ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು 2.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಟನೆ ಕರುಣೇಶ್ವರ ನಗರದ ಬೃಂದಾವನ ಲೇಔಟ್ನಲ್ಲಿ ನಡೆದಿದೆ. ರಾಜಶ್ರೀ ಸೊನ್ನದ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ರಾಜಶ್ರೀ ಸೊನ್ನದ ತವರು ಮನೆಗೆ ಹೋಗಿದ್ದು, ಪತಿ ಹರಿದ್ವಾರಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ನಡೆದಿದ್ದು, ಪಕ್ಕದ ಮನೆಯವರು ಕರೆ ಮಾಡಿ, ತಿಳಿಸಿದಾಗ ಕಳ್ಳತನ ನಡೆದಿದ್ದು ತಿಳಿದಿದೆ. ಮನೆಯಲ್ಲಿದ್ದ ಬಂಗಾರದ ಉಂಗುರ, ಬೆಳ್ಳಿ ಆರತಿ ಸೇರಿ 2.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದೆ ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.