ಕಲಬುರಗಿ: ಎರಡು ಕೆಎಸ್ಆರ್ಟಿಸಿ ಬಸ್ಗಳು ಮುಖಾಮುಖಿ ಹಾಗೂ ಬಸ್ಗೆ ಹಿಂಬದಿಯಿಂದ ಕಾರ್ ಗುದ್ದಿರುವ ಭೀಕರ ಸರಣಿ ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಟನೆ ಕಮಲಾಪುರ ತಾಲೂಕಿನ ಶನಿವಾರ ರಾತ್ರಿ ನಡೆದಿದೆ.
ಕಲಬುರಗಿಯಿಂದ ಬೀದರ್ಗೆ ಹೊರಟಿದ್ದ ಸಾರಿಗೆ ಬಸ್ ಹಾಗೂ ಬೀದರ್ನಿಂದ ದಾವಣಗೆರೆಗೆ (ಕಲಬುರಗಿ)ಯತ್ತ ಹೊರಟ್ಟಿದ್ದ ನಾನ್ ಎಸಿ ಸ್ಲಿಪರ್ ಬಸ್ಗೆ ಮಧ್ಯೆ ಡೊಂಗರಗಾಂವ್ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಗಳ ಹಿಂಬದಿಯಲ್ಲಿದ್ದ ಕಾರು ಸಹ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕ ಹೊಡೆದಿದ್ದು, ಸರಣಿ ಅಪಘಾತ ಸಂಭವಿಸಿದೆ.
ಕೆಎಸ್ಆರ್ಟಿಸಿ ಬಸ್ ಚಾಲಕ ಸ್ಥಳದಲ್ಲೆ ತುಕಾರಾಮ್(46) ಸ್ಥಳದಲ್ಲಿ ಮೃತಪಟ್ಟಿದ್ದು, ಎರಡೂ ಬಸ್ಗಳಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದವರು ಸೇರಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಮಾಹಿತಿ ಇದೆ. ಗಾಯಾಳುಗಳನ್ನು ತಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಮಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.