ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿ ಸರ್ಕಾರಿ ಟ್ರಾಮಾ ಕೇರ್ ಎದುರು ಕಾರ್ನಿಂದ ಹೊರ ಬಂದು ೋನ್ನಲ್ಲಿ ಮಾತನಾಡುತ್ತ ನಿಂತ್ತಿದ್ದ ವ್ಯಕ್ತಿಯ ಕೊರಳಲ್ಲಿದ್ದ ಚೈನ್ ನ್ನು ಕಿತ್ತುಕೊಂಡು ಹೋದ ಟನೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ನಗರದ ಖೂಬಾ ಪ್ಲಾಟ್ ನಿವಾಸಿ, ಜೈಪೂರ ಮೂಲದ ವಿಮಾನ ಪೈಲೆಟ್ ಇನ್ಸ್ಪೆಕ್ಟರ್ ಸ್ಪರ್ಶ ಗೌತಮ್ ದರೋಡೆಗೆ ಒಳಗಾದವರು.
ರಜೆ ಹಿನ್ನೆಲೆಯಲ್ಲಿ ಜೈಪುರಕ್ಕೆ ಹೋಗಿ ಹೈದರಾಬಾದ್ನಿಂದ ನಗರಕ್ಕೆ ಕಾರ್ ಮೂಲಕ ಆಗಮಿಸಿದ್ದು, ಮಾರ್ಗ ಮಧ್ಯೆ ನಗರದ ಹೃದಯ ಭಾಗದಲ್ಲಿರುವ ಟ್ರಾಮಾ ಕೇರ್ ಸೆಂಟರ್ ಎದುರು ಕಾರ್ನಿಂದ ಇಳಿದು, ೋನ್ನಲ್ಲಿ ಮಾತನಾಡುತ್ತ ನಿಂತ್ತಿದ್ದಾರೆ. ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು, ಚಾಕು ತೋರಿಸಿ "ತುಮಾರಾ ಪಾಸ್ ಕ್ಯಾ ಕ್ಯಾ ಹೈ ದೇವ್, ನಹಿ ತೋ ಮಾರತು ದೇಖ್' ಅಂತ ಬೆದರಿಕೆ ಒಡ್ಡಿದ್ದಾರೆ. ಈ ಮಧ್ಯೆ ಬೈಕ್ ಮೇಲೆ ಹಿಂದೆ ಕುಳಿತ ವ್ಯಕ್ತಿ ಕೊರಳಲ್ಲಿದ್ದ 2.90 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನದ ಚೈನ್ ಎಳೆದುಕೊಂಡು, ಓಡಿ ಹೋಗಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಾರದಲ್ಲೇ ಎರಡನೇ ಟನೆ: ನಗರದ ಜೇವರ್ಗಿ ಕಾಲನಿಯ ದತ್ತ ನಗರದ ಮಹಿಳೆಯೊಬ್ಬರ ಕೊರಳಲ್ಲಿನ ಚೈನ್ ಕಸಿದುಕೊಂಡು ಹೋದ ಟನೆ ನಡೆದ ಮೂರ್ನಾಲ್ಕು ದಿನದಲ್ಲೇ ಮತ್ತೊಂದು ಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.