Gold shop robbers arrested 
ಕಲಬುರಗಿ

ಬಂಗಾರದಂಗಡಿ ಕಳ್ಳಿಯರು ಅರೆಸ್ಟ್​

ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟದಲ್ಲಿ ರಾಮಾಚಾರಿ ಮಾರೋಜ ಅವರ ಬಂಗಾರದಂಗಡಿಯಲ್ಲಿ ಗಮನ ಬೇರೆಡೆ ಸೆಳೆದು ಬೆಳ್ಳಿ ಆಭರಣ ಕಳ್ಳತನ ಮಾಡಿದ ಇಬ್ಬರು ಕಳ್ಳಿಯರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಬೀದರ್​ನ ಚಿದ್ರಿ ಬಂದೇನವಾಜ್​ ಕಾಲನಿಯ ಸಲ್ಮಾಬೇಗಂ ಸೈಯದ್​ ಮುಸ್ತಾಕಿನ್​, ಶನ್ನು ಬೇಗಂ ಜಹಾಂಗೀರ ಷಾ ಬಂಧಿತ ಕಳ್ಳಿಯರು. ಬಂಧಿತರಿಂದ ೧ ಲಕ್ಷ ರೂ. ಮೌಲ್ಯದ ೩೦೦ ಗ್ರಾಂ ಬೆಳ್ಳಿ ಚೈನ್​, ೬೦ ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಬುರುಕಾ ಹಾಕಿಕೊಂಡು ಬಂದು ಬಂಗಾರದಂಗಡಿಯಲ್ಲಿ ಮಾಲಿಕನ ಗಮನ ಬೇರೆಡೆ ಸೆಳೆದು ೪೦೦ ಗ್ರಾಂ ತೂಕದ ಬೆಳ್ಳಿ ಚೈನ್​ಗಳನ್ನು ಕಳ್ಳತನ ಮಾಡಿದ್ದರು. ಸಿಸಿ ಕ್ಯಾಮೆರಾದಲ್ಲಿ ಕಳ್ಳತನ ದೃಶ್ಯ ಸೆರೆಯಾಗಿತ್ತು. ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಡಿವೈಎಸ್​ಪಿ ಸಂಗಮನಾಥ ಹಿರೇಮಠ ಮರ‍್ಗರ‍್ಶನದಲ್ಲಿ ಸಿಪಿಐ ಕೃಷ್ಣಕುಮಾರ ಪಾಟೀಲ್​ ನೇತೃತ್ವದಲ್ಲಿ ಪಿಎಸ್​ಐ ಅಮರ ಕುಲ್ರ‍್ಣಿ, ಪಿಎಸ್​ಐ ಶಿವಶಂಕರ ಸುಬೇದಾರ, ಸಿಬ್ಬಂದಿ ಮೋಹನರೆಡ್ಡಿ, ಸದ್ದಾಂ, ಸುರೇಶ ಕಟ್ಟಿಮನಿ, ಅನೀಲ ಉಳ್ಳಾಗಡ್ಡಿ, ಸವಿತಾ ಅವರ ತಂಡ ಕರ‍್ಯಾಚರಣೆ ನಡೆಸಿ, ನಿಡಗುಂದಾ ಬಳಿ ಬಂಧಿಸಿದೆ ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಕಳ್ಳತನ ಮಾಡಿದ್ದು, ಸೇಡಂ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಹೊರಟ್ಟಿದ್ದರು. ಇಬ್ಬರು ಪರಸ್ಪರ ಸಂಬಂಧಿಕರಾಗಿದ್ದರು ಎಂದು ತಿಳಿಸಿದರು.