ಮಣ್ಣೂರಿನ ಉತ್ತರಾದಿ ಮಠದಲ್ಲಿ ಶ್ರೀ ವೇದೇಶ ತೀರ್ಥರ ಮಧ್ಯಾರಾಧನೆ ನಿಮಿತ್ತ ಸಂಭ್ರಮದಿಂದ ರಥೋತ್ಸವ ನಡೆಯಿತು. 
ಕಲಬುರಗಿ

ಮಣ್ಣೂರಿನಲ್ಲಿ ಶ್ರೀ ವೇದೇಶತೀರ್ಥರ ಆರಾಧನೆ ವೈಭವ

ಕರಜಗಿ: ಮಣ್ಣೂರಿನ ಉತ್ತರಾದಿ ಮಠದಲ್ಲಿ ಶ್ರೀ ವೇದೇಶತೀರ್ಥರ ಮಧ್ಯಾರಾಧನೆ ಭಾನುವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ, ವೇದೇಶತೀರ್ಥ ವಿದ್ಯಾಪಿಠದ ವಿದ್ಯಾರ್ಥಿಗಳಿಂದ ಶಾಸಾನುವಾದ, ಪಂಡಿತರ ಸಮ್ಮುಖದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಿತು. ಬಳಿಕ ಭಕ್ತರ ಜೈೂಷದೊಂದಿಗೆ ಸಂಭ್ರಮದಿಂದ ರಥೋತ್ಸವ ಜರುಗಿತು. ಗುರು ಸಾರ್ವಭೌಮ ಭಜನಾ ಮಂಡಳಿ, ಕೃಷ್ಣ ದ್ವೆಪಾಯನಾಚಾರ್ಯ ಭಜನಾ ಮಂಡಳಿ, ವೇದೇಶತೀರ್ಥ ಭಜನಾ ಮಂಡಳಿ ಸದಸ್ಯರಿಂದ ಭಜನೆ ಜರುಗಿತು. ನಂತರ ಶ್ರೀ ವೇದೇಶತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿತು. ಪಂ.ಮಧ್ವಾಚಾರ್ಯ ಮೊಕಾಶಿ, ಪಂ.ರೂತ್ತಮಾಚಾರ್ಯ ನಾಗಸಂಪಿಗೆ, ಪಂ.ಗುರುಮಧ್ವಾಚಾರ್ಯ ನವಲಿ, ಅನಂತಾಚಾರ್ಯ ಅಕಮಂಚಿ, ಸರ್ವೇಶಾಚಾರ್ಯ ಅಕಮಂಚಿ ಅವರಿಂದ ಉಪನ್ಯಾಸ ನಡೆಯಿತು. ಕೇಶವಾಚಾರ್ಯ ಪೂಜಾರಿ, ಉಡುಪಿ ಆಚಾರ್ಯ ಪೂಜಾರಿ, ಕೃಷ್ಣಾಚಾರ್ಯ ಜೋಶಿ, ನಾರಾಯಣಾಚಾರ್ಯ ಜೋಶಿ, ನರಸಿಂಹಾಚಾರ್ಯ ಅಕಮಂಚಿ, ವರದರಾಜ ಅಕಮಂಚಿ, ಸೇತುಮಾಧವ ಅವಧಾನಿ, ಜಯಾಚಾರ್ಯ ಜೋಶಿ, ಲಕ್ಷ್ಮಿಕಾಂತರಾವ ಕಮಲಾಪುರ, ಶ್ರೀಕಾಂತ ಕಮಲಾಪುರ, ಮಹಿದಾಸ ಅಕಮಂಚಿ, ಮಹಿಪತಿ ವೈದ್ಯ, ಬಾಬಾಸಾಹೇಬ ಕುಲಕರ್ಣಿ, ರಾಮಮೂರ್ತಿ ಜೋಶಿ, ಕೃಷ್ಣಾಚಾರ್ಯ ಆದ್ಯ, ಮಧ್ವಾಚಾರ್ಯ ಜಹಾಗಿರದಾರ, ಅಶೋಕ ಕುಲಕರ್ಣಿ, ಸಂತೋಷ ಕುಲಕರ್ಣಿ, ರಾವಾಚಾರ್ಯ ಜೋಶಿ ಇತರರಿದ್ದರು.