ಕಲಬುರಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿದರು. ರಾಜಾ ಭೀಮಳ್ಳಿ, ಉದಯ ಚಿಂಚೋಳಿ, ಡಾ.ಕೈಲಾಶ ಪಾಟೀಲ್, ಅನಿಲ್ ಪಟ್ಟಣ, ಡಾ.ಶರಣಬಸಪ್ಪ ಹರವಾಳ, ಡಾ.ಸಿದ್ದರಾಮ ಪಾಟೀಲ್ ಇತರರಿದ್ದರು.
- ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆ
- ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಮಾಹಿತಿ
ಕಲಬುರಗಿ: ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.21, 22ರಂದು ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಣ ಸಂಸ್ಥೆ ಅಧ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಹೇಳಿದರು.
ಪಿಡಿಎ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕವಾಗಿ ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ತಮ್ಮ ತವರು ಕಾಲೇಜಿಗೆ ಮರಳಿ ಸಂತಸಪಡುವ ಮಹತ್ವದ ಕಾರ್ಯಕ್ರಮ ಇದಾಗಿದೆ. ಫೆ.21ರಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಸಾರ್ವಜನಿಕ ವಿತರಣೆ ಸಚಿವ ಪ್ರಲ್ಹಾದ್ ಜೋಶಿ ಸಮ್ಮಿಲನ ಉದ್ಘಾಟಿಸುವರು. ಸಣ್ಣ ಕೈಗರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಅರಣ್ಯ ಸಚಿವ ಈಶ್ವರ ಖಂಡ್ರೆ ಭಾಗವಹಿಸಲಿದ್ದಾರೆ. ಹೈದರಾಬಾದ್ ಪ್ರೀಮಿಯರ್ ಎನರ್ಜಿ ಸಂಸ್ಥಾಪಕ ಅಧ್ಯಕ್ಷ ಸುರೇಂದ್ರಪಾಲ್ ಸಿಂಗ್ ಸಲೂಜ ಮುಖ್ಯ ಅತಿಥಿಯಾಗಿದ್ದಾರೆ. ನಿವೃತ್ತ ಡಿಜಿಪಿ ರಾವೇಂದ್ರ ಔರಾದಕರ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ವಲ್ಲಾಪುರೆ, ಜಗದೇವ ಗುತ್ತೇದಾರ್, ಸಂಸ್ಥೆ ಆಡಳಿತ ಮಂಡಳಿ ಮಾಜಿ ಸದಸ್ಯ ವಿಜಯಕುಮಾರ ದೇಶಮುಖ ಗೌರವ ಅತಿಥಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಮೊದಲನೇ ದಿನ ಉದ್ಘಾಟನಾ ಸಮಾರಂಭ, ಒಡಂಬಡಿಕೆ ಪತ್ರಗಳ ಸಹಿ, ಸಾಧಕರಿಂದ ಉಪನ್ಯಾಸ, ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಂಸತಿಕ ಕಾರ್ಯಕ್ರಮ ಮತ್ತು ಔತಣಕೂಟ ನಡೆಯಲಿದೆ. ಎರಡನೇ ದಿನದ ಸಂಬಂಧಿತ ವಿಭಾಗಗಳಲ್ಲಿ ತಾಂತ್ರಿಕ ಉಪನ್ಯಾಸ, ಫೀಡ್ಬ್ಯಾಕ್ ಪ್ರತಿಕ್ರಿಯೆ, ಚರ್ಚೆ ಮತ್ತು ಸಮಾರೋಪ ನಡೆಯಲಿದೆ ಎಂದು ಹೇಳಿದರು.
ಉಪಾಧ್ಯ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಬಿ.ಪಾಟೀಲ್, ಪ್ರಮುಖರಾದ ಡಾ. ಶರಣಬಸಪ್ಪ ಹರವಾಳ್, ಡಾ.ಅನಿಲ್ ಪಟ್ಟಣ, ಸಂಪತ್ ಗಿಲ್ದಾ, ಡಾ.ಸಿದ್ದರಾಮ ಪಾಟೀಲ್, ಡಾ. ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ಡಾ.ದೇವ ಸುಧಾಕರ ಪಾಟೀಲ್, ಪ್ರೊ.ಶಿವಕುಮಾರ ಪಾಟೀಲ್, ಡಾ.ನಾಗೇಂದ್ರ ಎಚ್, ಡಾ.ಶ್ರೀದೇವಿ ಸೋಮ, ಡಾ.ಬಾಬುರಾವ ಶೇರಿಕಾರ್, ಡಾ.ನಾಗೇಶ ಸಾಲಿಮಠ, ಪ್ರೊ.ಅಶೋಕ ಪಾಟೀಲ್ ಇತರರಿದ್ದರು.
3000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ ನಿರೀಕ್ಷೆ
ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮ್ಮೇಳನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 2011 ಹಳೆ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 21ರಂದು ಸುಮಾರು 500ಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿಯೇ ನೋಂದಣಿ ಮಾಡುವ ನಿರೀೆ ಇದೆ. ಒಟ್ಟು 3000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಮೆರಿಕ, ದುಬೈ, ಯುಕೆ ಮತ್ತು ಆಸ್ಟ್ರೆಲಿಯಾದಂತಹ ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಪಿಡಿಎ ಹಳೆಯ ವಿದ್ಯಾರ್ಥಿಗಳ ಸಂಶೋಧನಾ ಮತ್ತು ತಾಂತ್ರಿಕ ಪಾರ್ಕ್, ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಎಕ್ಸಲೆನ್ಸ್ ಸೆಂಟರ್ ಶಂಕುಸ್ಥಾಪನೆ ನೆರವೇರಿಸುವುದಾಗಿದೆ ಇದರ ಉದ್ದೇಶವಾಗಿದೆ ಎಂದು ಶಶೀಲ್ ನಮೋಶಿ ತಿಳಿಸಿದರು.
.ನವೋದ್ಯಮ ಸ್ಟಾರ್ಟಪ್ ಮತ್ತು ಆರಂಭಿಕ ಹಂತದ ಉದ್ಯಮಗಳಿಗೆ ಬೆಂಬಲ ನೀಡಲು ಮೀಸಲಾದ ಇನ್ಕ್ಯೂಬೇಷನ್ ಕೇಂದ್ರ ಸ್ಥಾಪಿಸುವುದು. ತಾಂತ್ರಿಕ ಸಂಶೋಧನೆ ಹೆಚ್ಚಿಸಲು ಕೈಗಾರಿಕಾ ತರು ಮತ್ತು ಶಿಣ ಸಂಸ್ಥೆಯ ನಡುವೆ ಸಹಯೋಗ ಬೆಳೆಸುವುದು ಸಮ್ಮಿಲನದ ಮೂಲ ಉದ್ದೇಶ.