ಸಿಕಂ ಹಾಗೂ ಇತರೆ ತರಕಾರಿ ಬಳಸಲಾಗಿದೆ. ತರಕಾರಿಯಲ್ಲಿ ಕೆತ್ತನೆ ಮಾಡಿ ಕಲಬುರಗಿಯ ಪ್ರಮುಖ ಪ್ರವಾಸಿ ಕೇಂದ್ರಗಳಾದ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇನವಾಜï ದರ್ಗಾ, ಕಲಬುರಗಿ ಕೋಟೆ, ಬುದ್ಧ ವಿಹಾರ ಮೂಡಿ ಬಂದಿರುವುದು ಸ್ಥಳೀಯರಿಗೆ ಇದು ಮತ್ತಷ್ಟು ಹತ್ತಿರವಾಗಿ ಕಂಡಿತು.
ತೋಟಗಾರಿಕೆ ಇಲಾಖೆಯ ಮಹಿಳಾ ಸಿಬ್ಬಂದಿ ಸಿದ್ಧಪಡಿಸಲಾದ ತರಕಾರಿ ರಂಗೋಲಿ ಮತ್ತು ಸೆಲ್ಫಿ ಪಾಯಿಂಟ್ ಪ್ರಮುಖ ಆಕರ್ಷಣೆಗಳ¯್ಲೆÆಂದಾಗಿದೆ. ಮಹಿಳಾ ಸಿಬ್ಬಂದಿಯ ಪರಿಶ್ರಮ ಕಂಡ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮï ಮತ್ತು ಡಿಸಿ ಬಿ.ಫೌಜಿಯಾ ತರನ್ನುಮï ಶ್ಲಾಘಿಸಿದರು.
ಕಲಬುರಗಿ ಜಿ¯್ಲÉಯ ಎ¯್ಲÁ ತಾಲೂಕಿನಿಂದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ರೈತರು ಬೆಳೆದ ವಿವಿಧ ತಳಿಯ ಹಣ್ಣು, ತರಕಾರಿ, ಹೂವು ಬೆಳೆಗಳ ಉತ್ಪನ್ನ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿಶೇಷವಾಗಿ ಅಫಜಲಪೂರ ತಾಲೂಕಿನ ಲಚ್ಚಪ್ಪಾ ಜಮಾದಾರ್ ಕ್ಯಾಲಿಫೋರ್ನಿಯಾ ಕ್ವೀನ್ ಬೆರ್ರಿ, ಚಿಂಚೋಳಿ ತಾಲ್ಲೂಕಿನ ಪುದಿನಾ ಮತ್ತು ಪೈನಾಪಲï, ಕಲಬುರಗಿ ತಾಲೂಕಿನ ಅಣಬೆ ಮತ್ತು ತಾಳೆಬೆಳೆ, ಆಳಂದ ತಾಲೂಕಿನ ಬಾಳೆ ಪಪ್ಪಾಯ ಇತರೆ ಅನೇಕ ಬೆಳೆಗಳು ಒಳಗೊಂಡAತೆ ೫೦೦ ಕ್ಕೂ ಹೆಚ್ಚು ಪ್ರದರ್ಶಿಕೆಗಳನ್ನು ಸಾರ್ವಜನಿಕರ ವೀP್ಷÀಣೆಗೆ ಅವಕಾಶ ಮಾಡಿಕೊಡಲಾಗಿದೆ.
ಕಲ್ಲಂಗಡಿಯಲ್ಲಿ ಅರಳಿದ ನಾಯಕರು: ಕಲ್ಲಂಗಡಿಯಲ್ಲಿ ರಾಷ್ಟಪಿತ ಮಹಾತ್ಮ ಗಾಂಧಿ, e್ಞÁನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೆ, ಸ್ವಾತಂತ್ರö್ಯ ಹೋರಾಟಗಾರರಾದ ಭಗತಸಿಂಗ್, ಝಾನ್ಸಿ ರಾಣಿ ಲಕ್ಷಿö್ಮÃಬಾಯಿ, ಚಂದ್ರಶೇಖರ ಆಝಾದ್, ಸಂಗೊಳ್ಳಿ ರಾಯಣ್ಣ, ಸುಭಾಷಚಂದ್ರ ಭೋಸ್, ಲಾಲï ಬಹದ್ದೂರ್ ಶಾಸ್ತಿç, ಕಿತ್ತೂರ ರಾಣಿ ಚೆನ್ನಮ್ಮ ಹೀಗೆ ಅನೇಕರ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿದವು. ಹುಬ್ಬಳ್ಳಿಯ ಇಸ್ಮಾಯಿಲï ಅವರ ಕಲಾ ಕುಂಚದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮೂಡಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಜಿ¯್ಲÉಯ ರೈತರಿಂದ ಗ್ರಾಹಕರಿಗೆ ನೇರವಾಗಿ ಹಣ್ಣು ಮತ್ತು ತರಕಾರಿ ಹಾಗೂ ಸಂಸ್ಕರಣಾ ಉತ್ಪನ್ನ ಮಾರಾಟಕ್ಕಾಗಿ ಇಲ್ಲಿ ವ್ಯವ್ಯಸ್ಥೆ ಕಲ್ಪಿಸಲಾಗಿದೆ. ಅಫಜಲಪೂರ ದ್ರಾಕ್ಷಿ ಬೆಳೆಗಾರರಾದ ಜಯಪ್ಪ ಕೊರಬು, ರೇವಣಸಿದ್ದಪ್ಪ ಹಾಳಕಿ, ಅರವಿಂದ ಹಾಳಕಿ ಅವರು ದ್ರಾಕ್ಷಿ ಮತ್ತು ಸಾವಯವ ಉತ್ಪನ್ನಗಳು, ಬಾಪುಗೌಡ ಬಿರಾದಾರ ಗುಡ್ಡೆವಾಡಿ ಅವರು ಬಾಳೆಯಿಂದ ತಯಾರಿಸಿದ ಚಿಪ್ಸ್, ಹಣಮಂತಪ್ಪ ಬೆಳಗುಂಪಿ ಅವರು ಸಾವಯವ ತೋಟಗಾರಿಕೆ ಉತ್ಪನ್ನಗಳು, ಲಕ್ಷೀಕಾಂತ ಹಿಬಾರೆ ಸಾವಯವ ಅರಶೀಣ ಮತ್ತು ಇತರೆ ಉತ್ಪನ್ನಗಳು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ರz್ದÉÃವಾಡಗಿ ಕೃಷಿ ವಿe್ಞÁನ ಕೇಂದ್ರದಿAದ ತಾರಸಿ ಮತ್ತು ಕೈ ತೋಟದ ಬೀಜಗಳ ಕಿಟ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಫಲಪುಷ್ಪ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ತೋಟಗಾರಿಕೆ ಇಲಾಖೆ ತುಂಬಾ ಪರಿಶ್ರಮ ಹಾಕಿ ಒಳ್ಳೆಯ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇದು ರೈತಾಪಿ ವರ್ಗದವರಿಗೆ ತುಂಬಾ ಅನುಕೂಲವಾಗಿದೆ. ತರಕಾರಿ, ಹಣ್ಣು ಬೆಳೆಯಲು ಹೊಸ ತಳಿ, ಪ್ರಯೋಗ ಕುರಿತು ಅವರಿಗೆ ಜಾಗೃತಿ ಮೂಡಿಸಲು ಸ್ಟಾಲï ಸಹ ಹಾಕಿz್ದÁರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯಬೇಕು. ಬೆಂಗಳೂರು, ಮೈಸೂರಿನಲ್ಲಿ ಇಂತಹ ಪ್ರದರ್ಶನ ಕಾಣಲು ಸಿಗುತ್ತಿತು. ಇದೀಗ ಕಲಬುರಗಿಯಲ್ಲಿಯೆ ಪ್ರದರ್ಶಕ್ಕೆ ವ್ಯವಸ್ಥೆ ಮಾಡಿದ್ದು ಸಂತಸ ತಂದಿದೆ ಎಂದರು.
ವೀಕ್ಷಿಸಲು ಡಿ.ಸಿ., ಆರ್.ಸಿ. ಮನವಿ
ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮï ಮಾತನಾಡಿ, ಎರಡು ದಿನ ಫಲಪುಷ್ಪ ಪ್ರದರ್ಶನ ಸರ್ವರಿಗೂ ಉಚಿತವಾಗಿದೆ. ವಿಶೇಷವಾಗಿ ನಗರದ ನಿವಾಸಿಗಳು ಶಾಲಾ ಮಕ್ಕಳು ಭೇಟಿ ನೀಡಿ ತರಕಾರಿ-ಹಣ್ಣುಗಳಲ್ಲಿ ಮೂಡಿಬಂದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು ಎಂದರು. ಡಿ.ಸಿ. ಬಿ.ಫೌಜಿಯಾ ತರನ್ನುಮï ಮಾತನಾಡಿದರು. ಜಿ¯್ಲÁ ಪಂಚಾಯಿತಿ ಸಿಇಒ ಭಂವರಸಿAಖಗ್ ಮೀನಾ, ಜಿ¯್ಲÁ ಕೃಷಿ ಸಮಾಜದ ಅಧ್ಯP್ಷÀ ಸಿದ್ರಾಮಪ್ಪಾ ಪಾಟೀಲ ಧಂಗಾಪೂರ, ಜಿ¯್ಲÁ ಹಾಪ್‌ಕಾಮ್ಸï ಅಧ್ಯP್ಷÀ ಮಲ್ಲಿಕಾರ್ಜುನ ಭೂಶಟ್ಟಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ಬಾಬುರಾವ ಪಾಟೀಲ, ಸುರೇಂದ್ರನಾಥ, ಶಂಕರಗೌಡ, ಸಂತೋಷ ತಾಂಡುರ, ರಾಜಕುಮಾರ, ಎಂ.ಡಿ ಸಮಿಯೋದ್ದಿನ್, ಅಜಿಮೋದ್ದಿನ್, ಶಂಕರ ಪಟವಾರಿ, ವೆಂಕಟ ಸಜ್ಜನ ಸೇರಿದಂತೆ ತೋಟಗಾರಿಕೆ ಇಲಾಖೆಯ ಇನ್ನಿತರ ಅಧಿಕಾರಿ-ಸಿಬ್ಬಂದಿ ಹಾಜರಿದ್ದರು.
ಮೂರು ವರ್ಷಗಳ ನಂತರ ಸಂವಿಧಾನ ವಿಷಯಾಧಾರಿತ ಕೇಂದ್ರಿತವಾಗಿ ಎರಡು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಸ್ವಾತಂತ್ರö್ಯ ಹೋರಾಟಗಾರರು, ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಎಲ್ಲವು ಕಲಾವಿದನ ಕೆತ್ತನೆಯಲ್ಲಿ ಮೂಡಿಬಂದಿವೆ. ಅದ್ಭುತ ಪ್ರದರ್ಶನ ಇದಾಗಿದೆ. ಶಾಲಾ ಮಕ್ಕಳು, ಯುವಕರು ಬಂದು ವೀಕ್ಷಿಸಬೇಕು.
ಬಿ.ಫೌಜಿಯಾ ತರನ್ನುಮ್,ಜಿಲ್ಲಾಧಿಕಾರಿ, ಕಲಬುರಗಿ.