ಚಿಂಚೋಳಿ: ಕ್ಷೇತ್ರದ ರೈತರ ಅನುಕೂಲಕ್ಕಾಗಿ ಸಿದ್ಧಸಿರಿ ಎಥನಾಲ್ ಹಾಗೂ ಪವರ್ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ರೈತಪರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ರೈತ ಸಂಟನೆಗಳ ಒಕ್ಕೂಟದಿಂದ ಬಸ್ ನಿಲ್ದಾಣದ ಎದುರಿನ ಚಿಂಚೋಳಿ-&ವನ್ಮಾರಪಳ್ಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಲಾಯಿತು.
ರೈತಪರ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಅಬ್ದುಲ್ ಬಾಸೀದ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಲು ಅನುಮತಿ ನೀಡಬೇಕು. ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಿ, ಕಬ್ಬು ಪೂರೈಸಿದ 14 ದಿನಗಳಲ್ಲಿ ಖಾತೆಗೆ ಹಣ ಜಮೆ ಮಾಡಬೇಕು. ಕಬ್ಬು ಸಾಗಿಸುವ ಚಾಲಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರೇಡ್& 2 ತಹಸೀಲ್ದಾರ್ ರಾವೇಂದ್ರ ಕುಲಕರ್ಣಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮಖರಾದ ಲಕ್ಷ$್ಮಣ ಅವಂಟಿ, ಶಿವಾನಂದ ಮಾಲಿಪಾಟೀಲ್, ಗೋಪಾಲ ಎಂ.ಪಿ., ಶಿವರಾಜ ಪಾಟೀಲ್, ಸುರೇಶ ಭಂಟಾ, ಗಣಪತರಾವ, ಮಲ್ಲಿಕಾರ್ಜುನ ಬುಶೆಟ್ಟಿ, ನಾಗೇಶ ಗುಣಾಜಿ, ಜಗನ್ನಾಥ ಗುತ್ತೇದಾರ್, ಶಂಕರ ಪವಾರ್, ಗುಂಡಯ್ಯ ಸ್ವಾಮಿ, ಜನಾರ್ಧನ ಪಾಟೀಲ್, ಮಧುಕರರಾವ ಶಾದಿಪುರ, ಜಗದೇವ ಗೌತಮ, ಖಲೀಲ್ ಪಟೇಲ್, ವಿಜಯಕುಮಾರ ಗಂಗನಪಳ್ಳಿ, ಗೋವಿಂದ ರಾಠೋಡ, ವಿಶ್ವನಾಥ ಹೋಡೆಬೀರನಳ್ಳಿ, ಸುರೇಶ ದೇಶಪಾಂಡೆ, ನಾರಾಯಣ ಗುಣಾಜಿ, ಮಹ್ಮದ್ ಶಬ್ಬೀರ್, ವೀರಶೆಟ್ಟಿ ನಾರಾ, ಮಹಾದೇವ ಜಿಲ್ವರ್ಶಾ, ಮೈನೋದ್ದಿನ ಹತ್ತಿವಾಲೆ ಇತರರಿದ್ದರು.