ಕಲಬುರಗಿ: ನಗರದಲ್ಲಿ ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಳದಿಂದ ೧೨ನೇ ರ‍್ಷದ ಬೃಹತ್ ಕಾರ್ ರ‍್ಯಾಲಿ ಭಾನುವಾರ ಅದ್ದೂರಿಯಾಗಿ, ಸಡಗರ ಸಂಭ್ರಮದಿಂದ ನಡೆಯಿತು. ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಡಾ.ದೊಡ್ಡಪ್ಪ ಅಪ್ಪ ಚಾಲನೆ ನೀಡಿದರು. ೮೦೦ಕ್ಕೂ ಹೆಚ್ಚು ಕಾರ್ಗಳು, ಜಿಪ್ಸಿಗಳು ಭಾಗವಹಿಸಿದ್ದವು.
ಶರಣಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರ‍್ಯಾಲಿಯೂ ಆನಂದ ಹೊಟೇಲ್ ವೃತ್ತ, ರ‍್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಅನ್ನಪರ‍್ಣ ವೃತ್ತ ಮರ‍್ಗವಾಗಿ ಜಗತ್ ವೃತ್ತ ತಲುಪಿತು. ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲರ‍್ಪಣೆ ಮಾಡುವ ಮೂಲಕ ರ‍್ಯಾಲಿ ಸಂಪನ್ನಗೊಂಡಿತು. ಬಸವ ಮಿತ್ರ ಮಂಡಳದ ಷಟಸ್ಥಲದ ಚಿತ್ರ ಇರುವ, ಬಸವಣ್ಣನವರ ಭಾವಚಿತ್ರ ಇರುವ ಧ್ವಜಗಳನ್ನು, ಪೋಸ್ಟರ್ಗಳನ್ನು ಅಳವಡಿಸಿದ ಕಾರ್ಗಳಲ್ಲಿ ಕುಳಿತ ಯುವಕರು ಬಸವೇಶ್ವರರಿಗೆ ಜೈಕಾರ ಮೊಳಗಿಸಿದರು.